ಭವದ ಭಾವಸೇತು

ಕವಿತೆ

ಭವದ ಭಾವಸೇತು

ನಾಗರೇಖಾ ಗಾಂವಕರ್

ಮನದೊಡಲ ಕಡಲ
ಪ್ರಕ್ಷುಬ್ಧ ಸುಳಿಗಳು
ಮುತ್ತಿಕ್ಕುವ ಅಲೆಗಳಾಗುತ್ತವೆ,
ಆ ಪ್ರೀತಿಗೆ

ಯಮುನೆ ತಟದಿ ಕೂತ
ಹೂತ ಕಾಲಿನ ಆಕೆ
ಮುರುಳಿಯಲಿ ಬೆರೆತ
ಉಸಿರ ತೇಕುತ್ತಾ
ಕಣ್ಣ ಬೆಳಕನ್ನೆ ಹಾಸಿ
ಭಾವ ಸೇತುವಿನ ನಾಡಿ ಹಿಡಿದು
ಭವದ ನೆರಳಿಗೆ ಹಂಬಲಿಸುತ್ತಾಳೆ.

45 Greatest Paintings of Modern Art - Owlcation - Education

ಯಾವ ರಾಗವದು, ಬೆಸೆದದ್ದು
ಒಪ್ಪುತಪ್ಮ್ಪಗಳ ಭಿನ್ನ
ಸಹಮತಗಳ ನಡುವೆ
ಸಂಕಲಿಸಿ ಹೃದಯಗಳ ಬೆಸುಗೆ

ಹೊನಲು ಬೆಳಕಿನ ಕೂಡ
ಮಂದ್ರಸ್ಥಾಯಿಯ ನುಡಿಸಿ
ಅಗೋಚರದ ಮಹಲಿನಲಿ
ಮುಕ್ತಿ ಮಂಟಪವಿಟ್ಟು
ರಾಗದ್ವೇಷದ ಬೆಂಕಿಯನು
ತಣ್ಣಗಾಗಿಸಿ ಪರವ
ತೋರುತ್ತಾನೆ ಪ್ರೀತಿಯಲಿ

ಮುಳುಗುವ ಹರಿಗೋಲು
ತೂತುಗಳ ಹೊದ್ದ ಬರಿದು
ಜೀವದ ಗೋಳು.
ಅಲ್ಲೂ ಪಯಣದ ಹಂಬಲದ
ಮುಗಿಯದಾ ಬದುಕ
ಪ್ರೀತಿಯ ಪಾಡು
ಹಾಡುತ್ತಾನೆ

ಪ್ರೀತಿಸುವುದೆಂದರೆ
ಆತ್ಮಕ್ಕೆ ಆತ್ಮವೇ ಆಗಿ
ನಿಲುಕದ ನೆಲೆಯಲ್ಲೂ
ಆಲಿಂಗನದ ಕನಸ ಹೊತ್ತು
ಸಾಗುವುದು,
ಎಂದವನ ಪ್ರೀತಿಯ
ರಾಧೆಯಾಗುವುದೆಂದರೆ

ಅವನ ಪರವಶತೆಗೆ
ತನ್ನೆಲ್ಲವನ್ನೂ ಮರೆತುಬಿಡುವುದು.
ನಾಗರೇಖಾ ಗಾಂವಕರ

*****************************

One thought on “ಭವದ ಭಾವಸೇತು

Leave a Reply

Back To Top