ಕಾವ್ಯ ಸಂಗಾತಿ
ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ
“ನೀ ಹೀಗೇಕೆ ಮಾಡಿದೆ”


ಈ ಭೂಮಿಯ ಮೇಲೆ
ಒಳ್ಳೆಯ ಜನರನ್ನು ಹುಟ್ಟಿಸಿ
ಅವರ ನಡುವೆ ಕೆಟ್ಟವರನ್ನು ಸೃಷ್ಟಿಸಿ
ಕಾಡಿಸಲು ಪೀಡಿಸಲು ಬಿಟ್ಟೆ
ನೀ ಹೀಗೇಕೆ ಮಾಡಿದೆ…
ಕಾಡಿನಲ್ಲಿ ಮುಗ್ಧ ಪ್ರಾಣಿಗಳನ್ನು
ಸ್ವಚ್ಛಂದವಾಗಿ ಅಲೆಯಲು ಬಿಟ್ಟೆ
ಅವನ್ನು ಹಿಂಸಿಸಿ ತಿನ್ನಲು
ಕ್ರೂರ ಪ್ರಾಣಿಗಳ ಚೂಬಿಟ್ಟೆ
ನೀ ಹೀಗೇಕೆ ಮಾಡಿದೆ…
ಕೂಡಿ ಬಾಳಲು ದುಡಿದು ತಿಂದು
ನಲಿಯಲು,ಹಗಲನು ಸೃಷ್ಟಿಸಿದೆ
ಕಳ್ಳಾಟ-ಅಕ್ರಮಗಳ ಮಾಡಲು
ಕತ್ತಲು ಕರುಣಿಸಿದೆ
ನೀ ಹೀಗೇಕೆ ಮಾಡಿದೆ…
ಪ್ರೀತಿ ಅಂತ:ಕರಣ ಮಾನವನ ಎದೆಯಲ್ಲಿ ನೆಟ್ಟೆ
ಮನದಲ್ಲಿ ವಿಷ ಬೀಜ ಬಿತ್ತಿ
ಕ್ರೂರಿ ಅತ್ಯಾಚಾರಿ
ಅನಾಚಾರಿಯಾಗುವ ಮನಸನಿಟ್ಟೆ
ನೀ ಹೀಗೇಕೆ ಮಾಡಿದೆ..
ಡಾ. ಗೀತಾ ದಾನಶೆಟ್ಟಿ, ಬಾಗಲಕೋಟೆ




Nice