ಮಕ್ಕಳ ಕವಿತೆ
ಚಂದ್ರಯಾನ ಎನ್. ಶಂಕರರಾವ್ ಆಹಾ ಚಂದಿರ ಪೂರ್ಣ ಚಂದಿರ ಎಷ್ಟು ಎತ್ತರ ನಿಲುಕದಷ್ಟು ದೂರ. ನಾ ನೀ ಜೊತೆ ಜೊತೆಯಲಿ ಆಡುವ ಬಾ ಚಂದಿರ, ಮೋಡದಿ ಮರೆಯಾಗದಿರು ಅಂಬರದಿ ತೇಲಾಡದಿರು. ನಿಲ್ಲು ಅಲ್ಲೇ ಚಂದಮಾಮ ಎಲ್ಲಿ ಅವಿತೆ ಬಾನಲಿ ನೀನು, ಬಲ್ಲೆ ನಿನ್ನ ಕಣ್ಣುಮುಚ್ಚಾಲೆ ಜಲದ ಹಿಂದೆ ಅವಿತೆಯೇಕೆ. ಹುಣ್ಣಿಮೆಯ ಸುಂದರ ಚಂದಿರ ವಿಧು ನೀ ಬಾನಲಿ ಮಂದಿರ, ಮುದದಲಿ ಪ್ರಕಾಶಿಸು ನಿರಂತರ ಬದುಕಿಗೆ ನೀ ಭಾಸುರ. ವಿಜ್ಞಾನದ ಪರಿಶ್ರಮ ಭಾರತದ ಚಂದ್ರಯಾನ, ನೋಡತಲಿರು ಮುಂದೊಮ್ಮೆ ನಿನ್ನಲ್ಲಿಗೆ […]
ಕಾವ್ಯಯಾನ
ಹೇಳಿ ಹೋಗು ಕಾರಣ ಪ್ರಮಿಳಾ ಎಸ್.ಪಿ. ದಿಂಬಿನ ಕೆಳಗಿನ ಜಂಗಮ ಗಂಟೆಯನ್ನು ಮತ್ತೊಮ್ಮೆ ಮಗದೊಮ್ಮೆ ಹುಡುಕಿ ನೋಡುತ್ತಿದ್ದೆ….. ಕೆಂಪು ಗುಲಾಬಿ ಅದರ ಮುದ್ರೆ ಹೃದಯದ ಇಮೇಜು ಇದ್ದಿರಬಹುದು ನಿನ್ನ ಕಡೆಯಿಂದ…ಎಂದು!!! ಈಗೆಲ್ಲವು ಶೂನ್ಯ… ಅದೆಷ್ಟು ದಿನ ಅಂತರಂಗದ ಒಡೆನಾಟವಿತ್ತೋ… ಅಷ್ಟೂ ದಿನ ನಿನ್ನ ಡಿಪಿ ಗೊಂದು ಬೆಲೆಯಿತ್ತು…. ಈಗ ಕೊನೆಯ ಸೀನ್ ಎಷ್ಟು ಗಂಟೆಗೆ ನೋಡಿರುವೆ… ಎಂಬುದು ಒಂದೇ ಬಾಕಿ ನನಗೆ… ಹೇಳಿ ಹೋಗು ಕಾರಣ ಎನ್ನುವುದಿಲ್ಲ ನಾನು ಕಾರಣ ಹೇಳದೆ ಬಂದಿದ್ದವನು ನೀನು….!!!
ಕಾವ್ಯಯಾನ
ಮದುವೆಯ ಪ್ರಸ್ತಾಪ ಹರ್ಷಿತಾ ಕೆ.ಟಿ. ನೋಡುನೋಡುತ್ತಿದ್ದಂತೆ ಆಕಾಶದಲ್ಲೊಂದು ಕದ ತೆರೆದುಕೊಂಡಿತು ಯಾವುದೋ ಕೈಯೊಂದೂ ಚಾಚಿ ಕರೆಯಿತು ನಿಂತಲ್ಲಿಂದಲೇ ಕತ್ತು ನೀಳ ಮಾಡಿ ಎಟುಗಿಸಿ ನೋಡಿದೆ ಕದದ ಆ ಬದಿಯ ಲೋಕ ಅಲ್ಲಿ ಎಲ್ಲವೂ ಕಲ್ಪಿಸಿಕೊಂಡಿದ್ದಕಿಂತ ಅಚ್ಚುಕಟ್ಟು ಜೋಡಿಸಿಟ್ಟ ಕನಸುಗಳಿಗೆ ಧೂಳು ತಾಕಿರಲಿಲ್ಲ ಅಲ್ಲಿ ಹಸಿವು ಬಾಯಾರಿಕೆಗಳೂ ಊಳಿಡುವುದಿಲ್ಲ ಬತ್ತಿ ಸಿಕ್ಕಿಸಿ ಎಣ್ಣೆ ತುಂಬಿಸಿಟ್ಟ ದೀಪಗಳು ಬೆಳಗುವುದೊಂದೇ ಬಾಕಿ ಆದರೂ ಎತ್ತಲೂ ಈಗಾಗಲೇ ಬೆಳಕು ಈ ಭೂಮಿಯಂತಲ್ಲ ಕಸದ ರಾಶಿ ಇಲ್ಲ ಅಂಗಳವೂ ಇಕ್ಕಟ್ಟಿಲ್ಲ ಒಲೆಯೇರಿ ಕುಳಿತ ಮಡಿಕೆಗೆ […]
ಕಾವ್ಯ ಯಾನ
ಆ ಕರಾಳ ಇರುಳು ಮಧು ವಸ್ತ್ರದ್ ನಾವು ಮುಂಬಯಿ ಮಾಯಾ ನಗರದ ದಿಟ್ಟನಿವಾಸಿಗಳು.. ಮರೆಯೆವು ಎಂದೂ 26-11ರ ಆ ಕರಾಳ ಇರುಳು.. ಉತ್ಸಾಹದ ಕೆಲಸದೊತ್ತಡದ ಗಜಿಬಿಜಿಯ ದಿನಗಳು.. ಅರಿವಿಲ್ಲದೆ ಬಲಿಯಾದರು ತಪ್ಪನೆಸಗದ ಮುಗ್ಧಜನಗಳು.. ಶತ್ರುಗಳು ನುಗ್ಗಿದರು ಮೋಸದಿ ಸಮುದ್ರಮಾರ್ಗದೊಳು.. ಯಾರಿಗೂ ಕಾಣಲಿಲ್ಲ ಆ ನೀಚ ಕಪಟಿಗಳ ನೆರಳು.. ಅಕಸ್ಮಾತ್ತಾಗಿಎರಗಿದ ಭೀಕರ ಗುಂಡು ಸಿಡಿಮದ್ದುಗಳು.. ಜೀವತೆತ್ತರನೇಕ ಕಾರ್ಯನಿರತ ಪೋಲಿಸ್ ಕರ್ಮಚಾರಿಗಳು.. ಸೋತುಬಳಲಿದವುಮುಂಬೈನ ಎತ್ತರದ ಕಟ್ಟಡಗಳು.. ಮೌನವಾದವು ಫುಟ್ ಪಾತ್ ಗಳು..ಖಾವುಗಲ್ಲಿಗಳು.. ಹೋಟೆಲ್ ತಾಜ್ಒಳಾಂಗಣದಿ ಪೋಲಿಸರ ಕಸರತ್ತು ಗಳು ಮೂರುದಿನಗಳವರೆಗೆ […]
ಮಕ್ಕಳ ಪದ್ಯ
ಪಟ್ ಪಟೆಕಾಯಿ ಚಟ್ ಪಟ ಎಂದು! ವಿಜಯಶ್ರೀ ಹಾಲಾಡಿ ಪಟ್ ಪಟೆಕಾಯಿ ಚಟ್ ಪಟ ಎಂದು ಹಾಡು ಕಟ್ತಿತ್ತು ಮೆತ್ತನೆ ಹೆಜ್ಜೆಯ ಬೆಳ್ಳಿ ಬೆಕ್ಕು ಕದ್ದು ಕೇಳ್ತಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ನಕ್ಕು ಉರುಳಿತ್ತು ಮುಳ್ಳಿನ ಮರೆಯ ಓತಿಕ್ಯಾತವು ಫೋಟೋ ಹಿಡಿದಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಅಳುತಾ ಕೂತಿತ್ತು ಓಡುತ ಬಂದ ಇರುವೆಯಣ್ಣ ಗಲ್ಲ ಸವರಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಗೊರಕೆ ಹೊಡೆದಿತ್ತು ನಿದ್ದೆ ಬಾರದೆ ಬಾಲವ ಸುತ್ತಿ […]
ಕಾವ್ಯಯಾನ
ಮನದಾಳದ ಬಯಕೆ ರತ್ನಾ ಬಡವನಹಳ್ಳಿ ಸದ್ದಿಲ್ಲದೆ ಸರಿದ ಸುಂದರ ದಿನಗಳು ಸುದ್ದಿ ಮಾಡಿದ್ದರಿಯದಿಹ ವಾರಗಳು ತಂಗಳೆನಿಸದ ತಿಳಿನೀರಂತಹ ತಿಂಗಳುಗಳು ಹರುಷದ ಸವಿ ಸಿಂಚನಗೈದ ವರುಷಗಳು ಮೆಲುಕು ಹಾಕಲು ಕಾಯಬಹುದು ನಾ ಮುಂದೊಂದು ದಿನ ಬುದ್ದಿಯಗರ್ಭದಲಿ ಮೊಳಕೆಯೊಡೆದು ಮನಸು ಅಂಬೆಗಾಲಿಟ್ಟ ಅಕ್ಷರಗಳಲಿರದೆ ಮುನಿಸು ಪದಗಳಾಗಿ ಹೆಣೆದ ಬಾಡದಿಹ ಹಾರ ಸೊಗಸು ಕನ್ನಡಾಂಬೆಯ ಕೊರಳಲಂಕರಿಸಿ ಮೆರೆವ ಕನಸು ನಂಬಿಕೆಯ ನೆರಳಲಿ ನನಸಾಗಬಹುದು ಮುಂದೊಂದು ದಿನ ಕಿಚ್ಚಾವರಿಸದ ಹಚ್ಚ ಹಸಿರು ಕಾನನ ಸ್ವಚ್ಛ ಮನಗಳ ನಡುವೆ ಹೂವಾದ ಜೀವನ ಧಾವಂತಗಳಲಿ ನಲುಗದೆ […]
ಕಾವ್ಯಯಾನ
ಸಖಿ ಸತ್ಯಮಂಗಲ ಮಹಾದೇವ ಈ ಬೆಳಗಿನ ಏಕಾಂತ ಅದೇಕೊ ಮುದ ನೀಡಲಿಲ್ಲ ಸಖಿ ನಟ್ಟನಡುರಾತ್ರಿಯ ಕಡುಕತ್ತಲಲ್ಲಿ ನಿನ್ನ ಮೊಗವೊಂದೆ ಸಾಕು ಬೆಳದಿಂಗಳಂತೆ ಯಮುನಾ ತೀರದಲಲೆಯುತ ಒಂಟಿ ನಡಿಗೆಯ ಪ್ರಯಾಣ ಅದೆಷ್ಟು ನೀರಸ ಸಖಿ ಮಧುರ ಮಂಜುಳ ನಾದವೂ ಸಪ್ಪೆ ತೆರೆಯೇರಿ ಬೀಸುವ ತಂಗಾಳಿಯೂ ರುಚಿಯಿಲ್ಲ ಮೈಗೆ ನಿನ್ನ ಹೆಸರೊಂದೇ ಸಾಕು ಅದೆಷ್ಟೋ ದೂರದ ನಿನ್ನ ಸನಿಹದಂತಿರಿಸುವುದು ಪದವನರಿತ ಮನಸ್ಸಿಗೆ ಪರಿಚಯ ಬೇಕೆ ಬಣ್ಣವಾಗುವ ಕನಸುಗಳಿಗೆ ರೆಕ್ಕೆಗಳ ಬಿಡಿಸಿ ಹಾರುವುದ ಕಲಿಸಬೇಕೆ ಸಖಿ ನಿನ್ನ ಉಸಿರ ಜಾಡು ಕಣ್ಣಳತೆಯಲಿ […]
ಗಜಲ್
ಯಾರಿಗೆ ಯಾರು ಸಂಗಾತಿ? ವಿನುತಾ ಹಂಚಿನಮನಿ ಬಾಳಿನ ಬಂಡಿ ಎಳೆಯುವ ಕನಸಿನ ಕುದುರೆಗಳೇ ಯೋಚಿಸಿ ಹೇಳಿ ನಾಲ್ಕು ದಿನದ ಬದುಕಿನಲಿ ಯಾರಿಗೆ ಯಾರು ಸಂಗಾತಿ ಹೇಳಿ ಮರಕೆ ಕೋಮಲ ಲತೆಯೇ ಸಂಗಾತಿ ಹೃದಯಕೆ ಮಧುರ ಭಾವನೆಗಳೆ ಸಂಗಾತಿ ಲತೆಯ ಭಾವನೆ ಮರ ಅರಿಯದಾದರೆ ಹೃದಯದ್ದೇನು ತಪ್ಪು ಹೇಳಿ ಚಂದಿರನಿಗೆ ಹೊಳೆವ ತಾರೆಗಳೆ ಸಂಗಾತಿ ಸುಂದರ ತನುವಿಗೆ ನಿರ್ಮಲ ಮನವೇಸಂಗಾತಿ ನಕತ್ರಗಳಿಲ್ಲದ ಆಗಸದಲ್ಲಿ ಚಂದ್ರ ಏಕಾಂಗಿಯಾದರೆ ನಿಷ್ಟೆಯಿಲ್ಲದ ಮನದ ಮಾಲಿಕ ಕುರೂಪಿಯಲ್ಲವೇ ಹೇಳಿ ಹೂವಿಗೆ ಹಾರುವ ದುಂಬಿಯೇ ಸಂಗಾತಿ […]
ಕಾವ್ಯಯಾನ
ಸಾವಿರದ ಸಾವಿರ ಕವಿತೆ ರವಿ ರಾಯಚೂರಕರ್ ಬಳಲಿ ಬೇಕೆಂದು ಬಿಕ್ಕಳಿಸಿ ಅತ್ತವನು ಎದೆಗಂಟಿ ನುಡಿ ನುಡಿದು ಆಸೆಯ ಗೋಪುರಕೆ ಹೊಸ ಕನಸುಗಳ ತುಂಬಿ ನೆಲಕಳಚಿ ಬಿದ್ದವನು ನೀನಲ್ಲವೇ ಹಸಿದು ಕುಳಿತಾಗ ಕುಟುಕಿ ಕಾಳನಿಟ್ಟು ನಿಟ್ಟುಸುರ ಹೆಜ್ಜೆಯಲಿ ಊರ ತಿರುಗಿದ ಬಿಕ್ಕು ಪ್ರಾಯದ ಪೊರೆ ಹರಿದು ಹದಿಹರೆಯದ ಒಲವನೆರದವನು ನೀನಲ್ಲವೇ ಬರಿ ಅರ್ಥಗಳನೆ ಈ ಮೌನಕೆ ತುಂಬಿ ಹಾಗೆ ತುಳುಕುವ ಸಾವಿರದ ಸಾವಿರ ಕವಿತೆಗಳ ಹಣತೆ ಹಚ್ಚಿ ಬೆಳಗಾಗುವವರೆಗೆ ಉರಿದು,ಸುಟ್ಟು, ಬೂದಿಯಾಗಿ ಈ ಕಣ್ಣ ಕಾಡಿಗೆಯಾದವನು ನೀನಲ್ಲವೇ ಶತಮಾನದ […]
ಕಾವ್ಯಯಾನ
ಗಜಲ್ ಸಿದ್ಧರಾಮ ಹೊನ್ಕಲ್ ಇಂಥವರ ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟುತ್ತದೆ ಸಾಕಿ ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ!ವವರು ಸಾಕಿ ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ ಸಾಕಿ ಸಂತೆಯೊಳಗೊಂದು ಮನೆಯ ಮಾಡಿ ಸುಮ್ಮನೆ ಶಬ್ದಕ್ಕೂ ಹೆದರಿ ಬಾಳುವದು ಇದೆಯಲ್ಲ ಅದು ಕಡುಕಷ್ಟ ಸಾಕಿ ಹದಿ ಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಮರದಂತೆ ಬದುಕಾಗುತ್ತದೆ ಸಾಕಿ […]