ಕಾರ್ಮಿಕ

ಕಾರ್ಮಿಕ

ಕವಿತೆ ಕಾರ್ಮಿಕ ಆನಂದ ಆರ್ ಗೌಡ ತಾಳೇಬೈಲ್ ಹೊತ್ತಿನ ಹಸಿವು ನೀಗಿಸಲುಸವೆದ ಶ್ರಮ ಬೆಮರಾಗಿ ಮುತ್ತಿಡುತ್ತಿದೆವಾಸವಿಯ ಹಣೆಗೆ ನಿನ್ನ ಅಳುಕು ನಿನ್ನ ಫೋಟೋಜಗವೇ ತೆಗೆದು ತುರುಕಿದೆ ಗ್ಯಾಲರಿಗೆನೀನು ನೀನೆಂದು ಸಾರಲು ನೀ ಮಾತ್ರ ಕೋಲೆಬಸವಕೊಟ್ಟ ಬಟ್ಟೆಗೆ ಇಟ್ಟ ಕೂಲಿಗೆ ಬಸವಳಿದರೂಅವರ ಇನಾಮಿಗೆ ಸಲಾಮು ನಿನ್ನದು ಶ್ರಮದ ಫಲ ತಟ್ಟೆ ತುಂಬಲಿಲ್ಲಕೊಟ್ಟ ಪಂಚೆ ಮಾನ ಮುಚ್ಚುತ್ತಿಲ್ಲಕಾಯಕಕಂಟಿದ ಚಟ ಚಟ್ಟವೇರಲು ಕಾದಿದೆ ಈ ಜೀತ ಜೀವ ಹಿಂಡಿದರುಮುಕ್ತಿ ಪಡೆಯಲು ಪ್ರೇರಕವಾಗಿಲ್ಲಮೋಕ್ಷವೇ ಹಸಿವಾಗಿ ಪ್ರೇತವಾಗಿ ಕಾಡಿದೆ ಬೆವರ ಕೈಗಳು ತೊಳೆವ ಕೊಳೆಯುಸಿರಿಯ […]

ಜ್ಯೋತಿ

ಹಾಯ್ಕುಗಳು ಜ್ಯೋತಿ ಭಾರತಿ ರವೀಂದ್ರ ಬಾ ಓ ಬೆಳಕೆಬಾಳಿನ ಕತ್ತಲೆಯ ತೆರೆಸರಿಸಿ. ನೀಗು ನೀ ಮನಗಳಮೂಢತೆಯ ಅಂಧಕಾರವನು ತೊಲಗಿಸೋಮತಿಯನು . ನಾನು ನಾನೆಂಬದುರಭಿಮಾನವನುದೂರ ಮಾಡೋ ಬೇಗ ನೀ ಬಂದುಬೆಳಗಿಸು ಹೃದಯಜ್ಯೋತಿಯನು. ***********************************

ನಿಯತ್ತು

ಕಥೆ ನಿಯತ್ತು ಎಂ. ಆರ್.ಅನಸೂಯ ಹೊರಗಡೆ ಯಾರೋ ಬೆಲ್ ಮಾಡಿದರು,ಆಗ  ಅಡುಗೆ ಮನೆಯಲ್ಲಿದ್ದ ಜಾನಕಿ ಅಲ್ಲಿಂದಲೇ ಮಗಳಿಗೆ” ನೋಡೇ ಸುಧಾ ಅದ್ಯಾರು”. ಬಾಗಿಲು ತೆಗೆಯದೆ ಕಿಟಕಿಯಿಂದಲೇ ಹೊರಗಡೆ ನಿಂತಿದ್ದವರನ್ನು ಸುಧಾ “ಯಾರು ಬೇಕಿತ್ತು”  ಎಂದು ಕೇಳಿದಳು. ಸುಮಾರು ಐವತ್ತು ವರ್ಷದ  ಅವರು “ನನ್ನ ಹೆಸರು ಇಸ್ಮಾಯಿಲ್. ನಿಮ್ಮ ತಾಯಿಯವರ ಹತ್ರ ಮಾತಾಡ ಬೇಕಿತ್ತು . ಸ್ವಲ್ಪ ಕರೆಯಮ್ಮ’ ಎಂದರು.  ಒಳಗೆ  ಬಂದು ” ಅಮ್ಮ, ಅದ್ಯಾರೊ  ಇಸ್ಮಾಯಿಲ್ ಅಂತೆ ನಿನ್ನತ್ರ ಮಾತಾಡಬೇಕಂತೆ” ಎಂದಾಗ ಯಾರಪ್ಪ ಅವ್ರು ಎನ್ನುತ್ತಾ […]

ಗಜಲ್

ಗಜಲ್ ಶ್ರೀಲಕ್ಷ್ಮಿ ಆದ್ಯಪಾಡಿ. ಕಣ್ಣ ಜಗತ್ತಿನಲ್ಲೇ ಸಾವಿರ ಸಾವಿರ ನಕ್ಷತ್ರಗಳ ಚಿಮ್ಮಿಸಿದವನು ಅವನಿರುವುದೇ ಹಾಗೆ ಮೀಸೆಯ ತುಂಟ ನಗೆಯಲ್ಲೇ ಸಾವಿರ ಕನಸುಗಳ ಹೊಮ್ಮಿಸಿದವನು ಅವನಿರುವುದೇ ಹಾಗೆ ಮೌನವನ್ನಪ್ಪಿದ್ದ ನನ್ನೆದೆಯ ತಂತಿಯನ್ನು ಮತ್ತೆ ಬಿಗಿದು ಹೊಸ ರಾಗ ಮೀಟಿದನು ನನ್ನದೆಯ ಪ್ರತಿ ಬಡಿತದಲ್ಲೂ ನಲಿವಿನ ರಾಗಗಳ ಬೆರೆಸಿದವನು ಅವನಿರುವುದೇ ಹಾಗೆ ಕುದಿಯುತ್ತಿದ್ದ ತಪ್ತ ಎದೆಗೆ ತಂಪಿನ ಹನಿ ಬೆರೆಸಿ ಬದುಕಿನಲ್ಲಿ ಹೊಸ ಕನಸ ಬಿತ್ತಿದನು ಕಮರಿ ಹೋಗಿದ್ದ ಕನಸುಗಳಿಗೆ ಮತ್ತೆ ಹೊಸ ಜೀವ ತುಂಬಿದವನು ಅವನಿರುವುದೇ ಹಾಗೆ ಮೊರೆಯುತ್ತಿದ್ದ […]

ಗಜಲ್

ಗಜಲ್ ಶಮಾ. ಜಮಾದಾರ. ತರಗಲೆಯ ಅಲುಗಾಟದಲಿ ನಿನ್ನ ಕಾಲ್ಸಪ್ಪಳಕೆ ಕಾಯುತಿರುವೆಕೊರಕಲಿನ ಇಳಿಜಾರಿನಲಿ ನಿನ್ನ ದರುಶನಕೆ ಕಾಯುತಿರುವೆ ಲೋಕದ ನಾಲಿಗೆ ಹೊಸದೊಂದು ಪಟ್ಟಕಟ್ಟಿ ನಗುತಿದೆಅಮವಾಸ್ಯೆ ರಾತ್ರಿಯಲಿ ಬೆಳದಿಂಗಳಕೆ ಕಾಯುತಿರುವೆ ಯುಗಗಳಿಂದಲೂ ಪ್ರೀತಿ ನಿರೀಕ್ಷೆಯಲಿ ಪರಿತಪಿಸಿದೆನಿರ್ಭೀತ ಹೊಸಗಾಳಿಯಲಿ ಉಸಿರಾಟಕೆ ಕಾಯುತಿರುವೆ ಮನುಜ ಮಾಡಿದ ಮತಪಂಗಡಗಳು ಬೇಲಿ ಕಟ್ಟುತ್ತಲಿವೆಸೌಹಾರ್ದದ ಹೃದಯಗಳಲಿ ಸಮನ್ವಯಕೆ ಕಾಯುತಿರುವೆ ಎದೆಯ ಗೂಡುಗಳಲಿ ನಗಬೇಕು ನಿಸ್ವಾರ್ಥ ಶಮೆಗಳುಕಳಚಿದ ಬೇಡಿಗಳಲಿ ಅನುಸಂಧಾನಕೆ ಕಾಯುತಿರುವೆ **********************************

ಕಾವ್ಯಯಾನ

ಆಯ್ಕೆ ಪವಿತ್ರ ಎಂ. ‘ಮರ ಬೆಳೆಸಿ’ಧರೆ ಉಳಿಸಿಕೂಗುತಿದೆ ಜಾಹಿರಾತು.ಉರುಳಿಸಿ ಅಗಲಿಸಿಡಾಂಬರರಿಸಿ ಪೋಷಿಸುತಿದೆನಿಯಮದಾದೇಶ.ಅದು ಮತಿಗಾಯ್ಕೆ ಅಗ್ನಿಪರೀಕ್ಷೆಜಾಣ್ಮೆಗಾಯ್ಕೆ ವಿವೇಕಕಾಯ್ಕೆಮಗುವ ಚಿವುಟಿ ಲಾಲಿ ಹಾಡ್ವಕವಲದಾರಿ ಪಯಣ!ತೋರಿಕೆಗೇಕೆ ಧೋರಣೆ?ಜನರಾಯ್ಕೆ ನೀನುಕಾಯ್ವ ಹೊಣೆ ನಿನ್ನದೇ. ***********************

ಅಂಕಣ ಬರಹ ಫ್ರಾಂಕಿನ್‌ಸ್ಟೆನ್ ಫ್ರಾಂಕಿನ್‌ಸ್ಟೆನ್ಮೂಲ ಇಂಗ್ಲಿಷ್ : ಮೇರಿ ಷೆಲ್ಲಿ ಕನ್ನಡಕ್ಕೆ : ಶ್ಯಾಮಲಾ ಮಾಧವಪ್ರ : ಅಂಕಿತ ಪುಸ್ತಕಪ್ರಕಟಣೆಯ ವರ್ಷ :೨೦೦೭ ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೆöನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ. ನಿಸರ್ಗ ನಿಯಮಗಳ ವಿರುದ್ಧ ಹೋಗುವ ಅಹಂಕಾರವನ್ನು ಮನುಷ್ಯ ತೋರಿಸಿದರೆ ಪರಿಣಾಮವೇನಾಗಬಹುದು ಎಂಬ ವಿಷಯದ ಕುರಿತುಳ್ಳ ಈ ಕಾದಂಬರಿತನ್ನ ನಿರೂಪಣೆಗೆ ಫ್ಯಾಂಟಸಿ ಶೈಲಿಯನ್ನು ಆಯ್ದುಕೊಂಡಿದೆ ಮಾತ್ರವಲ್ಲದೆ ಅದು ಒಂದು […]

ಗಜಲ್ ಸಿದ್ಧರಾಮ ಕೂಡ್ಲಿಗಿ ನನಸಾದ ಕನಸುಗಳು ಮತ್ತೆ ಕನಸಾದವಲ್ಲ ಅದೆಂಥ ನೋವುಕಂಬನಿಯೆಲ್ಲ ಮುತ್ತಾಗಿ ಮತ್ತೆ ಕಂಬನಿಯಾದವಲ್ಲ ಅದೆಂಥ ನೋವು ಇರುಳ ಕನವರಿಕೆಗಳೆಲ್ಲ ನೆನಪಿನೊಂದಿಗೆ ಉರಿವ ಚಿಕ್ಕೆಗಳಾದವುತಣ್ಣಗಿದ್ದ ಚಂದಿರ ಮತ್ತೆ ಉರಿಗೋಳವಾದನಲ್ಲ ಅದೆಂಥ ನೋವು ನೀ ನಡೆದು ಹೋದ ಹಾದಿಯ ಹೂಗಳೆಲ್ಲ ಮುಖ ಬಾಡಿಸಿದವುಮುಳ್ಳುಗಳೆಲ್ಲ ಹೂವಾಗಿ ಮತ್ತೆ ಮುಳ್ಳಾದವಲ್ಲ ಅದೆಂಥ ನೋವು ಉಲ್ಲಾಸದಿಂದಿದ್ದ ತಂಗಾಳಿಯೂ ಸಹ ಚಂಡಮಾರುತವಾಯಿತುತಣ್ಣನೆಯ ಮಳೆಯೂ ಕೆಂಡದ ಮಳೆಯಾಯಿತಲ್ಲ ಅದೆಂಥ ನೋವು ನಿನ್ನೆದುರು ನಲಿಯುತ್ತಿದ್ದ ಸಿದ್ಧನ ಹೃದಯ ಮಿಡಿತವನ್ನೇ ಮರೆತಿದೆಸಂತಸದಿಂದಿದ್ದ ಉಸಿರು ವೇದನೆಯ ಉಸಿರಾಯಿತಲ್ಲ ಅದೆಂಥ […]

ಗಜಲ್ ಪ್ರೇಮಾ ಹೂಗಾರ ಅಳು ಬಂದರೂ ಅಳಲಾರೆ ಆ ಹನಿಯಲ್ಲಿ ಜಾರಿಹೋಗುವೆ ಎಂಬ ಸಂಕಟನಗು ಬಂದರೂ ನಗಲಾರೆ ಆ ನಗುವಿನೊಂದಿಗೆ ಕಳೆದುಹೋಗುವೆ ಎಂಬ ಸಂಕಟ ನಿನ್ನ ಗಜಲ್ ಸಾಲಿನಲ್ಲಾದರೂ ಜೀವಂತ ಇರುವೆನಲ್ಲ ಎಂಬುದೇ ಸಮಾಧಾನಹಾಡು ಬಂದರೂ ಹಾಡಲಾರೆ ಆ ಹಾಡಿನೊಂದಿಗೆ ಹಾರಿಹೋಗುವೆ ಎಂಬ ಸಂಕಟ ಅಕ್ಷರಗಳ ಜೊತೆಗೇ ಒಂದಾಗಿ ಬೆರೆತೆವು ನಲಿದೆವು ಮುನಿಸ ತೋರಿದೆವು ರೋದಿಸಿದೆವುಬರೆಯಬೇಕೆಂದರೂ ಬರೆಯಲಾರೆ ಆ ಬರಹದೊಂದಿಗೆ ಖಾಲಿಯಾಗುವೆ ಎಂಬ ಸಂಕಟ ಬದುಕಿನ ಪ್ರತಿ ಕ್ಷಣದಲೂ ಜೊತೆಯಾದೆವು ಪ್ರತಿ ಕ್ಷಣವನು ಹಂಚಿಕೊಂಡೆವುನಡೆಯಬೇಕೆಂದರೂ ನಡೆಯಲಾರೆ ಆ […]

ಗಜಲ್ ಮುರಳಿ ಹತ್ವಾರ್ ಹೊಳೆವ ನೀರ ಮೇಲೆ ಅರಳಿದ ತಾವರೆಯಲ್ಲಿ ನಿನ್ನದೇ ನೆನಪುಸುಳಿವ ತಂಗಾಳಿಗೆ ನಾಚಿ ಸರಿವ ಅಲೆಯಲ್ಲಿ ನಿನ್ನದೇ ನೆನಪು ಶಿಶಿರದಾ ಎಳೆಬಿಸಿಲು ಉಸಿರಿತ್ತು ತೆರೆವ ಚಿಗುರಿನೆಲೆಯಲ್ಲಿಆ ನೆಲೆಯ ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ ನಿನ್ನದೇ ನೆನಪು! ಬಸಿರೊಡೆದ ಮುಗಿಲು ಸುರಿಸುವ ತಿಳಿನೀರ ಹನಿಹನಿಗಳ ಸ್ಪರ್ಶದಲಿಹಸಿರೊಡೆದ ಮನದಿ ಮೂಡುವ ಕಾಮನಬಿಲ್ಲಿನಲ್ಲಿ ನಿನ್ನದೇ ನೆನಪು! ನೆಗೆನೆಗೆದು ಧುಮುಕುತ್ತ ಸರಿಸರಿವ ನದಿಗಳ ಬಳುಕಿನಲ್ಲಿಅಬ್ಬರದ ಅಲೆಗಳಲಿ ದಡವನಪ್ಪುವ ಶರಧಿಯಲ್ಲಿ ನಿನ್ನದೇ ನೆನಪು! ಚಳಿಯೊಡೆವ ಇರುಳುಗಳು ಮಬ್ಬಿಟ್ಟ ನಸುಕಿನ ಮಂಜಿನಲಿರಾಧೆಯ ನೆನೆನೆನೆದು ಮೆರೆವ […]

Back To Top