ಕಾವ್ಯ ಸಂಗಾತಿ
ನಾಮದೇವ ಕಾಗದಗಾರ
“ನಂಜಿನ ಉಸಿರು”


ಕಣ್ಣು ಬಿಟ್ಟ ಕ್ಷಣಗಳೆಲ್ಲಾ
ಮಂಜಿನ ಹನಿಗಳೆಂದುಕೊಂಡಿದ್ದೆ;
ನಂಜಿನ ನೂಲುಗಳಾಗಿ ಗೋಚರಿಸುತ್ತಿವೆ..
***
ಅಸಮಾನೆತೆಯ ನೆತ್ತರು
ಕುಡಿದ ನೆಲ ಕುದಿಯುತ್ತಿದೆ;
ತೂಗುವ ತೊಟ್ಟಿಲು ಮಸಣವಾಗುತ್ತಿದೆ.
***
ವೈಷಮ್ಯ ಚಿಗುರೊಡೆದು
ನೆಲ ಕೆಂಪಾಗಿದೆ
ಈಗ ನಂಜೇರಿ ಕಪ್ಪಾಯಿತು
***
ನಮ್ಮೊಳಗೆ ಧರ್ಮದ ಅಮಲು ಏರಿದೆ
ಅಸಮಾನತೆಯ ಕಸದಿಂದ
ಒಡಲು ತುಕ್ಕು ಹಿಡಿದಿದೆ
***
ನಯವಂಚಕರ ದುನಿಯಾ
ಬದುಕ ಪಾತ್ರೆಯಲ್ಲಿ
ಜಗದ ಐಕ್ಯತೆ ತಳ ಹತ್ತಿದೆ.
***
ಎದೆಗೆ ಎದೆ ನೇಯ್ದ ಮಗ್ಗ ನಂಜಾಗಿದೆ;
ಇನ್ನೂ, ಜಾತಿ ಜಾತಿಯ
ದೋಂಬಿ ನಡೆಯದೇ ಇರುತ್ತದೆಯೇ
***
ಬಿದ್ದ ಬೀಜವೂ
ಮೊಳಕೆಯೊಡೆಯಲು
ನೆಲ ಉರಿವ ಕೆಂಡವಾಗಿದೆ
***
ಕಿಚ್ಚು ಹಚ್ಚಿಕೊಂಡ ಎದೆಗಣ್ಣಿಗೆ
ಬೆಂಕಿ ಮತ್ತು ದೀಪದ ವ್ಯತ್ಯಾಸ ಗೊತ್ತಾಗುವುದೇ
ನಾಮದೇವ ಕಾಗದಗಾರ
| Recipients |



