Category: ಗಜಲ್ ವಿಶೇಷ

 ಗಜಲ್ ಕುರಿತು ಒಂದಿಷ್ಟು ಮಾತು

ಲೇಖನ ಸಂಗಾತಿ

ಗಜಲ್ ಕುರಿತು ಒಂದಿಷ್ಟು ಮಾತು

ಅನಸೂಯ ಜಹಗೀರದಾರ

ಗಜಲ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ…..

‘ಗಜಲ್’ ಎನ್ನುವ ಶಬ್ದವು ಕಿವಿಗೆ ಚುಂಬಿಸುತ್ತಲೆ ಹೃದಯದ ಮಿಡಿತ ಪುಳಕಗೊಳ್ಳುತ್ತದೆ. ತಾಜಾ ಬೆಣ್ಣೆಯ ಕೋಮಲತೆ, ಅರಳಿ ನಿಂತ ಪುಷ್ಪ ಲತೆಯ ಪರಿಮಳದ ಅನುಭೂತಿಯನ್ನು ಕರುಣಿಸುತ್ತದೆ. ಹಸಿದ ಒಡಲನ್ನು ತಣಿಸುವ, ಅಂಧಕಾರವನ್ನು ಮರೆಯಾಗಿಸುವ ಹೊಳಪಿನ ಚಿಂಗಾರಿಯಿದು.

ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರ ವರ್ಣದ ಬಾಳೆಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.

ಗಜಲ್ ಸಾಹಿತ್ಯ ಮತ್ತು ಸವಾಲುಗಳು

ಲೇಖನ ಗಜಲ್ ಸಾಹಿತ್ಯ ಮತ್ತು ಸವಾಲುಗಳು ಡಾ. ಮಲ್ಲಿನಾಥ ಎಸ್.ತಳವಾರ ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ ‘ಮನುಷ್ಯ’ ನ ವಿಕಾಸ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದ. ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ‘ಭಾಷೆ’ ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. “ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ” ( ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. […]

ಗಜಲ್ ಸಿದ್ಧರಾಮ ಕೂಡ್ಲಿಗಿ ನನಸಾದ ಕನಸುಗಳು ಮತ್ತೆ ಕನಸಾದವಲ್ಲ ಅದೆಂಥ ನೋವುಕಂಬನಿಯೆಲ್ಲ ಮುತ್ತಾಗಿ ಮತ್ತೆ ಕಂಬನಿಯಾದವಲ್ಲ ಅದೆಂಥ ನೋವು ಇರುಳ ಕನವರಿಕೆಗಳೆಲ್ಲ ನೆನಪಿನೊಂದಿಗೆ ಉರಿವ ಚಿಕ್ಕೆಗಳಾದವುತಣ್ಣಗಿದ್ದ ಚಂದಿರ ಮತ್ತೆ ಉರಿಗೋಳವಾದನಲ್ಲ ಅದೆಂಥ ನೋವು ನೀ ನಡೆದು ಹೋದ ಹಾದಿಯ ಹೂಗಳೆಲ್ಲ ಮುಖ ಬಾಡಿಸಿದವುಮುಳ್ಳುಗಳೆಲ್ಲ ಹೂವಾಗಿ ಮತ್ತೆ ಮುಳ್ಳಾದವಲ್ಲ ಅದೆಂಥ ನೋವು ಉಲ್ಲಾಸದಿಂದಿದ್ದ ತಂಗಾಳಿಯೂ ಸಹ ಚಂಡಮಾರುತವಾಯಿತುತಣ್ಣನೆಯ ಮಳೆಯೂ ಕೆಂಡದ ಮಳೆಯಾಯಿತಲ್ಲ ಅದೆಂಥ ನೋವು ನಿನ್ನೆದುರು ನಲಿಯುತ್ತಿದ್ದ ಸಿದ್ಧನ ಹೃದಯ ಮಿಡಿತವನ್ನೇ ಮರೆತಿದೆಸಂತಸದಿಂದಿದ್ದ ಉಸಿರು ವೇದನೆಯ ಉಸಿರಾಯಿತಲ್ಲ ಅದೆಂಥ […]

ಗಜಲ್ ಪ್ರೇಮಾ ಹೂಗಾರ ಅಳು ಬಂದರೂ ಅಳಲಾರೆ ಆ ಹನಿಯಲ್ಲಿ ಜಾರಿಹೋಗುವೆ ಎಂಬ ಸಂಕಟನಗು ಬಂದರೂ ನಗಲಾರೆ ಆ ನಗುವಿನೊಂದಿಗೆ ಕಳೆದುಹೋಗುವೆ ಎಂಬ ಸಂಕಟ ನಿನ್ನ ಗಜಲ್ ಸಾಲಿನಲ್ಲಾದರೂ ಜೀವಂತ ಇರುವೆನಲ್ಲ ಎಂಬುದೇ ಸಮಾಧಾನಹಾಡು ಬಂದರೂ ಹಾಡಲಾರೆ ಆ ಹಾಡಿನೊಂದಿಗೆ ಹಾರಿಹೋಗುವೆ ಎಂಬ ಸಂಕಟ ಅಕ್ಷರಗಳ ಜೊತೆಗೇ ಒಂದಾಗಿ ಬೆರೆತೆವು ನಲಿದೆವು ಮುನಿಸ ತೋರಿದೆವು ರೋದಿಸಿದೆವುಬರೆಯಬೇಕೆಂದರೂ ಬರೆಯಲಾರೆ ಆ ಬರಹದೊಂದಿಗೆ ಖಾಲಿಯಾಗುವೆ ಎಂಬ ಸಂಕಟ ಬದುಕಿನ ಪ್ರತಿ ಕ್ಷಣದಲೂ ಜೊತೆಯಾದೆವು ಪ್ರತಿ ಕ್ಷಣವನು ಹಂಚಿಕೊಂಡೆವುನಡೆಯಬೇಕೆಂದರೂ ನಡೆಯಲಾರೆ ಆ […]

ಗಜಲ್ ಮುರಳಿ ಹತ್ವಾರ್ ಹೊಳೆವ ನೀರ ಮೇಲೆ ಅರಳಿದ ತಾವರೆಯಲ್ಲಿ ನಿನ್ನದೇ ನೆನಪುಸುಳಿವ ತಂಗಾಳಿಗೆ ನಾಚಿ ಸರಿವ ಅಲೆಯಲ್ಲಿ ನಿನ್ನದೇ ನೆನಪು ಶಿಶಿರದಾ ಎಳೆಬಿಸಿಲು ಉಸಿರಿತ್ತು ತೆರೆವ ಚಿಗುರಿನೆಲೆಯಲ್ಲಿಆ ನೆಲೆಯ ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ ನಿನ್ನದೇ ನೆನಪು! ಬಸಿರೊಡೆದ ಮುಗಿಲು ಸುರಿಸುವ ತಿಳಿನೀರ ಹನಿಹನಿಗಳ ಸ್ಪರ್ಶದಲಿಹಸಿರೊಡೆದ ಮನದಿ ಮೂಡುವ ಕಾಮನಬಿಲ್ಲಿನಲ್ಲಿ ನಿನ್ನದೇ ನೆನಪು! ನೆಗೆನೆಗೆದು ಧುಮುಕುತ್ತ ಸರಿಸರಿವ ನದಿಗಳ ಬಳುಕಿನಲ್ಲಿಅಬ್ಬರದ ಅಲೆಗಳಲಿ ದಡವನಪ್ಪುವ ಶರಧಿಯಲ್ಲಿ ನಿನ್ನದೇ ನೆನಪು! ಚಳಿಯೊಡೆವ ಇರುಳುಗಳು ಮಬ್ಬಿಟ್ಟ ನಸುಕಿನ ಮಂಜಿನಲಿರಾಧೆಯ ನೆನೆನೆನೆದು ಮೆರೆವ […]

ಗಜಲ್ ಸುಜಾತಾ ರವೀಶ್ ನೆಲವ ನೋಡುತ ನಡೆಯಲು ಒಲವು ಪದವಾಗಿ ಇಳಿಯಿತಲ್ಲ ಗೆಳೆಯಾಛಲವ ಬಿಡುತ ಸಾಗಿರಲು ನಲಿವು ಹದನಾಗಿ ಉಳಿಯಿತಲ್ಲ ಗೆಳೆಯಾ ಬಲವ ತೋರಲು ಬದುಕಿದು ಗೆಲುವು ಕಾಣುವುದು ತೋರಿಕೆಯಲಿ ಮಾತ್ರನಿಲುವ ಬದಲು ಮಾಡಿರಲು ಜಗವು ಸೊಗವೆಂದು ತಿಳಿಯಿತಲ್ಲ ಗೆಳೆಯಾ ಹಮ್ಮಿನ ಪರದೆ ಸುತ್ತೆತ್ತಲೂ ಧಿಮ್ಮನೆ ಕವಿಯುತ ಮಂಜಾಯಿತೇಕೆ ದೃಷ್ಟಿ ಬಿಮ್ಮನು ತೊರೆದು ವರ್ತಿಸಲು ಘಮ್ಮನೆ ಪರಿಮಳ ಸುಳಿಯಿತಲ್ಲ ಗೆಳೆಯಾ ಎಳವೆ ಕಲಿಸಿದ ರಾಗಗಳ  ಆಲಾಪ ಮರೆತರೆ ಪ್ರಬುದ್ದರಾದಂತೆಯೇಸುಳಿವೆ ಕಾಣಿಸದೆ ನೋವುಗಳ ಪ್ರಲಾಪ ಜೀವನದಿ ಅಳಿಯಿತಲ್ಲ ಗೆಳೆಯಾ ಅಧ್ಯಾತ್ಮ […]

ಅಂಕಣ ಗಜಲ್ ಜಯಶ್ರೀ.ಭ. ಭಂಡಾರಿ. ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ ದಿನಮರೆಯಲಾರೆ ನಾವಿಬ್ಬರೂ ಸಂಧಿಸಿದ ಆ ಸುದಿನ ಸಖನೇ ಜೋರಾದ ಮಳೆ ಅಬ್ಬರಕ್ಕೆ ನಡುಗಿ ನಿಂತಿದ್ದೆ ಮರದ ಕೆಳಗೆಸರಿ ಸಮಯಕೆ ಹಿತವಾಗಿ ಬಂದು ತುಂಬಿ ನಿಂತೆ ಮೈಮನ ಸಖನೇ ಪ್ರೀತಿ ದೇವನಿಟ್ಟ ವರ ಅದಕೆ ನೀ ನನಗೆ ದಕ್ಕಿದೆ ನೀ ನಿಟ್ಟೆ ಹಣೆಗೆ ಚುಕ್ಕಿ ಅದಕೆ ಸಲ್ಲಿಸುವೆ ದೇವಗೆ ನಮನ ಸಖನೇ ಪ್ರತಿ ಬಾರಿ ಈ ದಿನ ನಮ್ಮದೆ ಗುಲಾಬಿಯಲಿ ರಂಗಾಗಲುಹೊಸ ಚೈತನ್ಯ ತುಂಬಿ ಬರುತಿರಲು ಒಲವ ಗಾನ […]

Back To Top