ನೀ ಮೆಲ್ಲನೇ
ಇಲ್ಲವಾಗತೊಡಗುತ್ತೀಯ
ಮೂಲ-ಪಾಬ್ಲೋ ನೆರುಡ,
ಅನುವಾದ; ಸಮತಾ.ಆರ್
ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ,
ಹೊಸ ಊರುಗಳ ಸುತ್ತದಿದ್ದರೆ,
ಏನನ್ನೂ ಓದದಿದ್ದರೆ,
ಜೀವದಸ್ವರಗಳ ಆಲಿಸದಿದ್ದರೆ,
ನಿನ್ನ ನೀನು ಮೆಚ್ಚದಿದ್ದರೆ,
ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ,
ನಿನ್ನತನವ ನೀನು ಕೊಂದುಕೊಂಡರೆ,
ಬೇರೆಯವರ ನೆರವ ನಿರಾಕರಿಸಿದರೆ,
ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ,
ನಿನ್ನ ವ್ಯಸನಗಳ ದಾಸ ನೀನಾಗಿ ಹೋದರೆ,
ನಡೆದ ಹಾದಿಯಲ್ಲೇ ದಿನವೂ ನಡೆದರೆ,
ಹೊಸದಾರಿಯ ಹಿಡಿಯದಿದ್ದರೆ,
ಎಲ್ಲಾ ಬಣ್ಣಗಳ ಧರಿಸಿ ನಲಿಯದಿದ್ದರೆ,
ಇಲ್ಲವೇ,ನಿನ್ನ ಪರಿಚಿತರಲ್ಲದವರನ್ನೂ
ಮಾತನಾಡಿಸದೇ ಇದ್ದರೇ,
ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ,
ನಿನ್ನ ಕಣ್ಣ ಹೊಳಪು, ಎದೆಯ ಮಿಡಿತ ಹೆಚ್ಚಿಸುವ
ಪ್ರಕ್ಷುಬ್ಧ ಭಾವನೆಗಳ ತೀವ್ರವಾಗಿ ಮೋಹಿಸದಿದ್ದರೆ,
ನೀ ಮೆಲ್ಲನೇ ಇಲ್ಲವಾಗತೊಡಗುತ್ತೀಯ,
ನೆಮ್ಮದಿ ನೀಡದ ನಿನ್ನೊಲವು ,ವೃತ್ತಿಗಳ ತೊರೆದು,
ಬದುಕ ಬದಲಿಸದಿದ್ದರೆ,
ಸುರಕ್ಷಿತ ಅನಿಶ್ಚಿತತೆ ಮೀರಿ ಅಪಾಯಗಳ ಎದುರಿಸದಿದ್ದರೆ,ಕನಸೊಂದರ ಬೆನ್ನಟ್ಟದಿದ್ದರೆ,
ಬಾಳಿನಲ್ಲಿ ಒಮ್ಮೆಯಾದರೂ ಬುದ್ಧಿಮಾತುಗಳಿಗೆ
ಬೆನ್ನು ತೋರಿಸಿ ಓಡಿಹೋಗದಿದ್ದರೆ..
***************
ಒಳ್ಳೆಯ ಕವಿತೆಯೊಂದನ್ನ ಸಕಾಲದಲ್ಲಿ ಓದಿ ಮನಸು ಗರಿಗೆದರಿದಂತಾಯ್ತು….Thank you SAMATHA
True lines awesome both translation and original.,
Soooooooooper samatha
Very true lines
ನಿಜಾ..ಸಮತಾ..ಇದೆಲ್ಲಾ ಗೊತ್ತಿದ್ದೂ ಗೊತ್ತಿಲ್ಲದೆ ಇಲ್ಲವಾಗುತ್ಠಿದ್ದೇವು. ಮತ್ತೊಮ್ಮೆ ಗೊತ್ತು ಮಾಡಿದ್ದು ನಿಮ್ಮ ಸಮರ್ಥ ಅನುವಾದ..
ಜೀವನದ ಸತ್ಯವನ್ನು ಕೆಲವೇ ಪದಗಳಲ್ಲಿ ತಿಳಿಸಿದ ನಿಮಗೆ ಧನ್ಯವಾದಗಳು