ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಿನ್ನೆದೆಯ ಅಂಗಳದಿ ಹಿಡಿ ಹೂಗಳನು ನಾನು *ಸುರಿದೆ*  
ಕಟುಕ ನೀನು ನನ್ನ  ಮನದಲಿ ಮುಳ್ಳುಗಳನು  *ಮುರಿದೆ*  

ಭರವಸೆಯ ಹಸ್ತವೆಂದು  ನಂಬಿ ಕೈ  ನೀಡಿದೆ ನಾನಂದು
ಜೇನುಲಿಯಲಿ  ವಂಚನೆಯ ವಿಷವನು  *ಕಾರಿದೆ*  

ಬಣ್ಣದ ಕನಸುಗಳಿಗೆ  ನಗುತ ರಂಗು ತುಂಬುತ ಬಂದೆ
ಪ್ರೀತಿಯ  ಚೂರಿಯಲಿ ಹೃದಯವನೇಕೆ  *ಇರಿದೆ*

ತಂಗಾಳಿಯೇ ಬಿರುಗಾಳಿಯಾಗಿದೆ  ಬದುಕಲಿ ಇಂದು
ಮರುಳ ಹುಚ್ಚು ಭಾವಗಳನು ನಾನೇ *ಜರಿದೆ*  

ಕಂಗಳಲಿ ಮೂಡಿದ ಕಾಮನಬಿಲ್ಲು ಮಾಸುತಿಹುದು
ಬೇಗಂಳ ಒಲವು ಕಾಣದ ವಿಧಿಯ  *ದೂರಿದೆ*
ಹಮೀದಾಬೇಗಂ  ದೇಸಾಯಿ

About The Author

Leave a Reply

You cannot copy content of this page

Scroll to Top