ಅಂಕಣ ಬರಹ ಕಬ್ಬಿಗರ ಅಬ್ಬಿ–12 ಬಸರೀಕಟ್ಟೆ ಮತ್ತು ಬೂದಿಕಟ್ಟೆ ನಡುವಿನ ಈ ವಿಸ್ಮಯ ಆ ಇಬ್ಬರು ಆಗಲೇ ೨೭೦೦೦ ಅಡಿಗಳಷ್ಟು ಎತ್ತರ ಏರಿದ್ದರು. ಅದುವರೆಗೂ ಯಾರೂ ಏರದ ಎತ್ತರ ಅದು. ಹಿಮದ ಗಡ್ಡೆಗಳ ಇಳಿಜಾರು ಒಂದು ಕಡೆ, ದೂರ ದೂರದತ್ತ ಕಣ್ಣು ಹಾಯಿಸಿದರೆ ಕಾಣುವುದು ಬರೇ ಬಿಳಿ ಬಿಳೀ ಹಿಮ. ಅದರಡಿಯಲ್ಲಿ ಅದೆಷ್ಟು ಸಾಹಸೀ ದೇಹಗಳು ದಫನವಾಗಿವೆ ಎಂದು ಯೋಚಿಸಿ ಆತ ನಡುಗುತ್ತಾನೆ. ಬದುಕೇ ಹಾಗೆ, ಕಾಣದ ಕಾಣ್ಕೆಗೆ ಹಂಬಲಿಸುತ್ತೆ. ಎತ್ತರೆತ್ತರ ಏರಲು, ಏನೋ ಹೊಸತು..ಹೊಸ ದಿಕ್ಕು, […]
ಹಕ್ಕಿಯ ದುರಂತ
ಅನುವಾದಿತ ಕವಿತೆ ಹಕ್ಕಿಯ ದುರಂತ ವಿ.ಗಣೇಶ್ ಸಗ್ಗದ ಚೆಲುವಿನ ಹಕ್ಕಿಯು ಒಂದುಭಾನಂಗಳದಿಂದ ಧರೆಗಿಳಿದುಊರಿನ ಮನೆ ಮಂದಿರಗಳ ಮೇಲ್ಗಡೆಹಾರುತಲಿದ್ದಿತು ನಲಿನಲಿದು. ಚಿನ್ನದ ವರ್ಣದ ರನ್ನದ ರೆಕ್ಕೆಯನೀಲಿಯ ಕಂಗಳ ಆ ಹಕ್ಕಿಹಾರುತ ಬರುವುದ ನೋಡಿದ ಮಕ್ಕಳಎದೆಯಲಿ ಆನಂವೆ ಉಕ್ಕಿ ಹಕ್ಕಿಯು ಹಾರುತ ಸಾಗುವ ಜಾಡಲಿತಾವೂ ಓಡುತ ಕೆಳಗಿಂದಕೇಕೆಯ ಹಾಕುತ ನಲಿಯುತಲಿರಲುಜನ ಸೇರಿತು ಅಚ್ಚರಿಯಿಂದ ಎಂಥ ಚೆಂದದ ಚೆಲುವಿನ ಹಕ್ಕಿಏನದು ಚೆಂದ ಆ ಮೈ ಬಣ್ಣ!ಕೈಗದು ಸಿಕ್ಕರೆ ಮಾರಲು ಆಗಕೈತುಂಬ ಹಣ ಝಣ ಝಣ ಮಾರುವುದೇತಕೆ ನಾವೇ ಹಿಡಿದುಕೊಂದೇ ತಿಂದರೆ ಬಹಳ […]
ನಸುಕಿನ ಕನಸಿನಲಿ ನನ್ನವಳು
ಕವಿತೆ ನಸುಕಿನ ಕನಸಿನಲಿ ನನ್ನವಳು ಜಯಶ್ರೀ.ಭ.ಭಂಡಾರಿ .
ತಮಂಧದೆಡೆಗೆ
ಕವಿತೆ ತಮಂಧದೆಡೆಗೆ ನೂತನ ದೋಶೆಟ್ಟಿ ತುತ್ತಿಡುತ್ತ ತೋರಿದ ಚಂದಮಾಮಬೆದರಿ ಅಡಗಿದ ಮೊಲಕಣ್ಣ ಕ್ಯಾನ್ವಾಸಿನಲ್ಲಿ ಕಳೆದು ಹೋದ ಕೌತುಕ ಆಕೆಯೊಂದಿಗಿನ ಬೆಳದಿಂಗಳ ರಾತ್ರಿಕ್ಯಾಂಡಲ್ ಡಿನ್ನರ್ಭ್ರಮೆಯಲ್ಲಿ ಕರಗಿದ ಕಲ್ಪನಾ ಲೋಕ ಚಂದ್ರನ ಮೇಲೀಗ ಸೈಟ್ ಬುಕ್ಕಿಂಗ್!ನೀರಿಲ್ಲದ ಚದರಡಿಯ ಬೆಲೆ ಕೊಂಚ ಕಮ್ಮಿಪಸೆಯ ನೆಲ ಚಿನ್ನಕ್ಕೂ ಮಿಗಿಲುಲೋಡ್ ಶೆಡ್ಡಿಂಗ್ ನ ಹೋಗಲು ರಾತ್ರಿಗಳಲೂಮನೆಯ ಸ್ಕೆಚ್ಚು ತಯಾರು ಓಡುವ ಚಂದಿರನ ಹಿಡಿಯಲುಆಕಾಶಕ್ಕೆ ಇಟ್ಟು ಏಣಿಯ ಮೇಲೆವಾಮನನ ಎರಡು ಪಾದಗಳುಇನ್ನೊಂದಕ್ಕೆ ಮಂಗಳನ ಆಹ್ವಾನ ನೀರು ಗುರುತಿದ್ದರೆ ಹೇಳಿಗಾಳಿ,ಮಳೆ, ಬೆಳಕೆಲ್ಲಹುಟ್ಟುವವು ಲ್ಯಾಬಿನಲ್ಲಿನಾಳೆಗಳು ಕರೆದೊಯ್ಯಲುಬೆಳಕಿನಿಂದ ಕತ್ತಲೆಡೆಗೆ. *********************************
ಹಲವು ಭಾವಗಳನ್ನು ಒಟ್ಟಿಗೆ ಸೆರೆಹಿಡಿಯುವ ರೂಪಕಗಳು ಸೂಜಿ ಕಣ್ಣಿಂದ ತೂರಿದದಾರಕ್ಕೆ ಒಳಗಿಲ್ಲ ಹೊರಗಿಲ್ಲ ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್‍ಯ ಬಳಕುತ್ತ ತನ್ನದೊಂದು […]
ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು […]
ಸ್ವಾಭಿಮಾನಿ
ಪುಟ್ಟ ಕಥೆ ಸ್ವಾಭಿಮಾನಿ ಮಾಧುರಿ ಕೃಷ್ಣ ಸಂಬಂಧಿ ಮಹಿಳೆ…ಹನ್ನೆರಡಕ್ಕೆ ಮದುವೆಯಾಗಿತ್ತು. ಎಲ್ಲರೂ ಮೊದಲ ಮಗುವಿನ ಬರವಿನಲ್ಲಿದ್ದರೆ ಅಪ್ಪನಾಗುವವನು ಮಾಯ ! ಕಷ್ಟಪಟ್ಟು ಹುಡುಕಿ ಹುಡುಕಿ ಕರೆ ತರುತ್ತಿದ್ದರು.ಮೂರು ಮಕ್ಕಳಾದ ಮೇಲೆ ತಿಳಿವು ಬಂದದ್ದು ಇನ್ನೂ ಇಪ್ಪತ್ತರ ಗಡಿಯಲ್ಲೇ ಇದ್ದ ಯುವತಿ ಹೆಂಡತಿಗೆ. ಬಗಲಲ್ಲೆರಡು ಸೀರೆ ತುರುಕಿಕೊಂಡು ಕಾದೇ ಕಾದಳು. ಐದು ತಿಂಗಳ ಮೊಲೆಹಾಲು ಕುಡಿಯುತ್ತಿದ್ದ ಮಗುವನ್ನು ಕೆಳಗಿಳಿಸಿ ಸದ್ದಿಲ್ಲದೆ ಅಪರರಾತ್ರಿಯಲ್ಲಿ ಗಂಡನ ಹಿಂದೆ ಹೋದಳು.ಟಿಕೇಟು ಕೇಳಿದಾಗ ಮುಂದೆ ಮುದುಡಿ ಕುಳಿತ ಗಂಡನೆಡೆ ಕೈ ಮಾಡಿದಳು. ದೂರದ ತಮಿಳುನಾಡಿನಲ್ಲಿ […]
ಶ್…. ! ನಿಶ್ಯಬ್ದವಾಗಿರಿ ನೀವು
ಕವಿತೆ ಶ್…. ! ನಿಶ್ಯಬ್ದವಾಗಿರಿ ನೀವು ತೇಜಾವತಿಹೆಚ್.ಡಿ. ಅದೇ ದಾರಿಯಲ್ಲಿನಿತ್ಯ ಪ್ರಯಾಣಿಸುತ್ತಿದ್ದೆನನ್ನದೇ ಲಹರಿಯಲ್ಲಿಐಹಿಕದ ಜಂಜಾಟದಲ್ಲಿಮನಸ್ಸಿನ ಹೊಯ್ದಾಟದಲ್ಲಿ ನಿಗೂಢ ಬದುಕ ಬಯಲಿನಲ್ಲಿಎಲ್ಲವೂ ಬೆತ್ತಲೆನಮ್ಮದೇನಿದೆ ಇಲ್ಲಿ,? ಆಗೋ.. ಅಲ್ಲಿ ಗೋಚರಿಸುತ್ತಿದೆಪ್ರಶಾಂತ ನೀರವ ತಾಣ…ಇಲ್ಲೇ ಹಿತವೆನಿಸುತ್ತದೆ ನನಗೆ ಶ್……! ನಿಶ್ಯಬ್ದವಾಗಿರಿ ನೀವುಎಚ್ಚರಗೊಂಡಾರು ಮತ್ತೆ ಇದ್ದಾಗಹಾಸಿಗೆ ಹೊದಿಕೆಯಿಲ್ಲದೆ ನಲುಗಿದ ಜನರುಬೆಚ್ಚಗೆ ಮಲಗಿಹರಿಲ್ಲಿಮಣ್ಣಿನ ಪದರಗಲಾಗಿ! ಅಹಮ್ಮಿನ ಕೋಟೆಯೊಳಗೆಅಹಂಕಾರದಿಂದ ಮೆರೆದವರೆಲ್ಲಾಮಣ್ಣುಸೇರಿ ಗೆದ್ದಲಿಡಿದಿಹರಿಲ್ಲಿ.. ! ತಾನು ತಾನೆಂದು ತನ್ನವರ ಸ್ವಾರ್ಥಕ್ಕಾಗಿಕಚ್ಚಾಡಿದವರೆಲ್ಲಾಏಕಾಂಗಿಯಾಗಿ ಕೊಳೆಯುತಿಹರಿಲ್ಲಿ.. ! ಕ್ಷಣಿಕ ಬಾಳಲಿ ವಿಶ್ವ ಗೆಲ್ಲುವಶಾಶ್ವತ ಕನಸು ಕಂಡುನನಸಾಗದೇ ಉಳಿದುಕನವರಿಸಿ ನರಳಿವಸ್ತಿ ಮಾಡಿಹರಿಲ್ಲಿ.. ! […]
ಭವದ ಭಾವಸೇತು
ಕವಿತೆ ಭವದ ಭಾವಸೇತು ನಾಗರೇಖಾ ಗಾಂವಕರ್ ಮನದೊಡಲ ಕಡಲಪ್ರಕ್ಷುಬ್ಧ ಸುಳಿಗಳುಮುತ್ತಿಕ್ಕುವ ಅಲೆಗಳಾಗುತ್ತವೆ,ಆ ಪ್ರೀತಿಗೆ ಯಮುನೆ ತಟದಿ ಕೂತಹೂತ ಕಾಲಿನ ಆಕೆಮುರುಳಿಯಲಿ ಬೆರೆತಉಸಿರ ತೇಕುತ್ತಾಕಣ್ಣ ಬೆಳಕನ್ನೆ ಹಾಸಿಭಾವ ಸೇತುವಿನ ನಾಡಿ ಹಿಡಿದುಭವದ ನೆರಳಿಗೆ ಹಂಬಲಿಸುತ್ತಾಳೆ. ಯಾವ ರಾಗವದು, ಬೆಸೆದದ್ದುಒಪ್ಪುತಪ್ಮ್ಪಗಳ ಭಿನ್ನಸಹಮತಗಳ ನಡುವೆಸಂಕಲಿಸಿ ಹೃದಯಗಳ ಬೆಸುಗೆ ಹೊನಲು ಬೆಳಕಿನ ಕೂಡಮಂದ್ರಸ್ಥಾಯಿಯ ನುಡಿಸಿಅಗೋಚರದ ಮಹಲಿನಲಿಮುಕ್ತಿ ಮಂಟಪವಿಟ್ಟುರಾಗದ್ವೇಷದ ಬೆಂಕಿಯನುತಣ್ಣಗಾಗಿಸಿ ಪರವತೋರುತ್ತಾನೆ ಪ್ರೀತಿಯಲಿ ಮುಳುಗುವ ಹರಿಗೋಲುತೂತುಗಳ ಹೊದ್ದ ಬರಿದುಜೀವದ ಗೋಳು.ಅಲ್ಲೂ ಪಯಣದ ಹಂಬಲದಮುಗಿಯದಾ ಬದುಕಪ್ರೀತಿಯ ಪಾಡುಹಾಡುತ್ತಾನೆ ಪ್ರೀತಿಸುವುದೆಂದರೆಆತ್ಮಕ್ಕೆ ಆತ್ಮವೇ ಆಗಿನಿಲುಕದ ನೆಲೆಯಲ್ಲೂಆಲಿಂಗನದ ಕನಸ ಹೊತ್ತುಸಾಗುವುದು,ಎಂದವನ […]
ಸೌಗಂಧಿಕಾ
ಪುಸ್ತಕಪರಿಚಯ ಸೌಗಂಧಿಕಾ ನನಗೆ ಪ್ರವಾಸ ಮಾಡುವಾಗ ಪುಸ್ತಕದ ಪುಟಗಳನ್ನ ತೆರೆದು ಸವಿಯುವುದೆಂದರೇ ತಾಯಿ ತುತ್ತು ಮಾಡಿ ಬಾಯಿಗೆ ಹಾಕುವಾಗ ಸಿಗುವ ಸುಖದಷ್ಟೇ ನನಗೆ ಆನಂದ. “ಸೌಗಂಧಿಕಾ” ಕವನ ಸಂಕಲನ ನನ್ನ ಕೈ ಸೇರಿ ಸುಮಾರು ಆರೇಳು ತಿಂಗಳು ಕಳಿಯಿತೇನೋ ಆದರೆ ಎರಡು ಮೂರು ಬಾರಿ ಸವಿದರೂ ಕವನಸಂಕಲನದ ಜನಕಿಗೆ ನನ್ನ ಮನದಾಳದ ನುಡಿಗಳನ್ನ ಹೇಳಲು ಇಷ್ಟು ದಿನ ಬೇಕಾಯಿತು. ಎರಡು ದಿನದ ಹಿಂದೆ ಕೊಚ್ಚಿಗೆ ಪ್ರಯಾಣ ಮಾಡುವಾಗ ಮನದಲಿ ಬೇಸರದ ಛಾಯೆಯೇ ಆವರಿಸಿಕೊಂಡಿತು. ಈ ಬೇಸರವನ್ನ ದೂರಮಾಡಿದ್ದು […]