ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


​ತಲ್ಲಣಗಳೆಲ್ಲ ಮೀರಿದ
ಮೇಲೆ—
ಕದ ತಟ್ಟಿದೆ ನೀನು;
ದೀಪ ಹಚ್ಚುವ ತವಕವೇ ಇರಲಿಲ್ಲ ನನಗೆ,
ನೀನು ಹೊತ್ತಿಸಿದ ಬೆಳಕಿಗೆ
ಕತ್ತಲೆ ಗೋಳಾಡಿ ಕರಗಿತು.

​ಒಡೆದು ಗಾಯಗೊಂಡ
ಅಪರಾಹ್ನದ ಕನಸಿಗೆ,
ಬಂದೆರಗಿದ ತಂಗಾಳಿ
ತಲೆ ಸವರಿದಂತಿತ್ತು;
ಇಂಗಿಹೋದ ಒಣ ಹಂಗು
ಕಂಬಳಿಯ ಮರೆಯಲ್ಲಿ
ಮುತ್ತೈದೆಯಂತೆ
ಪಿಸುಗುಟ್ಟಿತು.

​ನೆನಪು ಕೊಯ್ದ ಕಂಬನಿ,
ಟಪಕ್ಕನೆ ಉದುರಿ
ತೆರೆಯ ಮರೆಯಲ್ಲಿ
ನೆಲ ಹಿಡಿಯಿತು;
ಹಳಸಲು ಪ್ರೀತಿಯ
ಹಿಲಾಲು ಒಗೆದು
ಇಸ್ತ್ರಿ ಹಾಕಿ ನೀನು
ಲೇಪನ ಹಚ್ಚಿದರೂ—
ಲವಲವಿಕೆಯೇ ಲೇವಡಿ ಮಾಡಿತು!

​ನೀನು ಬಂದದ್ದು
ತುಸು ತಡವಾಯ್ತೇನೋ…?
ಕತ್ತಲು ಮುಸುಕಿದ ತೇವದಲಿ
ಒಣಗಿಹೋದ ಶಬ್ದಗಳು
ಗದ್ಗದಿಸಿ ಬಿಕ್ಕಳಿಸಿದವು;
ಬಹು ಬಿರಿಯಾದ ಎದೆಯೊಳಗೆ
ಉತ್ತರವಿಲ್ಲದ ಪ್ರಶ್ನೆಗಳು
ಮತ್ತೆ ನರಳಿಸಿದವು.


About The Author

1 thought on “ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ””

Leave a Reply

You cannot copy content of this page

Scroll to Top