ಗಜಲ್
ಶಮಾ. ಜಮಾದಾರ.
ತರಗಲೆಯ ಅಲುಗಾಟದಲಿ ನಿನ್ನ ಕಾಲ್ಸಪ್ಪಳಕೆ ಕಾಯುತಿರುವೆ
ಕೊರಕಲಿನ ಇಳಿಜಾರಿನಲಿ ನಿನ್ನ ದರುಶನಕೆ ಕಾಯುತಿರುವೆ
ಲೋಕದ ನಾಲಿಗೆ ಹೊಸದೊಂದು ಪಟ್ಟಕಟ್ಟಿ ನಗುತಿದೆ
ಅಮವಾಸ್ಯೆ ರಾತ್ರಿಯಲಿ ಬೆಳದಿಂಗಳಕೆ ಕಾಯುತಿರುವೆ
ಯುಗಗಳಿಂದಲೂ ಪ್ರೀತಿ ನಿರೀಕ್ಷೆಯಲಿ ಪರಿತಪಿಸಿದೆ
ನಿರ್ಭೀತ ಹೊಸಗಾಳಿಯಲಿ ಉಸಿರಾಟಕೆ ಕಾಯುತಿರುವೆ
ಮನುಜ ಮಾಡಿದ ಮತಪಂಗಡಗಳು ಬೇಲಿ ಕಟ್ಟುತ್ತಲಿವೆ
ಸೌಹಾರ್ದದ ಹೃದಯಗಳಲಿ ಸಮನ್ವಯಕೆ ಕಾಯುತಿರುವೆ
ಎದೆಯ ಗೂಡುಗಳಲಿ ನಗಬೇಕು ನಿಸ್ವಾರ್ಥ ಶಮೆಗಳು
ಕಳಚಿದ ಬೇಡಿಗಳಲಿ ಅನುಸಂಧಾನಕೆ ಕಾಯುತಿರುವೆ
**********************************