ಕವಿತೆ
ನಸುಕಿನ ಕನಸಿನಲಿ ನನ್ನವಳು
ಜಯಶ್ರೀ.ಭ.ಭಂಡಾರಿ
ತೋಟದ ತುಂಬ ಪಾರಿಜಾತದ ಘಮ
ನಸುಕಿನಲಿ ಮನದ ತುಂಬ ನಿನ್ನದೆ ಘಮ
ಹೂವಿಂದ ಹೂವಿಗೆ ಹಾರುವ ದುಂಬಿ
ತಾಜಾ ಪರಿಮಳ ಹೀರಿ ಹಿಗ್ಗಿನಲಿ ಮೈದುಂಬಿ
ಕಣ್ಣಬಿಂಬದ ತುಂಬ ನಿನ್ನದೆ ಕನಸು
ನವಿಲಾದ ಮನಸಿನಲಿ ಮೈತಳೆದ ಸೊಗಸು
ಅರಗಳಿಗೆ ಬಿಟ್ಟಿರಲಾರದ ಜೀವಸೆಲೆ ನೀ
ಹೂಗಳರಾಶಿಯಲಿ ಕೋಮಲೆ ಕಂಡೆ
ಬೆಳಗಿನ ಬೆಡಗಿನಲಿ ಅರೆಬಿರಿದ ಮೊಲ್ಲೆ
ಹಸಿರಹಾಸಿನ ಮೇಲೆ ಮಂಜಿನ ಹನಿಲೀಲೆ
ಭೂರಮೆಯ ತೂಗಲುಬಂದ ರವಿಯಲಾಲಿ
ಭ್ರಮರಗಳ ಗುಂಯಗುಡುವ ಸುವ್ವಲಾಲಿ
ನಿಸರ್ಗದ ನಿತ್ಯೊತ್ಸವದಲಿ ಮನಸ್ಸು ಅರಳಿ
ನನ್ನವಳ ಬರಸೆಳೆಯಲು ಒಲವು ನರಳಿ
ಕನಸುಗಳು ಕಾಮನಬಿಲ್ಲಾಗಿ ಸುತ್ತಿಸುರಳಿ
ಚಂದ್ರಾಮನಂಥ ಮನದನ್ನೆಯ ಮೊಗವು ಮರಳಿ
ಮೈಮನ ಪುಲಕಿತವಾಗಿ ಚಿಟ್ಟೆಯಾಗಿ
ಸಾಕುವಿರಹ ಸನಿಹತೋರೆ ಸಂಗಾತಿಯೆ
ಮಾಟಗಾತಿ ಅವಳು ಜಂಬಗಾತಿ ಎದಿರು ನಿಂದಳು
ಅವರ್ಣನೀಯ ಆನಂದದಲಿ ತಬ್ಬಲು ಎದ್ದೆ ಕೆಳಗೆ ಬಿದ್ದೆ...
.
Very amazing kavite Really proud of you madam.
ಉತ್ತಮ ಕವನ ಮನದಾಳವನ್ನು ಬಿಂಬಿಸುತ್ತದೆ