ಸೌಗಂಧಿಕಾ

ಪುಸ್ತಕಪರಿಚಯ

ಸೌಗಂಧಿಕಾ

ನನಗೆ ಪ್ರವಾಸ ಮಾಡುವಾಗ ಪುಸ್ತಕದ ಪುಟಗಳನ್ನ ತೆರೆದು ಸವಿಯುವುದೆಂದರೇ ತಾಯಿ ತುತ್ತು ಮಾಡಿ ಬಾಯಿಗೆ ಹಾಕುವಾಗ ಸಿಗುವ ಸುಖದಷ್ಟೇ ನನಗೆ ಆನಂದ.

“ಸೌಗಂಧಿಕಾ” ಕವನ ಸಂಕಲನ ನನ್ನ ಕೈ ಸೇರಿ ಸುಮಾರು ಆರೇಳು ತಿಂಗಳು ಕಳಿಯಿತೇನೋ ಆದರೆ ಎರಡು ಮೂರು ಬಾರಿ ಸವಿದರೂ ಕವನಸಂಕಲನದ ಜನಕಿಗೆ ನನ್ನ ಮನದಾಳದ ನುಡಿಗಳನ್ನ ಹೇಳಲು ಇಷ್ಟು ದಿನ ಬೇಕಾಯಿತು. ಎರಡು ದಿನದ ಹಿಂದೆ ಕೊಚ್ಚಿಗೆ ಪ್ರಯಾಣ ಮಾಡುವಾಗ ಮನದಲಿ ಬೇಸರದ ಛಾಯೆಯೇ ಆವರಿಸಿಕೊಂಡಿತು. ಈ ಬೇಸರವನ್ನ ದೂರಮಾಡಿದ್ದು ಮಾತ್ರ ಕವಯತ್ರಿ ವಿಶಾಲ ಆರಾಧ್ಯರವರಿಂದ ರಚಿತವಾದ “ಸೌಗಂಧಿಕಾ” ಕವನಸಂಕಲನ.

ಹೌದು ಈ ಕವನಸಂಕಲನವನ್ನ ಪಕ್ಕದಲಿದ್ದ ನನ್ನ ಜೋಳಿಗೆಯಿಂದ ತೆಗೆದು ಮತ್ತೆ ಸವಿದೆ , ಸುಮಾರು ಐವತ್ತಾರು ಕವನಗಳನ್ನ ಒಳಗೊಂಡು ಓದುಗರಿಗೆ ಉತ್ತೇಜನಕಾರಿಯಾಗಿದೆ. ಕವಯಿತ್ರಿ ಯವರು ಇಂತಹ ಸಾಹಿತ್ಯ ರಚಿಸಿದ್ದಾರೆ ಎಂದರೇ ಇವರ ತಪಸ್ಸಿನ ಶಕ್ತಿಯೇ ಕಾರಣ. ಸ್ಪೂರ್ತಿ ತುಂಬುವ ಅಮೃತದ ಬಳ್ಳಿಗಳು ಪ್ರತಿ ಕವನಗಳಲ್ಲಿ ಇರುವುದನ್ನ ನಾ ಕಂಡು ಮೂಕನಾದೆ.

ಯಾವುದೇ ಒಂದು ಕವನಸಂಕಲನವನ್ನ ಸವಿಯುವಾಗ
ಓದುಗ ಮೊದಲು ನೋಡುವುದು ಕವಯತ್ರಿರವರು ಬಳಸಿರುವ ಪದಭಂಡಾರವನ್ನ , ಕವನಸಂಕಲನದೊಳಗಿನ ಸಂದೇಶಗಳನ್ನ , ಪ್ರತಿ ಕವನಗಳ ಶೀರ್ಷಿಕೆಯನ್ನ, ಇಷ್ಟೆಲ್ಲವನ್ನ ಮೆಲಕು ಹಾಕುತ್ತಲೇ ಕವಯತ್ರಿಯವರ ಚಿಂತನೆಗಳಡೆಗೆ ಓದುಗ ಒಂದು ಪಕ್ಷಿ ನೋಟವನ್ನ ಹರಿಸದೇ ಬಿಡಲಾರ . ಸಾಮಾನ್ಯ ಓದುಗನಾದ ನಾನು ಕೂಡ ಇದನ್ನ ಪಾಲಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ನನ್ನ ಭಾವನೆ .

ವಿಶಾಲ ಆರಾಧ್ಯರವರು ಆದರ್ಶಶಿಕ್ಷಕಿ . ಬಾಲ್ಯದಿಂದಲೇ ಸಾಹಿತ್ಯದ ಗೀಳು ಅಂಟಿಸಿಕೊಂಡಿರುವ ಇವರು ಈ ಕರುನಾಡಿಗೆ ಅತ್ಯುನ್ನತ ಸಂದೇಶಗಳನ್ನ ರವಾನೆ ಮಾಡುವಂತಹ ಒಂದು ಕೃತಿಯನ್ನ ಹೊರತಂದಿರುವುದು ಇವರಿಗಿರುವ ಸಾಹಿತ್ಯ ಪ್ರೀತಿಯೇ ಕಾರಣ ಎನ್ನಬಹುದು.

ಸಂಘಟಕಿ, ಸಾಹಿತ್ಯ ಆರಾಧಕಿ, ಗಾಯಕಿ, ಸರಳ ವ್ಯಕ್ತಿತ್ವದ ಆದರ್ಶ ಕವಯತ್ರಿಯ ಪುಸ್ತಕದ ಬಗ್ಗೆ ಎರಡು ಸಾಲು ಬರೆಯಲು ನಾ ಅರ್ಹನೋ ಅಥವಾ ಅನರ್ಹನೋ ಎಂಬ ಭಾವ ಇದೀಗ ನನ್ನನ್ನ ಕಾಡುತಿದೆ. ಕಾರಣ ಈ ಕವನಸಂಕಲನವನ್ನ ಭೇದಿಸುತ್ತ ಹೋದಂತೆ ಓದುಗನಿಗೆ ಹಲವು ರೀತಿಯ ಕಿರಣಗಳು ಗೋಚರಿಸುತ್ತವೆ .

ಡಾ. ಮನು ಬಳಿಗಾರ್ ರವರ “ಹಾರೈಕೆ,” ಶೂದ್ರಶ್ರೀನಿವಾಸ್ ರವರ “ಮುನ್ನುಡಿ,” ಎಂ.ಜಿ.ದೇಶಪಾಂಡೆಯವರ “ನಲ್ನುಡಿ” , ಉದಯ್ ಧರ್ಮಸ್ಥಳರವರ “ಚೆನ್ನುಡಿ ” ಹಾಗೂ ಹಲವಾರು ಕವಿಗಳ ಅಭಿಪ್ರಾಯಗಳು , ಶುಭಕೋರಿರುವ ಆತ್ಮೀಯ ಬಳಗ ಹೀಗೆ ವಿಭಿನ್ನತೆಯಿಂದ ಈ ಪುಸ್ತಕ ಹೊರಬಂದಿರುವುದು ನೋಡಿದರೆ ಕವಯತ್ರಿಯವರಿಗೆ ಬೆನ್ನುಲುಬಾಗಿ ನಿಂತ ಬಳಗವನ್ನ ಮರೆತಿಲ್ಲ . ಇವರ ಈ ಆದರ್ಶ ನಡೆಯೇ ಇಂದು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಲು ಕಾರಣವೂ ಇರಬಹುದು. ಪುಸ್ತಕದ ಬಿಡುಗಡೆಗೆ ನನಗೆ ಅಹ್ವಾನ ನೀಡಿದ್ದರು ಆದರೆ ಕಾರಣಾಂತರಗಳಿಂದ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಕವನ ಸಂಕಲನದ ಒಳನೋಟದತ್ತ ಸಾಗುತಿದ್ದೇನೆ …

ಕವಯತ್ರಿರವರ ಹೆಸರಿಗೆ ತಕ್ಕಂತೆ ಕವನಸಂಕಲನದ ಪ್ರತಿ ಕವನಗಳು ಕೂಡ ವಿಶಾಲವಾಗಿಯೇ ಇವೆ. ನಾನಾ ದೃಷ್ಟಿಕೋನಗಳಿಂದ ನೋಡಿದರೂ ಸ್ವಚ್ಚತೆ ಎದ್ದು ಕಾಣುತ್ತಿದೆ. ಪದಗಳ ಜಾಡಿನೊಳಗೆ ಹೋದರೆ ಚಿಂತನೆಯತ್ತ ಕೊಂಡೋಯ್ಯುವ ಶಕ್ತಿ ಪ್ರತಿ ಕವನಗಳಲ್ಲಿಯೂ ಇದೆ. ವಿಶಾಲ ಆರಾಧ್ಯರವರು ಪದಬ್ರಹ್ಮನಿಂದ ವರವಾಗಿ ಲೇಖನಿಯನ್ನ ಪಡೆದಿರಬಹುದೇ ? ಖಂಡಿತ ಹೌದು.

. ಬಳಸಿರುವ ಪದಗಳಂತು ಮುಗಿಲು ಮುಟ್ಟಿವೆ. ಯಾವುದೇ ಕವನಗಳಲ್ಲಿ ಭಾವಗಳಿಗೆ ಕೊರತೆಯಿಲ್ಲ. ಸಂದೇಶ ಸಾರುವಲ್ಲಿ ಪ್ರತಿ ಪದ್ಯಗಳು ಸಫಲತೆ ಕಂಡಿವೆ. ನಾಡುನುಡಿ, ಹೆಣ್ಣಿನ ಆಕ್ರಂಧನ, ವಿರಹ, ಶೃಂಗಾರ , ಸಾಮಾಜಿಕ ,ಕೌಟುಂಬಿಕ, ಹಾಗೂ ಕೆಲವು ವಚನಗಳಂತೆಯೇ ಸಂದೇಶ ಬೀರುವ ಪದ್ಯಗಳು , ಮತ್ತೆ ಕೆಲವು ಪುರಾಣ ಕಾಲದ ಕವಿಗಳು ರಚಿಸುತ್ತಿದ್ದ ಸಾಹಿತ್ಯದಂತೆ, ಇನ್ನೂ ಕೆಲವೂ ಈ ಸಮಾಜದ ಆಗುಹೋಗುಗಳ ಬಗ್ಗೆ ,ಹಾಗೂ ಭವಿಷ್ಯದ ದೃಷ್ಟಿಯಿಂದ ರಂಜಕಾಂಶಗಳನ್ನೇ ಹೊತ್ತು ಸಂದೇಶ ಸಾರುತ್ತಿರುವ ಉತ್ತಮ ಶೀರ್ಷಿಕೆಯುಳ್ಳ ಪದ್ಯಗಳು …. ಇಷ್ಟೆಲ್ಲವನ್ನ ಒಂದೇ ಕವನಸಂಕಲನದೊಳಗೆ ತುಂಬಿರುವ ಚಾಣಾಕ್ಷತನಕ್ಕೆ ಕವಯತ್ರಿಯವರಿಗೆ ನಮನಗಳನ್ನ ಅರ್ಪಿಸಲೇ ಬೇಕು.

ಹೃದಯದ ಗೂಡೊಳಗುಟ್ಟುವ….

ಚಿತ್ತದಲಿ ಚಿತ್ತಾಪಹಾರಕಗಳು…..
ರವಿಜಾರಿ ಶಶಿ ಮೂಡಿ….
ಕರಿ ಇರುಳ ಕತ್ತಲೆಯೊಳಗೆ …
ಕರುಳ ಕಡಿವ ಕೊರತೆಗಳಿಗೆ ….
ಗರ್ಭ ಗುಡಿಯಲ್ಲೇ ಪ್ರೀತಿ ಎರೆದವಳು ಹೆಣ್ಣು.ಉಬ್ಬಿದುದರವ ಸ್ಪರ್ಶಿಸಿ ಉಬ್ಬಿದವಳು……

. ಹೀಗೆ ಪ್ರತಿ ಪದ್ಯಗಳಲ್ಲಿ ಉನ್ನತ ಮಟ್ಟದ ಭಾವ ಝೇಂಕರಿಸುವ ಸಾಲುಗಳಿಗೆ ಜನ್ಮ ನೀಡಿ , ಕ್ರೋಡೀಕರಿಸಿ ಕವನ ಕಟ್ಟುವುದು ಸುಲಭದ ಕೆಲಸವಲ್ಲ.. ಈ ಕವನಸಂಕಲನವನ್ನ ಒಮ್ಮೆ ಸವಿದರೇ ಸವಿಯುತ್ತಿರಲೇ ಬೇಕೆನಿಸುತ್ತದೆ. ಓದುಗನಿಗೆ ಆರೋಗ್ಯಕರ ಔಷಧಿ ಈ ಕವನಸಂಕಲನ ಎಂದರೂ ತಪ್ಪಾಗಲಾರದು.

ಇದೀಗ ವಿಶಾಲ ಆರಾಧ್ಯರವರು ಎರಡನೇ ಕೃತಿಯನ್ನ ಬಿಡುಗಡೆ ಗೊಳಿಸಲು ಸಜ್ಜಾಗಿದ್ದಾರೆ , ಇವರ ಈ ಕೃತಿಯೂ ಸೌಗಂಧಿಕಾ ಕೃತಿಯಂತೆ ರಾಜ್ಯಾದ್ಯಂತ ಹೆಸರುವಾಸಿಯಾಗಲಿ ಎಂದು ಮನದಾಳದಿಂದ ಹಾರೈಸುವೆ.

ಒಟ್ಟಿನಲ್ಲಿ ಈ ಕವನಸಂಕಲನದೊಳಗೆ ಹಲವಾರು ಯುವ ಸಾಹಿತಿಗಳಿಗೆ ಅವಕಾಶ ನೀಡಿ ಮನದಲಿ ಯಾವುದೇ ರೀತಿಯ ಸ್ವಾರ್ಥ ಇಲ್ಲ ಎಂಬ ಸಂದೇಶವನ್ನ ಈ ಕರುನಾಡಿಗೆ ಸಾರಿದ್ದಾರೆ . ಮುಖಪುಟದ ನನ್ನ ಆತ್ಮೀಯ , ಲೇಖಕರಾದ, ವಿವೇಕಾನಂದ ಸರ್, ಕವಿಗಳಾದ ರಾಮಚಂದ್ರ ಸಾಗರ್, ಸರಸ್ವತಿ ಪುತ್ರಿ ಅಕ್ಕಮಹಾದೇವಿ ಹಾರೋಗೇರಿ ಇವರೆಲ್ಲರ ಅಭಿಪ್ರಾಯಗಳು ಪುಸ್ತಕದೊಳಗೆ ಮುದ್ರೆಯಾಗಿವೆ. ಪುಸ್ತಕದ ವಿನ್ಯಾಸವೂ ಕೂಡ ಅದ್ಬುತ. ವಿಶಾಲ ಆರಾಧ್ಯರವರು ಈ ನಾಡಿಗೆ ಸಿಕ್ಕಿರುವ ನಕ್ಷತ್ರ . ಸಾಹಿತ್ಯ ಲೋಕದಲ್ಲಿ ಇದೇ ರೀತಿ ಸರಳ ವ್ಯಕ್ತಿತ್ವವನ್ನ ರೂಡಿಸಿಕೊಂಡು ಸಾಗುವ ಯಾರೇ ಆಗಿರಲಿ ಸಾಹಿತ್ಯ ಲೋಕ ಬಹುಬೇಗ ಅಪ್ಪಿಬಿಡವುದು. ಇದಕ್ಕೆ ತಕ್ಕ ಉದಾಹರಣೆ ಎಂದರೇ ಸರಸ್ವತಿ ಪುತ್ರಿ, ಅಕ್ಷರ ಮಾಂತ್ರಕಿ, ಅಕ್ಷರ ರಾಕ್ಷಸಿ, ಚಿಂತಕಿ ,ವಿಶಾಲ ಆರಾಧ್ಯರವರು ಎಂದು ಹೇಳಲು ಇಚ್ಚಿಸುತ್ತೇನೆ .

**********************************************

ಕಲಿರಾಜ್ ಹುಣಸೂರು.


3 thoughts on “ಸೌಗಂಧಿಕಾ

  1. ಇದು ಯಾವಾಗ ಪ್ರಕಟವಾಯಿತು. ?
    ಧನ್ಯವಾದಗಳು ಪತ್ರಿಕಾ ಬಳಗಕ್ಕೆ. ಹಾಗೂ ಕವಯತ್ರಿ ವಿಶಾಲ ಆರಾಧ್ಯ ಅವರಿಗೂ.

  2. ಸೌಗಂಧಿಕಾದ ಒಳಹರಿವಿನ ಗಂಧ ಪಸರಿಸಿದ ಖುಷಿ ಪರಿಚಯದಿಂದ ದೊರೆತಿದೆ.ಹಾಗೇ ಸಂಕಲನ ಓದುವಾಸೆ….

Leave a Reply

Back To Top