ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

​ಬರಹದ ಗುಂಗಿನಲ್ಲಿ…
​ದಾರಿ ದೀರ್ಘವಾಗಿತ್ತು, ಮೌನ ಜೊತೆಯಾಗಿತ್ತು
ಮನದ ಅಂಗಳದಲ್ಲಿ ಕವಿತೆಯೊಂದು ಮೊಳೆಯುತ್ತಿತ್ತು;
ಅಂದು ಕೈಲಿ ಲೇಖನಿಯಿತ್ತು, ಕಾಗದದ ಒಡನಾಟವಿತ್ತು
ಇಂದು ಅಕ್ಷರಗಳ ಗೀಚಲು ಚರವಾಣಿಯ ತಲಾಶೆ ಶುರುವಾಗಿದೆ!
​ಲೇಖನಿ ಹೋದ ಜಾಗಕ್ಕೆ ಬೆರಳಚ್ಚು ಬಂದು ಕುಳಿತಿದೆ
ಹಳೆಯ ಕಾಲದ ಆ ಸೊಗಡು ಇಂದು ಡಿಜಿಟಲ್ ಆಗಿದೆ;
ಕವನದ ಗುಂಗಿನಲ್ಲಿ ನಾನು ಎಲ್ಲಿದ್ದೆ ಎಂಬ ಅರಿವೇ ಇಲ್ಲ
ಅಂಗಡಿಯವನು ಮಾತಾಡಿಸಿದಾಗಲೇ ವಾಸ್ತವದ ಅರಿವಾಗಿದ್ದು!
​ಕವಿತೆ ಇನ್ನು ಮನದ ತುಂಬೆಲ್ಲಾ ಹರಿಯುತ್ತಲೇ ಇತ್ತು
ದೇಹ ಮಾತ್ರ ನಿಧಾನವಾಗಿ ಮನೆಯ ದಾರಿ ಹಿಡಿದಿತ್ತು;
ಶಬ್ದಗಳ ಲೋಕದಲಿ ನಾನು, ಮೌನದಲಿ ನನ್ನ ಬರಹ..
ದಾರಿ ಮುಗಿದಿತ್ತು, ಮನೆಯು ಬಂದಿತ್ತು.. ಮನಸು ಮಾತ್ರ ಕವನ ಬರೆಯುತ್ತಿತ್ತು.


About The Author

1 thought on “ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ””

Leave a Reply

You cannot copy content of this page

Scroll to Top