ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಏನಿದು ಯುದ್ದ ಎಲ್ಲಡೆ ನಾಶ
ಸುಡುತಲಿ ಬಂದಿದೆ ಜಗವನ್ನು//ಪ//
ಬೇಕಿದೆ ಶಾಂತಿಯ ಹರಡುವ ಹಣತೆಯು
ತೊಡೆಯಲು ಕವಿದಿಹ ತಮವನ್ನು
 //ಅ.ಪ//

ಉಗುಳುತ ಕೆಂಡವ ಕಾರುತ ದ್ವೇಷವ
ದಹಿಸಿದೆ ಬುವಿಯನು ಮದದಲ್ಲಿ
ನಾನು ನನ್ನದು ಎಂಬುವ ಸ್ವಾರ್ಥವು
ಉರಿಸಿದೆ ಮತ್ಸರ ಸೊಕ್ಕಿನಲಿ//ಪ//

ಪ್ರಕೃತಿ ನಾಶದ ಅರಿವೇ ಇರದೆ
ನಡೆದಿದೆ ಮನುಜನ ಕಾದಾಟ
ಗಾಳಿಯು ತುಂಬಿದ ಬಲೂನಿನ ತೆರದಲಿ
ನಡೆದಿದೆ ಇವನ ಹಾರಾಟ//

ಸುಡುವುದೆ ಸಾಧನೆ ಎಂಬುವ ಮನಸಲಿ
ಎಲ್ಲವ ದಹಿಸುತ ಸಾಗಿಹರು
ಧ್ವಂಸವ ಮಾಡಿ ಬೀಗುತ ಸೊಕ್ಕಲಿ
ತಾವೇ  ಉತ್ತಮರು ಎನ್ನುವರು//ಪ//

ಯುದ್ಧದ ದಾಹಕೆ ಸಂಕುಲವೆಲ್ಲ
ರೋಧಿಸಿ ಪ್ರಾಣವ ಬಿಟ್ಟಿಹುದು
ಸುಂದರ ಲೋಕಕೆ ಎಂದೂ ಭರಿಸದ
ನಷ್ಟವೆ ಇಂದಿಗೆ ಆಗಿಹುದು//

ಯುದ್ಧವ ನಿಲ್ಲಿಸಿ ಶಾಂತಿಯ ಬದುಕನು
ಸಾಗಿರಿ ಜಗದಲಿ ಒಲವಿನಲಿ
ಶಾಂತಿಗೆ ದೊರೆಯುವ ಮನ್ನಣೆ ಇಳೆಯಲಿ
ಎಲ್ಲಿಯೂ ಇಲ್ಲ ಅರಿವಿರಲಿ//


About The Author

Leave a Reply

You cannot copy content of this page

Scroll to Top