ವಿಕ್ರಮಶಿಲಾ” ಮೂರು ಮಹಡಿಯ ಕಟ್ಟಡದ ಮೆಟ್ಟಲುಗಳನ್ನು ಏರುತ್ತಿದ್ದೆ‌. ಹಂಚಿನ ಮಾಡಿನ ಶಾಲೆಯ ಆಂಗಳದಿಂದ ಮಂಗಳನ ನೆಲದತ್ತ ಹಾರಿ ಹೊರಟ ಉಪಗ್ರಹದ ಏಕಾಂಗೀ ಹೆಜ್ಜೆಗಳವು.

ಸಲೀಂ ಅವರ ಕಥೆಗಳು

ಇದು ನನಸಾಗುವ ಕನಸೆಂಬುದು ಕವಿ, ಕಥೆಗಾರರ ಭಾವನೆಯಾಗಿದೆ. ಭಾಷೆ, ಧರ್ಮಗಳ ಸರಿ ಪ್ರಜ್ಞೆ ಇರುವವರ ಹೃದಯ ಮಿಡಿತವಾಗಿದೆ. ಈ ಭಾವನೆಗಳು ವಸ್ತುವಾಗುಳ್ಳ ಭಾರತೀಯ ಭಾಷೆಗಳಲ್ಲಿನ ಕಥೆಗಳನ್ನು ಸಂಕಲಿಸಿದರೆ ಅನೇಕ ಸಂಪುಟಗಳು ನಮಗೆ ಸಿಗುತ್ತದೆ. ಈ ನಿಟ್ಟಿನ ಚಲನೆಯಲ್ಲಿ ತೆಲುಗು ಕಥೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಹಾವೇರಿಯಾಂವ್

ಪುಸ್ತಕ ಸಂಗಾತಿ ಹಾವೇರಿಯಾಂವ್ ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ ‘ಹಾವೇರಿಯಾಂವ್’ ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅಂಕಣ ಬರಹಗಳ “ಹಾವೇರಿಯಾಂವ್’’ ಪುಸ್ತಕ ಹೊರ ತಂದಿದ್ದಾರೆ. ಟಿ.ಕೆ.ತ್ಯಾಗರಾಜರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಡೆಕ್ಕನ್ ನ್ಯೂಸ್’ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ ‘ಕಾಕಾ ಕಾಲಮ್’ ಅಂಕಣ ಬರಹಗಳ ಸಂಕಲನವೇ ಈ ‘ಹಾವೇರಿಯಾಂವ್’. ಈ ಸಂಕಲನದಲ್ಲಿ ಒಟ್ಟು ೪೪ ಲೇಖನಗಳಿವೆ. ನಮ್ಮ ಸಮಾಜದ ಅಂಕುಡೊಂಕುಗಳನ್ನು ಜನರೆದುರು ತೆರೆದಿಡಲು ತಮ್ಮದೇ […]

ನಾನೊಂದು… ದ್ವಂದ್ವ.!?

ಅಮೃತ ಅರ್ಪಿಸಿದಾಕ್ಷಣವೇ
ವಿಷ ಕಕ್ಕಬಲ್ಲ ಕಾರ್ಕೂಟಕನೂ ನಾ..!
ಕಾರಣ ನಾ ದ್ವಂದ್ವ.!!
ಹಾಗಾಗಿ ಎಚ್ಚರದಿಂದ ಇರು ನೀ
ನನಗೆ ಅಪರಿಮಿತ ಮುಖವಾಡಗಳಿವೆ!!!

ನೆತ್ತರ ಚಿತ್ತಾರ

ಆಸೆಗಳನ್ನು ಕೊಂದು
ಎಲ್ಲೆಲ್ಲೂ ನೆತ್ತರಿನ ಚಿತ್ತಾರ ಚಿಲುಮಿಸಿ
ಅರೆಸುಟ್ಟ ಅನಾಥ ಶವಗಳಂತೆ ಭಾವನೆಗಳು
ಕನಸಿನಲ್ಲಿನ ಕನವರಿಕೆಗಳು

ಪ್ರಭುವೂ ಪಾರಿವಾಳವೂ

ಪ್ರಭುವಿಗೆ ಸಿಟ್ಟು ಬಂತು
ದೊರೆ ಬಂದರೂ ದೂರ ಹೋಗವು
ತೊಳೆದರೂ ತೊರೆಯವು ವಾಸನೆ
ಶತಮಾನಗಳ ಕಮಟು ; ಸಾಯಿಸಿಬಿಡಿ

ಸಮಯಾಂತರ

ಪುಸ್ತಕ ಸಂಗಾತಿ ಸಮಯಾಂತರ ಕನಸುಗಾರರು ಬರಲಿ ನಾವೂ ಸೋತ ಆಟವನ್ನು ಗೆದ್ದು ತರಲಿ ಅವರು- ಸಮಯಾಂತರ ಕಟ್ಟುವ ಕವಿ, ಕನ್ನಡದ ಕಾವ್ಯದೆಗಳನ್ನು ಮುಟ್ಟಿದ,ನಮ್ಮ ಅಂತರಾಳವನ್ನು ತಟ್ಟುವ,ಕವಿ ಸತೀಶ ಕುಲಕರ್ಣಿ ಅವರ ಆಯ್ದ ಕವಿತೆಗಳ ಸಂಕಲನ ‘ಸಮಯಾಂತರ’ ಮೊಗಸಾಲೆ ಪ್ರಕಾಶನದಲ್ಲಿ ಪ್ರಕಟವಾದ -೨೦೧೩ ಕೃತಿ ಹಲವೂ ಗಟ್ಟಿ ಕವಿತೆಗಳ ಗುಚ್ಛ “ರಕ್ತಗಾಲಿನ ನಮ್ಮಪಾಲಿನ/ ಹಾಡ ಬರೆಯತೇವ /ನೆಲಕ ಹಾಡ ಬರೆಯತೇವ ಎನ್ನುತ್ತಲೆ ಸತೀಶರು ನೆಲದ ಜನರ ನಾಡಿ ಮಿಡಿತದಿಂದ ರೂಪುಗೊಂಡು ಕಾವ್ಯ ನೆಲಕೆ ಸಂಕಟವೊದಗಿದಾಗ ಸತೀಶರ ಕಾವ್ಯ ಹೋರಾಟದ […]

ಹೇಳು ಸಿವನೆ

ಕವಿತೆ ಹೇಳು ಸಿವನೆ ಸುವಿಧಾ ಹಡಿನಬಾಳ ೧ ಜಗವ ಕಾಯುವಜಗದೊಡೆಯನಿಗೆರಕ್ತದಾಹವೆಂಬ ಭ್ರಮೆಯನಂಬಬೇಕೆ ಸಿವನೆ? ೨ ಹೆತ್ತ ತಾಯಿಮುದ್ದು ಮಡದಿಮಮತೆಯ ಕೂಸುಹೆಣ್ಣೇ ಆದರೂ ಅನ್ಯರಮೇಲೆ ಅತ್ಯಾಚಾರ ಗೈವಗಂಡು ಕಾಮಿಯ ಎದೆಯಲ್ಲಿಕರುಣವಿಲ್ಲವೆ ಸಿವನೆ? ೩ ತುತ್ತಿನ ಚೀಲ ತುಂಬಲುಗೇಣುದ್ದ ದೇಹವ ಮುಚ್ಚಲುಬೆಚ್ಚನೆಯ ಸೂರು ಹೊಂದಲುನೆಮ್ಮದಿಯ ಬದುಕ ಬಾಳಲುಕೋಟಿ ಕೋಟಿ ದುಡ್ಡುಆಸ್ತಿ ಬೇಕೆ ಸಿವನೆ? ೪ ಮೈಯ ರಕ್ತ ಒಂದೇಕುಡಿವ ಜಲವು ಒಂದೇತಿನ್ನುವ ಅನ್ನವೊಂದೇಪೊರೆವ ಧರಣಿಯೊಂದೇಮತ್ತೆ ನಾನು ನೀನುಅವನು ಅವಳುಮೇಲು ಕೀಳುಹೇಗೆ ಸಿವನೆ? ೫ ಹುಟ್ಟಿ ಬಂದಾಗಿದೆಚೆಂದ ಬಾಳು ಮುಂದಿದೆಹಮ್ಮು ಬಿಮ್ಮು […]

ಮರುಭೂಮಿಯ ಹೂ’ ಸಫಾ’

ಹಳೆಯ ಧೂಳು ಹಿಡಿದ ಅಥವಾ ತುಕ್ಕು ಹಿಡಿದ ರೇಜರ್ ಬ್ಲೇಡಿನಿಂದ ಹೆಣ್ಣಿನ ಗುಪ್ತಾಂಗದ ಕ್ಲಿಟೋರಸ್ ಎಂಬ ಬಹುಮುಖ್ಯವಾದ ಭಾಗವನ್ನು ಅನಸ್ತೇಸಿಯಾಗಳ ಸಹಾಯವಿಲ್ಲದೆಯೇ ತೆಗೆದು ಕತ್ತರಿಸಿ ಹಾಕಿ ಪೊದೆಗಳಿಂದ ತೆಗೆದ ಮುಳ್ಳುಗಳಿಂದ ಹಸಿಯಾದ ಗಾಯವನ್ನು ಮುಚ್ಚಿ ಹೊಲಿಯುವ ಬರ್ಬರ ಸಂಪ್ರದಾಯ.

ಕತ್ತಲಿನ ಕವಿತೆ

ಮರಾಠಿಯ ಖ್ಯಾತ ಕವಿ ನಾಮದೇವಕೋಳಿ ಅವರ ಕವಿತೆಯೊಂದನ್ನು ಕನ್ನಡದ ಕವಿ ಕಮಲಾಕರ ಕಡವೆಯವರು ಸಂಗಾತಿಯ ಓದುಗರಿಗಾಗಿ ಕನ್ನಡಕ್ಕೆ ತಂದಿದ್ದದಾರೆ

Back To Top