ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ್
ಗಜಲ್


(ಲಕ್ಷ್ಮಣ ಶರೆಗಾರ ಸರ್ ಅವರ ಗಜಲ್ ಒಂದರಿಂದ ಪ್ರೇರಿತ )
ನನಗೆಲ್ಲವೂ ಆದವನ ಮೇಲೆಯೇ, ಎಲ್ಲರಿಗಿಂತ
ಹೆಚ್ಚು ಶಿಕಾಯತ್ ಇವೆಯೆಂದು ಯಾರಿಗೆ ಹೇಳಲಿ
ಬೇಹಿಸಾಬ್ ಕೋಪದ ಹಿಂದೆಯೇ ಬೇಯಿಂತಹಾ
ಇಷ್ಕ್ ಇದೆಯೆಂದು ಯಾರಿಗೆ ಹೇಳಲಿ
ಸಾಗರದಷ್ಟು ಕೋಪವೇ ಇರಲಿ
ದುನಿಯಾದ ಸಾವಿರ ಜನರ ಮೇಲೆ ಸಾಕಿ
ಅವನೊಬ್ಬನ ಮುಂದೆ ರಚ್ಛೆ ಹಿಡಿದು,ಕೂಗಾಡುವುದು
ರೂಹ್ ನ ಆಸೆಯೆಂದು ಯಾರಿಗೆ ಹೇಳಲಿ
ಹುರುಳಿಲ್ಲದ ರಸ್ಮ್,ರಿವಾಜ್ ಗಳು
ನಮ್ಮನು ಬಂಧಿಸಲೆತ್ನಿಸಿ ಸೋಲುತಿಹವು
ಎಲ್ಲದಕ್ಕೂ ಮೀರಿದ,ಹೆಸರಿಡಲಾಗದ ಬಾಂಧವ್ಯ
ಅವನೊಂದಿಗೆ ಬೆಸೆದಿದೆಯೆಂದು ಯಾರಿಗೆ ಹೇಳಲಿ
ಎಲ್ಲವೂ, ಎಲ್ಲರೂ ತನ್ನ ಹಿಸಾಬ್ ನಂತೆಯೇ
ನಡೆಯಬೇಕೆನ್ನುವುದು ಈ ಜಗತ್ತು
ಇದೆ ಖಾಯಾಲಿಯಲಿ ಅದೆಷ್ಟು ಖಾಬ್ ಗಳು
ಕಬ್ರಸ್ತಾನ್ ಸೇರಿವೆಯೆಂದು ಯಾರಿಗೆ ಹೇಳಲಿ
ಅವನನು ನೆನೆಯಲೂ ಪರವಾನಗಿಯೇ ಇಲ್ಲ,
ಈ ವಾಣಿಗೆ ಈ ಜನುಮದಲಿ
ಆದರೂ ದೇವರೆದುರು ಕೈಮುಗಿವಾಗೊಮ್ಮೆ,
ಅವನನೇ ಕೇಳುವೆಯೆಂದು ಯಾರಿಗೆ ಹೇಳಲಿ
ವಾಣಿ ಯಡಹಳ್ಳಿಮಠ್




