ಗಜಲ್ ರತ್ನರಾಯ ಮಲ್ಲ ಎಣ್ಣೆ, ಬತ್ತಿಗಳು ಬಜಾರಿನಲ್ಲಿ ಬಿಕರಿಯಾಗುತ್ತಿವೆ ಗಾಲಿಬ್ದೀಪ ಹಚ್ಚುವ ಮನಸ್ಸುಗಳು ಮರೆಯಾಗುತ್ತಿವೆ ಗಾಲಿಬ್ . ನಮ್ಮ ಮನೆಗಳು ಕಂಗೊಳಿಸುತ್ತಿವೆ ಬಣ್ಣ ಬಣ್ಣದ ಬೆಳಕಿನಲ್ಲಿಮನಗಳು ಕತ್ತಲೆಯ ಗೂಡಾಗಿ ಕೊಳೆಯಾಗುತ್ತಿವೆ ಗಾಲಿಬ್ ಬುದ್ಧಿವಂತಿಕೆಯ ನೆರಳಲ್ಲಿ ಗುಲಾಮಿಯು ಚಿಗುರೊಡೆಯುತಿದೆಭವ್ಯ ಚಿಂತನೆಯ ಆಪ್ತ ಕನಸುಗಳು ಪರಾರಿಯಾಗುತ್ತಿವೆ ಗಾಲಿಬ್ ಆಡಂಬರದ ಆಲಯವೇ ಈ ಸಮಾಜವನ್ನು ನಿಯಂತ್ರಿಸುತಿದೆಸಂತೃಪ್ತಿ-ಸರಳತೆಯ ದಿನಗಳು ಮರಿಚೀಕೆಯಾಗುತ್ತಿವೆ ಗಾಲಿಬ್ ‘ಮಲ್ಲಿ’ ಯ ಮನವು ಆರದ ಬೆಳಕಿಗಾಗಿ ಕನವರಿಸುತಿದೆ ಇಂದುಪರಸ್ಪರ ಪ್ರೀತಿಸುವ ಹೃದಯಗಳು ಒಂಟಿಯಾಗುತ್ತಿವೆ ಗಾಲಿಬ್.. ನಿನ್ನೊಂದಿಗೆ ಮಾತನಾಡುತ ಮಸಣವನ್ನು ಚುಂಬಿಸುವ […]
ಅವಳ ಬದುಕಿನ ಪುಟಗಳಲ್ಲೊಂದು ಇಣುಕು…
ವಾರದ ಕಥೆ ಅವಳ ಬದುಕಿನ ಪುಟಗಳಲ್ಲೊಂದು ಇಣುಕು… ಟಿ.ಎಸ್.ಶ್ರವಣಕುಮಾರಿ ಆರನೆಯ ನಂಬರಿನ ಡಬಲ್ ಡೆಕರ್ ಬಸ್ ಹೊರಡುತ್ತಿದ್ದುದು ಜಯನಗರ ನಾಲ್ಕನೇ ಬ್ಲಾಕಿನ ಬಸ್ ಸ್ಟಾಪಿನಿಂದ. 9.30ಕ್ಕೆ ನಿಲ್ದಾಣಕ್ಕೆ ಬರುವ ಬಸ್ಸು 9.40ಕ್ಕೆ ಸರಿಯಾಗಿ ಅಲ್ಲಿಂದ ಹೊರಟು ಶಿವಾಜಿನಗರಕ್ಕೆ ಹೋಗುತ್ತಿದ್ದ ಆ ಬಸ್ಸಿಗೆ ವೀಣಾ ದಿನನಿತ್ಯದ ಪಯಣಿಗಳು. ಸ್ಟ್ಯಾಂಡಿಗ್ ಸೀಟಿನ ಕಚಿಪಿಚಿ ಇರುವುದಿಲ್ಲವಾದ್ದರಿಂದ ಅವಳಿಗೆ ಮಹಡಿಯೇ ಹಿತವೆನ್ನಿಸುತ್ತಿತ್ತು. ಬಸ್ ಹತ್ತಿದ ತಕ್ಷಣ ಮಹಡಿಯನ್ನೇರಿ ಮುಂದಿನಿಂದ ಎಡಭಾಗದ ಮೂರನೆಯ ಸೀಟಿನ ಕಿಟಕಿಯ ಬಳಿ ಖಾಯಮ್ಮಾಗಿ ಕುಳಿತು ಟಿಕೇಟು ಪಡೆದುಕೊಂಡ ತಕ್ಷಣವೇ, […]
ಗಜಲ್ ತೇಜಾವತಿ ಹೆಚ್.ಡಿ. ಅನುಭವಿಸುವಿಯಾದರೆ ನನ್ನೆಲ್ಲಾ ನೋವುಗಳೂ ನಿನ್ನರಸಿ ಬಳಿಬರುವವು ಸಖದೂಷಿಸುವಿಯಾದರೆ ನನ್ನೊಲವಿನ ಕ್ಷಣಗಳೂ ನಿನ್ನನ್ನು ತೊರೆದೋಡುವವವು ಸಖ ರಕ್ಷಿಸುವಿಯಾದರೆ ನಿನ್ನ ತೋಳ್ತೆಕ್ಕೆಯಲಿ ಅಲುಗಾಡದೆ ಸ್ತಬ್ಧವಾಗಿರುವೆನುಭಕ್ಷಿಸುವಿಯಾದರೆ ನನ್ನಿರುವಿಕೆಯ ಸುಳಿವುಗಳೂ ಹಿಂಬಾಲಿಸದಿರುವವು ಸಖ ಪೂಜಿಸುವೆಯಾದರೆ ಪಯಣದುದ್ದಕ್ಕೂ ನಿನ್ನಡಿಗಳಿಗೆ ಮೆಟ್ಟಿಲಾಗಿ ನಿಲ್ಲುವೆನುಧಿಕ್ಕರಿಸುವಿಯಾದರೆ ನನ್ನಡಿಯ ಧೂಳು ಕಣಗಳೂ ಸೋಕದಿರುವವು ಸಖ ಗೌರವಿಸುವಿಯಾದರೆ ಮನದ ಮೂಲೆಯಾದರೂ ಸಾಕು ಅಸ್ತಿತ್ವಕ್ಕೆಅವಮಾನಿಸುವಿಯಾದರೆ ನೆನಪುಗಳು ಹೃದಯದಿಂದಲೇ ಬೇರುಸಹಿತ ಕಿತ್ತೊಗೆಯುವವು ಸಖ ಪ್ರೇಮಿಸುವಿಯಾದರೆ ನೂರು ದಿನದ ಬದುಕು ಮೂರೇ ಕ್ಷಣವಾದರೂ ತೃಪ್ತಿ ‘ತೇಜ’ದ್ವೇಷಿಸುವಿಯಾದರೆ ಸಹಸ್ರ ವರ್ಷಗಳೂ ಕೂಡ ಸಂಕೋಲೆಯ […]
ಗಜಲ್ ಪ್ರತಿಮಾ ಕೋಮಾರ ವೈಷಮ್ಯದ ಮನಸುಗಳ ಪ್ರೀತಿಯ ಮಾತಿನಿಂದ ಸೆಳೆಯಬೇಕು ನಾವುಒಡೆದ ಕನಸುಗಳ ಬೆಳಕಿನ ದೀಪವಿಟ್ಟು ಹೊಸೆಯಬೇಕು ನಾವು ತಾಳ್ಮೆಯಿಲ್ಲದ ಬದುಕು ಸರಿಯ ದಡ ಸೇರುವುದೇ?ವೃಕ್ಷದ ಫಲ ಹಣ್ಣಾಗಿ ಮಾಗುವವರೆಗೆ ಕಾಯಬೇಕು ನಾವು ಸುಖ ದುಃಖಗಳು ಎಲ್ಲರ ಜೀವನದ ಇಬ್ಬದಿಗಳುನೋವ ಕಂಗಳ ಸಾಂತ್ವನದ ಹಾಡಿನಿಂದ ನಗಿಸಬೇಕು ನಾವು ಸಾಧನೆಯ ಹಾದಿಯಲಿ ಮಲ್ಲಿಗೆಯ ಹಾಸಿರದು ಎಂದಿಗೂಎಡರು ತೊಡರುಗಳನ್ನು ಹಠದಿಂದ ಮೀರಿ ಜಯಿಸಬೇಕು ನಾವು ಹುಟ್ಟಿದ ಎಲ್ಲಾ ಜೀವಿಗಳು ಬಾಳ ಸವೆಸಿ ಹೋಗುವುವುಬಾಡಿದ “ಪ್ರತಿ “ಬದುಕ ಮಾಣಿಕ್ಯವಾಗಿಸಲು ಪ್ರಯತ್ನಿಸಬೇಕು ನಾವು […]
ಗಜಲ್ ಸ್ಮಿತಾ ಭಟ್ ಎದೆಯ ಮಾತುಗಳು ಮೊರೆಯುತ್ತಿದೆ ನನಗೂ ನಿನಗೂ/ಅಂತರಂಗದ ಆಹ್ವಾನ ಹಿತನೀಡುತ್ತಿದೆ ನನಗೂ ನಿನಗೂ/ ಕಣ್ಣ ಗೊಳದಲಿ ನೂರಾರು ಕನಸುಗಳ ಚಲನವಲನನಭವ ತೋರಿಸಿ ಹಗುರಾಗಬೇಕಿದೆ ನನಗೂ ನಿನಗೂ/ ಆತುಕೊಂಡೇ ಬದುಕುವ ಹಂಬಲ ಕೆರಳುತ್ತದೆ ಕೆಲವೊಮ್ಮೆಸಾಕೆಂದು ಸರಿಸದೆ ಒಳಗೊಳ್ಳುವುದಿದೆ ನನಗೂ ನಿನಗೂ/ ಮೋಹದ ಸೆಳೆತಕೆ ಮನಸೋತ ವಾಂಛೆಯಲ್ಲವಿದು ಗೆಳೆಯಾಈಗಷ್ಟೇ ಹನಿಯಾಗಿದ್ದೇನೆ ಕಡಲಾಗುವುದಿದೆ ನನಗೂ ನಿನಗೂ/ ಪಯಣದ ತಿರುವುಗಳಿಗೆ ಹೆಸರಲಿಗೆಯ ಹಂಗೇಕೆ ದೊರೆಯೇಮರೆಯದೇ ಸರಿ ದಾರಿಯಲಿ ಕೂಡುವುದಿದೆ ನನಗೂ ನಿನಗೂ/ ಮೌನವಾಗಿದ್ದೇ ಮುನ್ನುಡಿ ಬರೆದಾಗಿದೆ ಬದುಕಿಗೆ ಓದಿ ಬಿಡುಇಲ್ಲಬಿಡು […]
ಗಜಲ್ ಪ್ರಭಾವತಿ ಎಸ್ ದೇಸಾಯಿ ವಿರಹದುರಿಗೆ ಜೀವವು ಪತಂಗದಂತೆ ಸುಟ್ಟು ಶವವಾಗಲಿ ರಾತ್ರಿಕಂಡ ಕನಸ ಹೂ ದಳಗಳು ಉದುರಿ ಉಸಿರು ಸಮಾಧಿಯಾಗಲಿ ರಾತ್ರಿ ಎದೆಭಾರವಾಗಿದೆ ನೆನಪಿನ ಗಂಟು ಹೊತ್ತು ಬಂಡಿ ಸಾಗಲಿ ರಾತ್ರಿಬದುಕು ಹಗುರಾಗಲು ಬೆಂದು ಉರಿವ ದೇಹಕೆ ತಂಬೆಳಕಾಗಲಿ ರಾತ್ರಿ ದಣಿದ ಕಣ್ಣ ರೆಪ್ಪೆಗಳು ನಿಂತು ನಿದ್ದೆಗೆ ಬೇಲಿಯಾಗಲಿ ರಾತ್ರಿಮಧುರ ಗಳಿಗೆಗಳ ಕಾಯುವ ಹೃದಯಗಳು ಒಲಿದು ಒಂದಾಗಲಿ ರಾತ್ರಿ ಮನದಾಳದಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರವಾಗಲಿ ರಾತ್ರಿನೊಂದ ಜೀವಿಗಳಿಗೆ ಜಗದ ಎಲ್ಲ ಸುಖವು ಅನುಭವವಾಗಲಿ ರಾತ್ರಿ ಅಗಲಿಕೆ […]
ಗಜಲ್ ಮದುಶಾಲೆಯ ಹೊಸ್ತಿಲಲ್ಲಿ…
ವಿಶೇಷ ಲೇಖನ ಗಜಲ್ ಮದುಶಾಲೆಯ ಹೊಸ್ತಿಲಲ್ಲಿ… ಡಾ. ಮಲ್ಲಿನಾಥ ಎಸ್. ತಳವಾರ ಪ್ರೀತಿಯೇ ಈ ಜಗದ ಸುಂದರ ಬುನಾದಿ. ಎಲ್ಲ ಚಟುವಟಿಕೆಗಳಿಗೆ ಹೃದಯ ಬಡಿತದ ಪಿಸುಮಾತೆ ಕಾರಣ. ಸ್ಪರ್ಶಕ್ಕೂ ಎಟುಕದ ಅನುಭವಗಳೆಲ್ಲವನ್ನು ಕಟ್ಟಿಕೊಡುವುದೆ ಸಾಹಿತ್ಯ. ಆ ಸಾಹಿತ್ಯದ ಸಸಿಗೆ ನಮ್ಮ ಭಾವನೆಗಳೆ ವರ್ಷಧಾರೆ..!! ಭಾವಗಳ ಸಂಗಮವೇ ಆ ಅಕ್ಷರ ಅಕ್ಷಯ ಪಾತ್ರೆ. ಸುಂದರ ಸಮಾಜದ ಪ್ರತಿಬಿಂಬವನ್ನು ಪ್ರತಿನಿಧಿಸುವ ದರ್ಪಣವೇ ಈ ಅಕ್ಷರ ಲೋಕ..!! ಇದೊಂದು ಭಾವನೆಗಳ ಕಲ್ಪನಾತ್ಮಕ ಪರಪಂಚ. ಇದು ಕ್ರಿಯಾಶೀಲತೆ, ಭಾಷೆ, ವರ್ಣಗಳು ಮತ್ತು […]
ಬದುಕು ಎಷ್ಟೊಂದು ಸುಂದರ
ಲೇಖನ ಚಿಕ್ಕ ಪುಟ್ಟ ಸಂಗತಿಗಳಲ್ಲೇ ಸಂತೃಪ್ತಿ ಕಾಣುತ್ತಿರಿ ಆಗ ಬದುಕು ಎಷ್ಟೊಂದು ಸುಂದರ. ಪಲ್ಲವಿ ಪ್ರಸನ್ನ ಬೆಳಗಾಗಲೆoದೆ ಕತ್ತಲು ,ಗೆಲ್ಲಲೆoದೆ ಸೋಲು,ನಗುವಿನ ಜೊತೆ ದುಃಖ ಇದ್ದೇ ಇರುತ್ತದೆ ,ಅದರೂ ಚಿಕ್ಕ ಪುಟ್ಟ ಸಂಗತಿಗಳಲ್ಲೇ ನಾವು ಆನಂದ ಅನುಭವಿಸುತ್ತೇವಲ್ಲ ಅದು ನಮಗೆ ಅಪ್ಪಟ ಆರೋಗ್ಯ ,ಉಲ್ಲಾಸಿತರಾಗಿಡಲು ಸಹಾಯಮಾಡುತ್ತದೆ. ತಲೆ ಬಾಚಿಕೊಳ್ಳುವಾಗ ಉದುರಿದ ಕೂದಲ ಬಗ್ಗೆ ಕೊರಗದೇ ಇದ್ದ ಕೂದಲನ್ನು ನೇವರಿಸುತ್ತ ಅದರ ಆರೈಕೆಯಲಿ ಮಗ್ನವಾಗಿ ಖುಷಿ ಅನುಭವಿಸಬೇಕು. ಒಂದು ಒಳ್ಳೆ ಪುಸ್ತಕವನ್ನು ಓದುವಾಗ ಅದರ ಇಂಚಿಂಚೂ ,ಪ್ರತೀ ಸಾಲನ್ನೂ […]
ಗಜಲ್
ಗಜಲ್ ಶೈಲಜಾ.ವಿ.ಕೋಲಾರ ಊರಿಗೆ ಊರೇ ಬೆಂಕಿಯಲ್ಲಿ ಬೇಯುತ್ತಿದೆ ಕಾಯುವರಾರಿಲ್ಲಿಜಾತಿಗೆ ಜಾತಿ ಜಿದ್ದಾಜಿದ್ದಿ ಶಾಂತಿ ಸೊರಗುತ್ತಿದೆ ಕಾಯುವರಾರಿಲ್ಲಿ ಕಳೆ ಬೆಳೆದ ಹೊಲದಲ್ಲಿ ಬೆಳೆ ಬೆಳೆಯಲು ಜಾಗವುಂಟೇಕೂಳಿಲ್ಲದ ಹಸುಳೆಯ ಕೂಗು ಒಣಗುತ್ತಿದೆ ಕಾಯುವರಾರಿಲ್ಲಿ ಸ್ವಸ್ಥ ಸಂದೇಶ ಹೊತ್ತುಬಂದ ಬಿಳಿ ಪಾರಿವಾಳ ಕೆಂಪಾಗಿ ಹಾರುತ್ತಿದೆಗಾಯ ಒಸರುವ ರಕ್ತಕೆ ಗಾಳಿ ಗೋಳಾಡುತ್ತಿದೆ ಕಾಯುವರಾರಿಲ್ಲಿ ಮೇಲು ಕೀಳೆಂಬ ಬೇರು ಬಲವಾಗಿ ಮತ ಧರ್ಮ ಸಿಟಿಲೊಡೆದಿದೆಊರ ಕೆರೆ ಜಾಲಿ ಮರದ ಮುಳ್ಳು ನಂಜೇರುತ್ತಿದೆ ಕಾಯುವರಾರಿಲ್ಲಿ ಹಲವು ಹೂಗಳು ಒಂದೇ ಮಾಲೆಯಲಿ ನೋಟ ಸೆಳೆದಿವೆಕುರಬುವ ಕೈಗೆ ಮಾತಿಲ್ಲದ […]
ಪವರ್ ಲೂಮ್…!
ಪವರ್ ಲೂಮ್…!(ನೇಕಾರನ ಸ್ವಗತ) ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊತ್ತು ಕೂಡ ಮೂಡದ ಹೊತ್ತಿಗೆಈಜುಗಾರ ತುಂಬು ಹೊಳೆ ಧುಮಿಕಿದ ಹಾಗೆ,ಮೈಮುರಿವ ಆಯಾಸದಲುಒಂದು ದಿನ ತಪ್ಪದ ಹಾಗೆಗುಂಡಿಯೊಳು ಇಳಿದರಾಯ್ತು – ಕಾಲೊದರಿ…‘ತನ್ನ ಪುಟ್ಟ ಎಳೆಯ ಹಾಸುಹೊಕ್ಕಲಿನೂಲಿಗೇ ಅರಿವೆ ನೇಯುವ ಸಿರಿಲಾಳಿಗೋ ಮುಗಿಲಂತೆ ಗುಡುಗಿಹರಿದೋಡುವ ತವಕ!’ ನೇಯುವುದುನಮಗೆ ಅಂತರಂಗದಲಿ ಒಪ್ಪಿಅಪ್ಪಿದ ಕಸುಬುಹಗಲಿರಲಿ ಇರುಳಿರಲಿಅಥವ ನಡುರಾತ್ರಿಯೇ ಇರಲಿಬೆತ್ತಲೆ ಬೆಚ್ಚಗೆ ಮುಚ್ಚುವ ಬದುಕಲಿಮನೆಯ ಒಬ್ಬೊಬ್ಬರಿಗೂ ಕೈತುಂಬ ಕೆಲಸ!ಇಷ್ಟಾದರೂ ಒಂದೆರಡು ನವೆದ ಅಂಗಿತೇಪೆಯಾದ ಪಂಚೆ ನಮ್ಮೊಡಲ ಮುಚ್ಚಲುಒಳಗಿರದು ಒಂದು ಕಾಚ ಎಂದೂ! ದಢಕ್ಕನೆ-ನಮ್ಮ ತುತ್ತಿನ […]