ಕವಿತೆ
ಕಾರ್ಮಿಕ
ಆನಂದ ಆರ್ ಗೌಡ ತಾಳೇಬೈಲ್
ಹೊತ್ತಿನ ಹಸಿವು ನೀಗಿಸಲು
ಸವೆದ ಶ್ರಮ ಬೆಮರಾಗಿ ಮುತ್ತಿಡುತ್ತಿದೆ
ವಾಸವಿಯ ಹಣೆಗೆ
ನಿನ್ನ ಅಳುಕು ನಿನ್ನ ಫೋಟೋ
ಜಗವೇ ತೆಗೆದು ತುರುಕಿದೆ ಗ್ಯಾಲರಿಗೆ
ನೀನು ನೀನೆಂದು ಸಾರಲು
ನೀ ಮಾತ್ರ ಕೋಲೆಬಸವ
ಕೊಟ್ಟ ಬಟ್ಟೆಗೆ ಇಟ್ಟ ಕೂಲಿಗೆ ಬಸವಳಿದರೂ
ಅವರ ಇನಾಮಿಗೆ ಸಲಾಮು ನಿನ್ನದು
ಶ್ರಮದ ಫಲ ತಟ್ಟೆ ತುಂಬಲಿಲ್ಲ
ಕೊಟ್ಟ ಪಂಚೆ ಮಾನ ಮುಚ್ಚುತ್ತಿಲ್ಲ
ಕಾಯಕಕಂಟಿದ ಚಟ ಚಟ್ಟವೇರಲು ಕಾದಿದೆ
ಈ ಜೀತ ಜೀವ ಹಿಂಡಿದರು
ಮುಕ್ತಿ ಪಡೆಯಲು ಪ್ರೇರಕವಾಗಿಲ್ಲ
ಮೋಕ್ಷವೇ ಹಸಿವಾಗಿ ಪ್ರೇತವಾಗಿ ಕಾಡಿದೆ
ಬೆವರ ಕೈಗಳು ತೊಳೆವ ಕೊಳೆಯು
ಸಿರಿಯ ನುಂಗಿ ಪುಂಗಿ ಊದುವ
ಪುಢಾರಿ ಬಾಯಿ ಕಾಯಕವೇ ಕೈಲಾಸವೆಂದಿದೆ
ಗಂಧದ ಪರಿಮಳ ಅರಿಯದ ಕಲ್ಲು
ತಾನು ತೇಯ್ಸಿಕೊಂಡು ಸವೆದರು
ಮೈಯೊಡ್ಡಿದ ಕೀರ್ತಿ ಬದುಕಿಸಿದೆ
ವಲ್ಲಿಗೆ ಶುಭ್ರ ಅರಿವೆ ತೊಡಿಸುವ
ಅವರ ರೆಟ್ಟೆಗಟ್ಟಿಗೊಳಲಿ
ಬಯಕೆ ಜೇನಾಗಲಿ
*****************
ಕಾರ್ಮಿಕರ ಬದುಕನ್ನು ಬಿಚ್ಚಿಡುವ ಕವಿತೆ..
Lines are sooper constructed sir …