ನಾನೊಂದು… ದ್ವಂದ್ವ.!?

ಕವಿತೆ

ನಾನೊಂದು… ದ್ವಂದ್ವ.!?

ಕೆ.ಶಿವು. ಲಕ್ಕಣ್ಣವರ

ನಾನೊಂದು ದ್ವಂದ್ವ..!
ನನ್ನನ್ನಿಷ್ಟು ಪ್ರೀತಿಸಬೇಡ
ನನ್ನನ್ನಿಷ್ಟು ನಂಭಬೇಡ
ನಂಬಿಕೆಗೆ ಅರ್ಹನಲ್ಲ ನಾ,
ನಾನೊಂದು ಮಹೋನ್ನತ ಆನೆ,
ಹಾಗೇ ಬಾಲ ಅಲ್ಲಾಡಿಸುತ್ತಾ ಕುಂಯಿಗುಡುವ
ನಿಯತ್ಗಿನ ನಾಯೀ ಕೂಡ,
ಪ್ರೀತಿ, ಸ್ನೇಹದ, ವಿಶ್ವಾಸಗಳ
ಅಪರಾವತಾರದ ಚಿಹ್ನೆ
ಎಂದಣಿದಾಕ್ಷಣವೇ ನಾ
ಕ್ಷಣಾರ್ಧದಲ್ಲಿ ಎಲ್ಲವನ್ನೂ
ಭಗ್ನಗೊಳಿಸಿಬಿಡಬಲ್ಲ
ನನ್ನೊಳಗಿನ ರಾಕ್ಷಸನನ್ನು ಕಂಡು ನೀ
ನಿಂತ ನೆಲದಲ್ಲಿಯೇ ಹೂತು ಹೋಗಬಹುದು ನೀ
ಹಸಿದವನ ಹೊಟ್ಟೆ ಕಂಡು ಕನಕರಿಸಿ,
ಎನ್ನ ಹೊಟ್ಟೆ ಬಗಿದುಕೊಂಡು ಹಸಿದವನ
ಹೊಟ್ಟೆಗೆ ಅನ್ನ ಸಮರ್ಪಿಸಬಲ್ಲ
ಅತಿಮಾನುಷನೂ ಸರಿ,
ಅರೆಕ್ಷಣ ಹಿಡಿಯಲಿಕ್ಕಿಲ್ಲ
ಆಳೆತ್ತರಕ್ಕೆತ್ತಿ ನೆಲಕೊಗೆದು
ಚಿಂದಿಮಾಡಿಬಿಡಬಲ್ಲ ಅತಿ-ಅ-ಮಾನುಷನೂ ಹೌದು. ಹಾಗೆಂದ ಮಾತ್ರಕ್ಕೆ ಹೌಹಾರಿ ನೀ ಭಯಭೀತಿಗೊಳ್ಳಬೇಡ
ಹೌಹಾರಿ ನೀ
ಹೂತುಹೋದ ನೆಲವನ್ನೇ ಬಗಿದು
ಮೇಲೆಕೆಬಿಸಿಕೊಳ್ಳಬಲ್ಲ ಧೈತನೂ ನಾ.
ಒಟ್ಟಾರೆ, ನಾ ನಿಖರವಾಗಿ ಇದನ್ನೇ
ನಿನಗೆ ಬಳುವಳಿ ಕೊಡುತ್ತೇನೆಂದು
ಹೇಳಲಾರೆ,
ಅಮೃತ ಅರ್ಪಿಸಿದಾಕ್ಷಣವೇ
ವಿಷ ಕಕ್ಕಬಲ್ಲ ಕಾರ್ಕೂಟಕನೂ ನಾ..!
ಕಾರಣ ನಾ ದ್ವಂದ್ವ.!!
ಹಾಗಾಗಿ ಎಚ್ಚರದಿಂದ ಇರು ನೀ
ನನಗೆ ಅಪರಿಮಿತ ಮುಖವಾಡಗಳಿವೆ!!!
ಏಕೆ ಗೊತ್ತೇ?
ನಾ…?

*************************************

Leave a Reply

Back To Top