ಮರುಭೂಮಿಯ ಹೂ’ ಸಫಾ’

ಪುಸ್ತತಕ ಸಂಗಾತಿ

ಮರುಭೂಮಿಯ ಹೂ’ ಸಫಾ’

ಸಫಾ ಓದಲು ಶುರುವಿಟ್ಟ ಹೊತ್ತಿ ನಿಂದ ಒಂದೇ ಉಸಿರಿಗೆ ಓದಿ ಮುಗಿಸಬೇಕೆಂಬ ಕುತೂಹಲ, ಓದಿನುದ್ದಕ್ಕೂ ಕಾಡುವ ಸಂಕಟದ ಜೊತೆಗೆ ಮೈಯಲ್ಲಿ ಸಹಿಸಲಾಗದ ನೋವು, ಒಮ್ಮೊಮ್ಮೆ ಧಾವಿಸಿ ವ್ಯಾಪಿಸುವ ಕ್ರೋದ ಹೀಗೆಲ್ಲಾ ಘಟಿಸಲು ಸಾಧ್ಯವಾ ಎಂಬ ದಿಗಿಲು ಹಣೆಯಲ್ಲಿ ಅದೆಷ್ಟೋ ನೆರಿಗೆ ಮೂಡಿಸುವುದಂತೂ ಸತ್ಯ.

ಹಳೆಯ ಧೂಳು ಹಿಡಿದ ಅಥವಾ ತುಕ್ಕು ಹಿಡಿದ ರೇಜರ್ ಬ್ಲೇಡಿನಿಂದ ಹೆಣ್ಣಿನ ಗುಪ್ತಾಂಗದ ಕ್ಲಿಟೋರಸ್ ಎಂಬ ಬಹುಮುಖ್ಯವಾದ ಭಾಗವನ್ನು ಅನಸ್ತೇಸಿಯಾಗಳ ಸಹಾಯವಿಲ್ಲದೆಯೇ ತೆಗೆದು ಕತ್ತರಿಸಿ ಹಾಕಿ ಪೊದೆಗಳಿಂದ ತೆಗೆದ ಮುಳ್ಳುಗಳಿಂದ ಹಸಿಯಾದ ಗಾಯವನ್ನು ಮುಚ್ಚಿ ಹೊಲಿಯುವ ಬರ್ಬರ ಸಂಪ್ರದಾಯ.

ರೂಪದರ್ಶಿ,ಲೇಖಕಿ,ಮಾನವ ಹಕ್ಕುಗಳ ಕಾರ್ಯಕರ್ತೆ ವಾರಿಸ್‌ಡಿರೀ ಅವರುವ ಆಫ್ರಿಕಾದಕಾಣದ ಮೂಲೆಯ ಆ  ನಿಗೂಢ ಲೋಕಗಳ ಬಗ್ಗೆ  ಪರಿಚಯಿಸುತ್ತಲೇ ಹೀನಾಯ ಪದ್ಧತಿಗಳ ವಿರುದ್ಧ ಹೋರಾಡುವಛಲ ತೊಟ್ಟು ಮಾದರಿ ಮಾತ್ರವಲ್ಲ ಶಕ್ತಿಯೂ,ಮಾರ್ಗದರ್ಶಕಿಯೂ ಆಗುತ್ತಾರೆ.

ವಾರಿಸ್‌ಡಿರೀ ಬಾಲ್ಯದಲ್ಲಿ ಸ್ವತಃ ಯೋನಿ ಛೇದನಕೊಳಗಾಗಿ ಆ ಅಮಾನುಷ ಪದ್ಧತಿಯ ವಿರುದ್ಧ ಹೋರಾಡಲು ಪಣತೊಟ್ಟುಆಫ್ರಿಕಾದ ಜಿಬೌಟಿಯ ಕೊಳಗೇರಿಯಲ್ಲಿದ್ದ ಸಫಾ ಎಂಬ ಮಗುವೊಂದುಕ್ರಮೇಣ ಡಿರೀಯವರ ಕನಸುಗಳಿಗೆ ಮೊದಲ ಸ್ಥಾನ ಗಿಟ್ಟಿಸಿ ಯೋನಿ ಛೇದನಕ್ಕೆ ಬಲಿಯಾಗದ ಮೊದಲಿಗಳಾಗುತ್ತಾಳೆ.

‘ಡೆಸರ್ಟ್ ಫ್ಲವರ್ ‘ ಎಂಬ ಚಲನಚಿತ್ರ ವಾರಿಸ್‌ಡಿರೀ ಮತ್ತು ಸಫಾಳ ಪರಿಚಯ ಬೆಸೆದು,ತನ್ನದೇ ಬಾಲ್ಯವನ್ನುಅದರಲ್ಲೂ ಯೋನಿ ಛೇದನದ ಭಯಾನಕ ಕ್ಷಣಗಳನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ಅಭಿನಯಿಸಿದ ಸಫಾಳ ರಕ್ಷಣೆಗೆ ಹೊರಾಡುತ್ತಲೇ ಸಫಾಳಿಗೆ ಯೋನಿ ಛೇದನ ಆಗಿದೆಯೇ ಎಂದು ತಿಳಿಯುವ ಡಿರೀಯ ಆತಂಕ ಸುಖಾಂತ್ಯದವರೆಗೂ ಓದುಗರೆದೆಯ ಉಸಿರಿನ ವೇಗ ಉಲ್ಬಣಿಸುವಂತೆ ಮಾಡುತ್ತದೆ.

ಸಾಧಕರ ನಡೆ,ನುಡಿ,ಜೀವನದ ಬಗೆ ತಿಳಿಯುವ ಕುತೂಹಲ,ಅನುಕರಿಸುವ ಮನೋಭಾವಇದ್ದದ್ದೆ. ಹಲವಷ್ಟು ಸಾಧಕರುತಮ್ಮ ಪರಿಶ್ರಮ ಹಾಗು ಆಕರ್ಷಕ ಮಾತಿನಿಂದ ನಮಗೆ ಅಚ್ಚುಮೆಚ್ಚಾಗುತ್ತಾರೆ.ಆದರೆ ಡಿರೀಯಂತೆ ದಿಟ್ಟ ಹೆಜ್ಜೆಇಡಲುಗಟ್ಚಿ ಮನಸ್ಸು ಮಾಡಲು ಸಾಧ್ಯವೇ?

ಈ ಜಗತ್ತಿನಲ್ಲಿ ನಡೆಯುವ ಅದರಲ್ಲೂ ಹೆಣ್ಣುಗಳ ಸ್ತನ ವಿರೂಪಗೊಳಿಸುವುದು,ಯೋನಿ ಛೇದನ ಮಾಡುವುದು,ಫೋರ್ಸ್ ಫೀಡಿಂಗ್ ಮೊದಲಾದಅಮಾನುಷ ಹಾಗೂ ವಿಚಿತ್ರ ಸಂಪ್ರದಾಯ ಕೃತ್ಯಗಳನ್ನು ವಿಶ್ವದ ಮುಂದೆತೆರೆದಿಟ್ಟು ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಿಡಿದೇಳುವಂತೆ ಮಾಡುತ್ತಾರೆ.

ಬಡತನವನ್ನೇ ಹೊದ್ದು ಮಲಗಿರುವ ಕೊಳಗೇರಿಗಳಲ್ಲಿ ಯೋನಿ ಛೇದನವನ್ನು ಕಸುಬಾಗಿಸಿಕೊಂಡ ವೃದ್ದೆಯರು    ಯೋನಿಯ ಭಾಗವನ್ನು ಕತ್ತರಿಸುವಾಗ ಕಣ್ಣ ಮುಂದೆ ಸುಳಿಯುವ ಯಾತನೆ, ಕರುಳ ಹಿಂಡುವಚೀರಾಟದ ಸನ್ನಿವೇಷಕಲ್ಪಿಸಲು ಕಷ್ಟ ಸಾಧ್ಯ.

ನತದೃಷ್ಟ ಆಫ್ರಿಕನ್ ಹೆಣ್ಣು ಮಕ್ಕಳ ಈ ಕರಾಳ ಕತೆಯನ್ನು ಬಿಚ್ಚಿಡುವ ವಾರಿಸ್‌ಡಿರೀ ನಿಜಕ್ಕೂ ದಿನ ರಾತ್ರಿಗಳ ಪರಿವೆಯಿಲ್ಲದೆ ಈ ಪಿಡುಗಿನ ವಿರುದ್ಧ ದುಡಿದು, ಸಫಾಳಿಂದ ನಾಂದಿ ಹಾಡಿ ಹೋರಾಡಿದಎದೆಗಾರಿಕೆಅಸಾಮಾನ್ಯ ಸಂಗತಿಯೇ ಹೌದು.

ಯೋನಿ ಛೇದನ ಮಾಡದ ಹೆಣ್ಣನ್ನುಒಪ್ಪದ ಸಮಾಜ,ಹುಟ್ಟಿಕೊಂಡಜಾಣಮೌನದ ಸಂಸ್ಕöಋತಿ ಯಂತೆ ಬೆಳೆದು ಹೆಣ್ತನಕ್ಕೆದ್ರೋಹ ಮಾಡುವ ಹೃದಯ ವಿದ್ರಾವಕ ಘಟನೆಗಳು ಬೆಚ್ಚಿಬೀಳಿಸುತ್ತವೆ.

ವಾರಿಸ್ ಡಿರೀಯಂತ ಸಾಧಕಿಯನ್ನೂ ಅವಳ ತಂಡವನ್ನೂ ನಮಿಸಲೇಬೇಕಿದೆ.  ನಮ್ಮ ಆಸುಪಾಸಿನಲ್ಲೇ ಸಾಕಷ್ಟು ಪೀಡನೆಗಳ ಬಗೆ ಕೇಳಿ,ನೋಡಿ ಏನೇನು ಮಾಡಲಾಗದೆ ಅಸಹಾಯಕರಾಗುತ್ತೇವೆ.ಆದರೆ ಸಾಧನೆಯ ಮೆಟ್ಟಿಲೇರಿದವರಿಗೆ ಸ್ಪಂದಿಸಲು ಸುಲಭ ಸಾಧ್ಯವಿದ್ದು ಮನಸ್ಸು ಮಾಡಬೇಕಷ್ಟೆಎಂಬುದಕ್ಕೆ ವಾರಿಸ್ ಡಿರೀಯೇ ನಿದರ್ಶನ.

ಈಗಾಗಲೇ ಅನುವಾದ ಕೃತಿಗಳನ್ನು ಹೊರತರುವಲ್ಲಿ ಹೆಸರು ಮಾಡಿದ ಸೃಷ್ಠಿ ಪ್ರಕಾಶನದ ಮೂಲಕ ಪ್ರಕಟಣೆಕಂಡ‘ಸಫಾ’ ಓದಲೇಬೇಕಾದ ಅನುವಾದ ಕೃತಿ.  ಮೂಲ ಕನ್ನಡದ್ದೇ ಎನ್ನುವಷ್ಟು ಚೆಂದದ ಅನುವಾದ ಮಾಡಿ ನಮಗೆ ಓದಿನ ಸುಖ ಕೊಟ್ಟ ಪ್ರಸಾದ್ ನಾಯ್ಕ ರವರಿಗೆ ಅಭಿನಂದನೆಗಳು. ಅನುವಾದಕ್ಕಾಗಿ ಆಯ್ದು ಕೊಂಡ ಸಫಾ ನಿಜಕ್ಕೂನಮ್ಮನ್ನು ತಲುಪುವ ಅಗತ್ಯವಿತ್ತು.ಇಲ್ಲಿ   ಬಳಸಿದ ಭಾಷೆಯನ್ನು ಗಮನಿಸಿದರೆ ಇವರೊಬ್ಬ ಪ್ರಬುದ್ಧ ಅನುವಾದಕ ಎಂಬುದರಲ್ಲಿ ಸಂಶಯವೇ ಇಲ್ಲ. ವಿಚಿತ್ರ ಲೋಕದ ಪರಿಚಯವಾಗಿ ಓದಿನುದ್ದಕ್ಕೂ ಪ್ರತಿಭಟಿಸುವಂತೆ ಮನಸ್ಸು ತಿವಿಯುತಿತ್ತು.ಪ್ರಸಾದ್ ನಾಯ್ಕರವರಿಂದ ಮತ್ತಷ್ಟುಅನುವಾದ ಕೃತಿಗಳು ಲೋಕಾರ್ಪಣೆಗೊಂಡು ಸಮಾಜದಕಣ್ಣುತೆರೆಸುವಂತಾಗಲಿ.

ಯೋನಿ ಛೇದನದಂತಹ ಸಂಪ್ರದಾಯ ವೊಂದನ್ನು ಬುಡಸಮೇತ ಕಿತ್ತೊಗೆಯುವುದು ಸುಲಭವಲ್ಲದಿದ್ದರೂ ದೊಡ್ಡದೊಂದು ಹೋರಾಟದ ಮೂಲಕ ಚಳುವಳಿಯ ರೂಪ ಪಡೆದು ನಿರೀಕ್ಷಿತ ಗುರಿಮುಟ್ಟವವರೆಗೂ ಮೈಕೊಡವಿ ನಿಂತ ವಾರಿಸ್‌ಡಿರೀ ಪ್ರಯತ್ನಕ್ಕೆ ಇಡೀ ಹೆಣ್ಣು ಕುಲವೇ ಋಣಿ ಮತ್ತು ಸಲಾಂ ಇದ್ದೇಇದೆ.

********************************************

ಸುನೀತ ಕುಶಾಲನಗರ

3 thoughts on “ಮರುಭೂಮಿಯ ಹೂ’ ಸಫಾ’

  1. ಲೇಖನ ತುಂಬಾ ಚೆನ್ನಾಗಿದೆ. ನನಗೂ ಪುಸ್ತಕ ಓದುವ ಹಂಬಲ ಹೆಚ್ಚಾಗಿದೆ.

Leave a Reply

Back To Top