ಕವಿತೆ
ತಮಂಧದೆಡೆಗೆ
ನೂತನ ದೋಶೆಟ್ಟಿ
ತುತ್ತಿಡುತ್ತ ತೋರಿದ ಚಂದಮಾಮ
ಬೆದರಿ ಅಡಗಿದ ಮೊಲ
ಕಣ್ಣ ಕ್ಯಾನ್ವಾಸಿನಲ್ಲಿ ಕಳೆದು ಹೋದ ಕೌತುಕ
ಆಕೆಯೊಂದಿಗಿನ ಬೆಳದಿಂಗಳ ರಾತ್ರಿ
ಕ್ಯಾಂಡಲ್ ಡಿನ್ನರ್
ಭ್ರಮೆಯಲ್ಲಿ ಕರಗಿದ ಕಲ್ಪನಾ ಲೋಕ
ಚಂದ್ರನ ಮೇಲೀಗ ಸೈಟ್ ಬುಕ್ಕಿಂಗ್!
ನೀರಿಲ್ಲದ ಚದರಡಿಯ ಬೆಲೆ ಕೊಂಚ ಕಮ್ಮಿ
ಪಸೆಯ ನೆಲ ಚಿನ್ನಕ್ಕೂ ಮಿಗಿಲು
ಲೋಡ್ ಶೆಡ್ಡಿಂಗ್ ನ ಹೋಗಲು ರಾತ್ರಿಗಳಲೂ
ಮನೆಯ ಸ್ಕೆಚ್ಚು ತಯಾರು
ಓಡುವ ಚಂದಿರನ ಹಿಡಿಯಲು
ಆಕಾಶಕ್ಕೆ ಇಟ್ಟು ಏಣಿಯ ಮೇಲೆ
ವಾಮನನ ಎರಡು ಪಾದಗಳು
ಇನ್ನೊಂದಕ್ಕೆ ಮಂಗಳನ ಆಹ್ವಾನ
ನೀರು ಗುರುತಿದ್ದರೆ ಹೇಳಿ
ಗಾಳಿ,ಮಳೆ, ಬೆಳಕೆಲ್ಲ
ಹುಟ್ಟುವವು ಲ್ಯಾಬಿನಲ್ಲಿ
ನಾಳೆಗಳು ಕರೆದೊಯ್ಯಲು
ಬೆಳಕಿನಿಂದ ಕತ್ತಲೆಡೆಗೆ.
*********************************
ಧ್ವನಿಪೂರ್ಣ …ಕವಿತೆ
ಧನ್ಯವಾದಗಳು