ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


(ಲಕ್ಷ್ಮಣ ಶರೆಗಾರ ಸರ್ ಅವರ ಗಜಲ್ ಒಂದರಿಂದ ಪ್ರೇರಿತ )
ನನಗೆಲ್ಲವೂ ಆದವನ ಮೇಲೆಯೇ, ಎಲ್ಲರಿಗಿಂತ
ಹೆಚ್ಚು ಶಿಕಾಯತ್ ಇವೆಯೆಂದು ಯಾರಿಗೆ ಹೇಳಲಿ
ಬೇಹಿಸಾಬ್ ಕೋಪದ ಹಿಂದೆಯೇ ಬೇಯಿಂತಹಾ
ಇಷ್ಕ್ ಇದೆಯೆಂದು ಯಾರಿಗೆ ಹೇಳಲಿ

ಸಾಗರದಷ್ಟು ಕೋಪವೇ ಇರಲಿ
ದುನಿಯಾದ ಸಾವಿರ ಜನರ ಮೇಲೆ ಸಾಕಿ
ಅವನೊಬ್ಬನ ಮುಂದೆ ರಚ್ಛೆ ಹಿಡಿದು,ಕೂಗಾಡುವುದು
ರೂಹ್ ನ ಆಸೆಯೆಂದು ಯಾರಿಗೆ ಹೇಳಲಿ

ಹುರುಳಿಲ್ಲದ ರಸ್ಮ್,ರಿವಾಜ್ ಗಳು
ನಮ್ಮನು ಬಂಧಿಸಲೆತ್ನಿಸಿ ಸೋಲುತಿಹವು
 ಎಲ್ಲದಕ್ಕೂ ಮೀರಿದ,ಹೆಸರಿಡಲಾಗದ ಬಾಂಧವ್ಯ
ಅವನೊಂದಿಗೆ ಬೆಸೆದಿದೆಯೆಂದು ಯಾರಿಗೆ ಹೇಳಲಿ

ಎಲ್ಲವೂ, ಎಲ್ಲರೂ ತನ್ನ ಹಿಸಾಬ್ ನಂತೆಯೇ
ನಡೆಯಬೇಕೆನ್ನುವುದು ಈ ಜಗತ್ತು
ಇದೆ ಖಾಯಾಲಿಯಲಿ ಅದೆಷ್ಟು ಖಾಬ್ ಗಳು
ಕಬ್ರಸ್ತಾನ್ ಸೇರಿವೆಯೆಂದು ಯಾರಿಗೆ ಹೇಳಲಿ

ಅವನನು ನೆನೆಯಲೂ ಪರವಾನಗಿಯೇ ಇಲ್ಲ,
  ಈ ವಾಣಿಗೆ ಈ ಜನುಮದಲಿ
ಆದರೂ  ದೇವರೆದುರು ಕೈಮುಗಿವಾಗೊಮ್ಮೆ,
ಅವನನೇ ಕೇಳುವೆಯೆಂದು ಯಾರಿಗೆ ಹೇಳಲಿ


About The Author

1 thought on “ವಾಣಿ ಯಡಹಳ್ಳಿಮಠ್ ಅವರ ಗಜಲ್”

  1. ನಾನು ಬರೆದುದಕ್ಕಿಂತ ಇನ್ನೂ, ಮತ್ತೂ ಚಂದವಾಗಿ ಬಂದಿದೆ ಈ ಗಝಲ್

Leave a Reply

You cannot copy content of this page

Scroll to Top