ಕಾವ್ಯ ಯಾನ

ಆ ಕರಾಳ ಇರುಳು

ಮಧು ವಸ್ತ್ರದ್


ನಾವು ಮುಂಬಯಿ ಮಾಯಾ
ನಗರದ ದಿಟ್ಟನಿವಾಸಿಗಳು..
ಮರೆಯೆವು ಎಂದೂ 26-11ರ
ಆ ಕರಾಳ ಇರುಳು..

ಉತ್ಸಾಹದ ಕೆಲಸದೊತ್ತಡದ
ಗಜಿಬಿಜಿಯ ದಿನಗಳು..
ಅರಿವಿಲ್ಲದೆ ಬಲಿಯಾದರು
ತಪ್ಪನೆಸಗದ ಮುಗ್ಧಜನಗಳು..

ಶತ್ರುಗಳು ನುಗ್ಗಿದರು ಮೋಸದಿ
ಸಮುದ್ರಮಾರ್ಗದೊಳು..
ಯಾರಿಗೂ ಕಾಣಲಿಲ್ಲ ಆ ನೀಚ
ಕಪಟಿಗಳ ನೆರಳು..

ಅಕಸ್ಮಾತ್ತಾಗಿಎರಗಿದ ಭೀಕರ
ಗುಂಡು ಸಿಡಿಮದ್ದುಗಳು..
ಜೀವತೆತ್ತರನೇಕ ಕಾರ್ಯನಿರತ
ಪೋಲಿಸ್ ಕರ್ಮಚಾರಿಗಳು..

ಸೋತುಬಳಲಿದವುಮುಂಬೈನ
ಎತ್ತರದ ಕಟ್ಟಡಗಳು..
ಮೌನವಾದವು ಫುಟ್
ಪಾತ್ ಗಳು..ಖಾವುಗಲ್ಲಿಗಳು..

ಹೋಟೆಲ್ ತಾಜ್ಒಳಾಂಗಣದಿ
ಪೋಲಿಸರ ಕಸರತ್ತು ಗಳು
ಮೂರುದಿನಗಳವರೆಗೆ
ಪಿಸ್ತೂಲ್ ಟ್ರಿಗರ್ ನಲ್ಲೆ ಬೆರಳು..

ಪ್ರವಾಸಿಗರನು ಸುರಕ್ಷಿತವಾಗಿ
ಹೊರಗೆ ಕಳಿಸುವಗೀಳು..
ಗುಂಡಿನ ಚಕಮಕಿಯಲ್ಲಿ
ಬಿದ್ದವು ನೂರಾರು ಶವಗಳು..

ಬೆಳ್ಳಗಾಗ ತೊಡಗಿದವು
ತುಕಾರಾಂರ ಕಣ್ಣುಗಳು..
ಆದರೂ ಸೋಲದೆಹಿಡಿದರು
ಕಸಾಬನ ಕೊರಳು..

ಮುಂಬಯಿ ಜನರಿಗೆ ತಮ್ಮ
ಪೋಲೀಸರೆ ಹೀರೊಗಳು..
ನೀಡುವೆನು ಈ ಪೋಲಿಸರಿಗೆ
ನನ್ನ ಶತಃಶತ ನಮನಗಳು


ಕಿರುಪರಿಚಯ:

ಗೃಹಿಣಿ..ಪತಿ-ಅಸಿಸ್ಟೆಂಟ್ ಪೋಲೀಸ್ ಕಮಿಷನರ್.
ಕಳೆದ ೩೨ ವರ್ಷಗಳಿಂದ ಮುಂಬಯಿನಲ್ಲಿ ವಾಸ
ಸಂಗೀತ.. ಸಾಹಿತ್ಯ.. ಅಡುಗೆ..ಗಳಲ್ಲಿ ತುಂಬಾ ಆಸಕ್ತಿ ಇದೆ..ಸಮಾಜ ಸೇವೆ ಮಾಡೋದರಲ್ಲೂ ಆಸಕ್ತಿ ಇದೆ..
ಓದುವುದು ಬರೆಯುವುದು ಹವ್ಯಾಸ,

Leave a Reply

Back To Top