ಚಂದ್ರಯಾನ
ಎನ್. ಶಂಕರರಾವ್
ಆಹಾ ಚಂದಿರ
ಪೂರ್ಣ ಚಂದಿರ
ಎಷ್ಟು ಎತ್ತರ
ನಿಲುಕದಷ್ಟು ದೂರ.
ನಾ ನೀ ಜೊತೆ ಜೊತೆಯಲಿ
ಆಡುವ ಬಾ ಚಂದಿರ,
ಮೋಡದಿ ಮರೆಯಾಗದಿರು
ಅಂಬರದಿ ತೇಲಾಡದಿರು.
ನಿಲ್ಲು ಅಲ್ಲೇ ಚಂದಮಾಮ
ಎಲ್ಲಿ ಅವಿತೆ ಬಾನಲಿ ನೀನು,
ಬಲ್ಲೆ ನಿನ್ನ ಕಣ್ಣುಮುಚ್ಚಾಲೆ
ಜಲದ ಹಿಂದೆ ಅವಿತೆಯೇಕೆ.
ಹುಣ್ಣಿಮೆಯ ಸುಂದರ ಚಂದಿರ
ವಿಧು ನೀ ಬಾನಲಿ ಮಂದಿರ,
ಮುದದಲಿ ಪ್ರಕಾಶಿಸು ನಿರಂತರ
ಬದುಕಿಗೆ ನೀ ಭಾಸುರ.
ವಿಜ್ಞಾನದ ಪರಿಶ್ರಮ
ಭಾರತದ ಚಂದ್ರಯಾನ,
ನೋಡತಲಿರು ಮುಂದೊಮ್ಮೆ
ನಿನ್ನಲ್ಲಿಗೆ ನಾ ಬರುವೆ
ಚಂದ್ರಯಾನಕೆ ಕಾದಿರಿಸಿರುವೆ.
ಕಿರುಪರಿಚಯ:
ನಿವೃತ್ತ ಬ್ಯಾಂಕ್ ಮ್ಯಾನೇಜರ್,ಮೂರು ಕವನಸಂಕಲನಗಳು ಬಿಡುಗಡೆಯಾಗಿವೆ.ಇವರ ಹಬ್ಬ ಪದ್ಯ ಐದನೇ ತರಗತಿಯ ಕನ್ನಡ ದ್ವಿತೀಯ ಬಾಷೆಯಲ್ಲಿ ಪಠ್ಯವಾಗಿದೆ
ಮಕ್ಕಳ ಸುಂದರ ಕಲ್ಪನಾ ಕೃತಿ. ಭಾರತದ ವಿಜ್ಞಾನಿಗಳ ಸಾಧನೆಗೆ, ಮಗುವಿನ ಮುಗ್ಧತೆಯಲಿ ರೂಪುಗೊಂಡ ಕವನ.
ಓದಿದೆ. ತುಂಬಾ ಚೆನ್ನಾಗಿದೆ.
ಇನ್ನಷ್ಟು ಇಂಥಹ ಕವಿತೆಗಳು ಬಂದು ಮಕ್ಕಳ ಮನ ರಂಜಿಸಲಿ
ಮೆಚ್ಚುಗೆಗೆ ಧನ್ಯವಾದಗಳು
ಅಂದದ ಚೆಂದದ ಮಕ್ಕಳ ಪದ್ಯ
ವಂದನೆಗಳು
Very good poem by N.Shankara Rao.