ನೀನಿನ್ನೂ ಅಪರಿಚಿತನೇನು….?

ಅನುವಾದಿತ ಕವಿತೆ

ನೀನಿನ್ನೂ ಅಪರಿಚಿತನೇನು….?

ಇಂಗ್ಲೀಷ್ ಮೂಲ-ವಿಜಯಲಕ್ಷ್ಮೀ ಪುಟ್ಟಿ

ಕನ್ನಡಕ್ಕೆ-ಸಮತಾ ಆರ್.

ನೀನಿನ್ನೂ ಅಪರಿಚಿತನೇನು….?

ಇತ್ತೀಚೆಗೆ ಯಾಕೋ
ನೀ ಅಪರಿಚಿತ ಅನಿಸತೊಡಗಿ
ಮತ್ತಿನ್ನೊಮ್ಮೆ ನಂಟು ಬೆಳೆಸಲು ಯತ್ನಿಸಿದರೂ
ಎದೆಯಲ್ಲಿ ಏನೋ
ಪ್ರಶ್ನೆಯೊಂದು
ತಡಕುತಿದೆ
ಏನಾಯಿತು?
ಯಾಕೀ ಕೋಪ?
ನನ್ನ ತಪ್ಪೇನು?
ಎದುರಾದಾಗ ಹೇಗೆ ದಿಟ್ಟಿಸಲಿ ನಿನ್ನ ಕಣ್ಣ ?

ಆದರೂ ಹೊಸ ಭರವಸೆ,
ಹೊಸ ಪಯಣ,
ಹೊಸ ಪ್ರಮಾಣ ಕಾಯುತಿರುವೆ
ಹೃದಯತುಂಬಿ ನಾ..
ಯಾರದೋ ಆಗಮನ
ಅರಿಯದ ತಳಮಳ ಗಲಿಬಿಲಿ ಸುಗಂಧವೊಂದು ಗಾಳಿಯಲಿ ತೇಲಿದಂತೆ ನಿನ್ನ ಸಾವಿರಾರು ನೆನಪುಗಳು.

ಇಂದೇನಿದು ನನ್ನಲ್ಲಿ,
ಯಾವತ್ತೂ ನಾನರಿಯದ ಈ ಚಡಪಡಿಕೆ.
ಹಿಂದೆಂದೂ ಇರದಿದ್ದ ಮನೋಕಾಮನೆ.
ಕಾತುರದ ಕಂಗಳು ಹುಡುಕುತ್ತಿವೆ ನಿನ್ನನ್ನೇ.
ಎನ್ನ ಜೀವನದ ಹೊತ್ತಿಗೆಯ ಚಿತ್ರಪಟವಾದ
ಅವನಿಗಾಗಿ ಮಾತ್ರ ಈ ಭಾವನೆ.

ನನಗಾಗಿಯೇ,ನನ್ನ ಸಹಚರ್ಯಕ್ಕಾಗಿಯೇ
ಸ್ವರ್ಗದಿಂದಿಳಿದು ಬಂದಂತಹ ಜಾಣ್ಮೆಯ ಮೂರ್ತಿ.
ಈ ರಾಗ ರಂಗಿನಲಿ,
ನನ್ನೆಡೆಗೆ ಬೀರುವ ಕಡೆಗಣ್ಣ ನೋಟ
ಮಂಜುಗಟ್ಟಿದ ನನ್ನ ತುಟಿಗಳಲ್ಲಿ
ನುಡಿಯದ ಭಾವಗಳು ನೂರು
ನನ್ನೆದೆಯ ಮಿಡಿತ ತಪ್ಪಿಸಿತೇ ನಿನಗಾಗಿ ಪದವೊಂದ..
ಹುಡುಕುತ್ತಿರುವೆ
ಇನ್ನೂ ಹುಡುಕುತ್ತಲೇ ಇರುವೆ..

***************

Are you still a stranger..

Feeling Unacquainted as strangers
Trying to build a bond again
But there’s a question lingers in my heart..
What happened
Why this wrath?what’s my folly?
How should I face you after we meet?

But Waiting for new hopes, new joynew promises,
A strange fragrance fills the air
With the coming of some one
For whom I waited with all my heart

What is this restlessness
I feel today
Never was I in this state of mind before..
Eyes eagerly searching for you
This feeling is for him alone
The one I pictured
In the book of my life..

Like an icon of intelligence
Descended from heaven
Has come only for me to favor me to assist me..

In this splendor
Stealing furtive glances at me
Caused
Unspoken words upon my frozen lips
Did my heart miss a word for you..
Searching..
Still searching..


5 thoughts on “ನೀನಿನ್ನೂ ಅಪರಿಚಿತನೇನು….?

Leave a Reply

Back To Top