ಕಾವ್ಯಯಾನ

ಸಖಿ

man and woman looking each other sitting on white sand during sunset

ಸತ್ಯಮಂಗಲ ಮಹಾದೇವ

ಈ ಬೆಳಗಿನ ಏಕಾಂತ
ಅದೇಕೊ ಮುದ ನೀಡಲಿಲ್ಲ ಸಖಿ
ನಟ್ಟನಡುರಾತ್ರಿಯ ಕಡುಕತ್ತಲಲ್ಲಿ
ನಿನ್ನ ಮೊಗವೊಂದೆ ಸಾಕು
ಬೆಳದಿಂಗಳಂತೆ

ಯಮುನಾ ತೀರದಲಲೆಯುತ
ಒಂಟಿ ನಡಿಗೆಯ ಪ್ರಯಾಣ
ಅದೆಷ್ಟು ನೀರಸ ಸಖಿ
ಮಧುರ ಮಂಜುಳ ನಾದವೂ ಸಪ್ಪೆ
ತೆರೆಯೇರಿ ಬೀಸುವ ತಂಗಾಳಿಯೂ
ರುಚಿಯಿಲ್ಲ ಮೈಗೆ
ನಿನ್ನ ಹೆಸರೊಂದೇ ಸಾಕು
ಅದೆಷ್ಟೋ ದೂರದ ನಿನ್ನ
ಸನಿಹದಂತಿರಿಸುವುದು

ಪದವನರಿತ ಮನಸ್ಸಿಗೆ ಪರಿಚಯ ಬೇಕೆ
ಬಣ್ಣವಾಗುವ ಕನಸುಗಳಿಗೆ
ರೆಕ್ಕೆಗಳ ಬಿಡಿಸಿ ಹಾರುವುದ ಕಲಿಸಬೇಕೆ ಸಖಿ
ನಿನ್ನ ಉಸಿರ ಜಾಡು
ಕಣ್ಣಳತೆಯಲಿ ಹಾದು ಹೋಗುವಾಗ
ನನ್ನ ಆವರಿಸಿದ ಆ ಮಹಾನಂದವನು
ಬಣ್ಣಿಸಲು ಅಕ್ಷರಗಳು ಸೋಲುತ್ತಿವೆ

ಏಕಾಂತದ ಆ ಮೌನಕೆ
ಹೊಸಚೈತ್ರಗಳಾ ಆಮೋದಕೆ
ಕಾಲ್ಬೆರಳು ಗೀಚುವ ಲಜ್ಜೆಯ ಯಾತ್ರೆಗೆ
ಆ ನಗುವು ಭಾಷ್ಯ ಬರೆಯಿತು
ಮುತ್ತಿಡಲು ಹೊರಟ ವಸಂತ
ನಾನು ಅವನನ್ನು ಮೀರಿಸಿ ಹೊರಟೆ…

ಒಳಗೊಳ್ಳುವ ಸಂವಿಧಾನಕ್ಕೆ
ದುಃಖ ನೀರದಾರಿ
ಅರ್ಥವಿರದ ಈ ಆಸೆಗಳ ಭ್ರೂಣಕ್ಕೆ
ನೀನು ತಂದೆ ನಾನು ತಾಯಿ.

two hands on gray surface

One thought on “ಕಾವ್ಯಯಾನ

Leave a Reply

Back To Top