ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Monochrome Photo of Woman Sitting On Floor

ಹೇಳಿ ಹೋಗು ಕಾರಣ

Woman Covered by White Cloth

ಪ್ರಮಿಳಾ ಎಸ್.ಪಿ.

ದಿಂಬಿನ ಕೆಳಗಿನ
ಜಂಗಮ ಗಂಟೆಯನ್ನು
ಮತ್ತೊಮ್ಮೆ ಮಗದೊಮ್ಮೆ
ಹುಡುಕಿ ನೋಡುತ್ತಿದ್ದೆ…..

ಕೆಂಪು ಗುಲಾಬಿ ಅದರ ಮುದ್ರೆ
ಹೃದಯದ ಇಮೇಜು
ಇದ್ದಿರಬಹುದು
ನಿನ್ನ ಕಡೆಯಿಂದ…ಎಂದು!!!

ಈಗೆಲ್ಲವು ಶೂನ್ಯ…
ಅದೆಷ್ಟು ದಿನ ಅಂತರಂಗದ
ಒಡೆನಾಟವಿತ್ತೋ…
ಅಷ್ಟೂ ದಿನ
ನಿನ್ನ ಡಿಪಿ ಗೊಂದು ಬೆಲೆಯಿತ್ತು….

ಈಗ ಕೊನೆಯ ಸೀನ್
ಎಷ್ಟು ಗಂಟೆಗೆ ನೋಡಿರುವೆ…
ಎಂಬುದು ಒಂದೇ ಬಾಕಿ ನನಗೆ…

ಹೇಳಿ ಹೋಗು ಕಾರಣ
ಎನ್ನುವುದಿಲ್ಲ ನಾನು
ಕಾರಣ ಹೇಳದೆ ಬಂದಿದ್ದವನು ನೀನು….!!!


About The Author

Leave a Reply

You cannot copy content of this page

Scroll to Top