ಅನುವಾದಿತ ಕವಿತೆ
ಪ್ರೀತಿಯೇ ಎಲ್ಲವೂ ಅಲ್ಲ
ಇಂಗ್ಲೀಷ್ ಮೂಲ-Edna St. Vincent Millay
ಕನ್ನಡಕ್ಕೆ-ಸಮತಾ ಆರ್
ಪ್ರೀತಿಯೇ ಎಲ್ಲವೂ ಅಲ್ಲ;
ಮಾಂಸವಲ್ಲ,ಮದಿರೆಯೂ ಅಲ್ಲ.
ತಿಳಿನಿದ್ರೆಯಲ್ಲ,ಮಳೆಯಿಂದ ಕಾಯ್ವ ಮಾಡೂ ಅಲ್ಲ;
ತೇಲುವ ಮುಳುಗುವ ,ಮುಳುಗುವ ತೇಲುವ,
ಮುಳುಗುವವನ ಬದುಕಿಸುವ ಹುಲ್ಲುಕಡ್ಡಿಯೂ ಅಲ್ಲ.
ಪ್ರೀತಿಗೆ ಹೆಪ್ಪುಗಟ್ಟಿದ ಎದೆಯಲಿ
ಉಸಿರ ತುಂಬಲಾಗುವುದೂ ಇಲ್ಲ.
ನೆತ್ತರ ಶುದ್ಧಿ ಮಾಡಲಾಗುವುದಿಲ್ಲ;
ಮುರಿದ ಮೂಳೆಯ ಜೋಡಿಸುವುದೂ ಇಲ್ಲ.
ಆದರೂ ಹಲವರು ಸಾವಿನ ಜೊತೆ ಸರಸವಾಡುವರಲ್ಲ.
ನಾ ಮಾತನಾಡುವುದೂ ಪ್ರೀತಿಯ ಕೊರತೆಯಲಿ.
ಕಷ್ಟದ ಒಂದು ಕಾಲದಲಿ,
ನೋವಿಂದ ನರಳಿ , ಬಿಡುಗಡೆ ಬಯಸಿ,
ಹಳೆಯ ಸಂಕಲ್ಪವೊಂದರಿಂದ ಹೊರಬರಲೆಳೆಸಿ,
ನಿನ್ನ ಪ್ರೀತಿಯ ಶಾಂತಿಗಾಗಿ ಮಾರಲೆಳೆಸುವೆನೇನೋ,
ಇಲ್ಲವೇ, ಈ ರಾತ್ರಿಯ ನೆನಪ ಅನ್ನಕ್ಕಾಗಿ
ಕೊಟ್ಟು ಕೊಳ್ಳುವೆನೇನೋ,
ಆದರೂ ಆಗಬಹುದು ಹೀಗೆಲ್ಲಾ,
ಆದರೆ ನಾ ಮಾಡುವೆ ಎಂದನಿಸುವುದಿಲ್ಲ.
***********************
Beautiful
Super
Very nice