ಕಾವ್ಯ ಸಂಗಾತಿ
ವಾಣಿಶ್ರೀ ಎ ಹುಬ್ಬಳ್ಳಿ
“ನೊಂದವಳು”


ಏನೋ ಸಾಧಿಸಬೇಕೆಂಬ
ಹಠ ಹಂಬಲ ಚಪಲ,
ಬಿಡುತ್ತಿಲ್ಲ ಈ ಜಗವೆಂಬ
ವಿಷವರ್ತುಲ;
ಪ್ರಯತ್ನಗಳಲ್ಲಾಗುತ್ತಿವೆ
ವಿಫಲ,
ಹೋಗಲಿ ಬಿಡು—
ಏನು ಸಾಧಿಸಿ, ಏನು ಫಲ?
ಈ ಮಾನವ ಜನ್ಮ
ಬಹುದೊಡ್ಡದು,
ಜೀವನ ಬಹು ಚಿಕ್ಕದು;
ಕ್ರೂರ ಪ್ರಾಣಿಗಳಂತೆ
ವರ್ತಿಸಲು ಬಾರದು,
ಮಾನವೀಯತೆಯನ್ನು
ಕಳೆದುಕೊಳ್ಳಲು ಆಗದು.
ಏನೇನೋ ಮಾಡಬೇಕೆಂದು
ಹೊರಟರೆ,
“ಬೇಡ, ಬಾ ಹಿಂದಕ್ಕೆ” ಎಂಬ ಕರೆ;
ಈ ಕರೆಯಿರುವುದು
ತೆರೆಯ ಮರೆ
ಹಾಕಿಹುದು ಮನಸ್ಸಿನ
ಮೇಲೆ ಬರೆ.
ಮೌನದಲಿ ಮರುಗುತ್ತಿರುವೆ
ನೊಂದವಳು ನಾನು
ವಾಣಿಶ್ರೀ ಎ ಹುಬ್ಬಳ್ಳಿ



