ಕಾವ್ಯ ಸಂಗಾತಿ
ಸುಮತಿ ನಿರಂಜನ
“ಚರಿತ್ರೆಯ ಕಸದ ಬುಟ್ಟಿ”


ಯಾವುದು ಸತ್ಯ
ಯಾವುದು ಮಿಥ್ಯ
ಯಾರು ಮಹಾತ್ಮರು
ಯಾರು ಪಾಪಾತ್ಮರು ?
ಕಸದ ಬುಟ್ಟಿ ಕೆದಕಿದಾಗ
ಸಿಕ್ಕ ಚೂರು ಚೂರು
ಒಟ್ಟು ಮಾಡಿ
ಭೂತಗನ್ನಡಿ ಹಿಡಿದು
ನೋಡಿದಾಗ…ರಕ್ತಸಿಕ್ತ
ದೇಹದ ತಲೆ
ತೂಗಾಡುತ್ತಿದೆ ಮೇಲೆ
ಅದು ಯಾರದೂ ಅಲ್ಲ –
ಮುಂದೆ ಯಾರೋ
ನಿರ್ಧರಿಸುವ ತನಕ…
ಇದ್ದದ್ದೇ ಕಚ್ಚಾಟ
ಕೊಲೆ ಸುಲಿಗೆ ಹಿಂಸಾಚಾರ
ತುಂಡು ಬಿಳಿ ಖಾದಿಯ
ತುಂಬ ಕಲೆ ತೊಳೆಯಲು
ಹರಿವ ನೆತ್ತರ ಹೊಳೆ..
ಸು,ಮತಿ ನಿರಂಜನ



