ಕಾವ್ಯ ಸಂಗಾತಿ
ರಮೇಶ್ ಅಂಬಳಿ
“ಯುದ್ಧ ಮತ್ತು ಸೃಷ್ಟಿ”


ಸೃಷ್ಟಿಯ ವಿರುದ್ಧ ನಡೆಯದಿರು
ಸೃಷ್ಟಿಯ ಜೊತೆ ಗುದ್ದಾಡದಿರು
ಸೃಷ್ಟಿಯಿಂದಲೇ ನಿನ್ನ ಜೀವಾ,ಜೀವನಾ
ಸೃಷ್ಟಿಯ ಜೊತೆಗೆ ಜೀವಿಸುವುದನ್ನ
ಕಲಿಯಬೇಕಾದ್ದು ನಿನ್ನ ಧರ್ಮ,
ಸೃಷ್ಟಿಯು ಮುನಿಸಿದರೆ ಸರ್ವನಾಶವಾದೀಯಾ
ನಿನ್ನ ಆಶೆಗಳ ಪೂರೈಕೆಗೆ ನಡೆಸದಿರು
ಸೃಷ್ಟಿಯ ನಾಶ,
ಮದ್ದುಗುಂಡುಗಳ ಸೇರಿಸದಿರು ದೇವರ
ಈ ಸೃಷ್ಟಿಯಲಿ,
ದೇವರ ಕೋಪಕ್ಕೆ ಗುರಿಯಾದೀಯಾ,
ನಿಲ್ಲಲು ನೆಲೆಯನ್ನೇ ಕಳೆದುಕೊಂಡೀಯಾ
ನಿನ್ನ ಜೀವನೋಪಾಯಕ್ಕೆಂದು ಸೃಷ್ಟಿಯಲಿ
ಸಿಗುವ ಆಹಾರ, ನಿನ್ನ ಬಳಕೆಗೆ ಬೇಕಾಗುವ
ವಸ್ತುಗಳಾ, ಕಳಕೊಂಡು ಪರದಾಡಬೇಡಾ,
ಬೆರೆತು ಬಾಳು ನೀ ನಿನ್ನವರ ಸಂಗಡಾ
ಮರೆಯಬೇಡಾ ನಿನ್ನ ಮನುಷ್ಯ ಜಾತಿಗಳಾ
ಮರೆತು ಬಿಡು ನಿನ್ನಲ್ಲಿಯಾ ಕೋಪಾತಾಪಗಳಾ
ಮೆರೆಯಬೇಡಾ ನಿನಗೆ ಇಷ್ಟ ಬಂದಂತೆ
ಯುದ್ಧದ ನೆಪದಲ್ಲಿ ಹಾಳಾಗುವುದು ಭೂಮಿ
ಸಕಲ ಜೀವರಾಶಿಗಳಿಗೂ ತರುವೆಯಾ ನೀ ಕುತ್ತು
ಮುಂದೊಂದು ದಿನ ಆಹಾರ ಬೆಳೆ ಬೆಳೆಯುವ
ಈ ಭೂಮಿ ಕಳೆದುಕೊಳ್ಳುವದು ಫಲವತ್ತತೆಯಾ
ನೀ ಮಾಡುವ ತಪ್ಪುಗಳಿಂದ
ನಾಶವಾಗುವದು ಸರ್ವ ಸೃಷ್ಟಿ
ಸೃಷ್ಟಿಯೇ ಇಲ್ಲವಾದ ಮೇಲೆ
ನಿನಗೆಲ್ಲಿದೇ ಜೀವಿಸಲು ನೆಲೆ, ಓ ಮನುಜಾ…!
ರಮೇಶ್ ಅಂಬಳಿ



