ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ
ಲೇಖನ ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಡಾ.ಸುಜಾತಾ.ಸಿ. “ನೀನು ನಂಗೊAದು ರೊಟ್ಟಿ ಕೊಟ್ರೆ ಒಂದು ದಿವ್ಸ ಹಸಿವನ್ನ ತೀರಿಸ್ದಂಗೆ ರೊಟ್ಟಿಗಳಿಸೋದು ಹೆಂಗೇAತ ಕಲಿಸಿದ್ರೆ ಗಳಿಸೋ ಅವಕಾಶ ಕಿತ್ಕಳೋ ತಂಕ ನನ್ನ ಹಸಿವನ್ನ ತೀರ್ಸಿದಂಗೆ ಅದೇ ನಿನೇನಾದ್ರೂ ವಿದ್ಯೆ ಕಲ್ಸಿ ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ? ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ ಎಲ್ಲ ಒಟ್ ಸೇರಿ ನಮ್ ದಾರಿ ನಾವು […]
“ಶಾವಾ”ತ್ಮ ಪದಗಳು
ಮನದ ಮಾತು ಶಾಂತಿವಾಸು ಮನಸನ್ನೊಂದು ಮಾತು ಕೇಳು….ಹುಟ್ಟಿನಿಂದ ಕಲಿತು, ಸರಿತಪ್ಪುಗಳನ್ನರಿತು, ಲೋಕಾರೂಢಿಯನುಭವ ಪಡೆದರೇನು? ಕಾರ್ಯಸಿದ್ದಿಗೆ,ಮನಸನ್ನೊಂದು ಮಾತು ಕೇಳು…. ಮನಕ್ಕೊಪ್ಪುವ ಕೆಲಸ ಮಾಡು….ಯಾರೆಷ್ಟು ನಿಂದಿಸಲೇನು? ನಿನ್ನೆತ್ತರವನ್ಹೊಗಳಲೇನು? ತಟಸ್ಥ ಮನಕೆ ಶಕ್ತಿ ತುಂಬಿ ಆತ್ಮತೃಪ್ತಿಯಿಂದ,ಮನಕ್ಕೊಪ್ಪುವ ಕೆಲಸ ಮಾಡು…. ಮನವನೊಮ್ಮೆ ಇಣುಕಿ ನೋಡು….ಎಲ್ಲವೂ ನಿನದಾಗಿ ಕಂಡರೂ, ಬಂದುದು ಕೈತಪ್ಪಿ ಹೋಗಲು ನೆಪವೊಂದಿದೆಯೆಂಬ ಸತ್ಯವರಿತ,ಮನವನೊಮ್ಮೆ ಇಣುಕಿ ನೋಡು…. ಮನಸಿಗೊಂದು ಮಾತು ಹೇಳು…ಜಗದೆಲ್ಲವೂ ನೀನಲ್ಲ, ಜಗದಲ್ಲಿಹುದೆಲ್ಲವೂ ನಿನದಲ್ಲ. ಇರುವರರಿತು, ಬಾಳಲದುವೇ ಬದುಕೆಂದು,ಮನಸಿಗೊಂದು ಮಾತು ಹೇಳು…. *****************************
ಚಿಕ್ಕಿಯ ಫೋಟೋ
ಕಥೆ ಚಿಕ್ಕಿಯ ಫೋಟೋ ಮಧುರಾ ಕರ್ಣಮ್ “ಚಿಕ್ಕಿ ಇಸ್ಕೂಲಿಗೆ ಬತ್ತೀಯೇನೆ? ಟೇಮಾಗ್ತಾ ಐತೆ” ಎಂದು ಕಮಲಿ ಕೂಗು ಹಾಕಿದಾಗ ಚಿಕ್ಕಿ “ಒಸಿ ನಿಂತ್ಕೊಳ್ಳೆ, ಬಂದೆ” ಎನ್ನುತ್ತ ತಟ್ಟೆಯಲ್ಲಿದ್ದ ತಂಗಳನ್ನ ಮುಗಿಸಿ ಕೈ ತೊಳೆದಳು. ಅಲ್ಲಲ್ಲಿ ಹರಿದ ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿ “ನಾನ್ ಇಸ್ಕೂಲಿಗೆ ಹೋಗ್ಬರ್ತೀನಿ ಕಣವ್ವೋ” ಎಂದು ಕೂಗು ಹಾಕಿದಳು. “ಚಿಕ್ಕಿ, ಹಿಂದೆ ಒಂದ್ನಾಲ್ಕು ಪಾತ್ರೆ ಅವೆ, ತೊಳದ್ಹೋಗೆ” ಎಂಬ ಕೂಗು ಕೇಳಿಸದಂತೆ ಕಮಲಿಯ ಕೈಹಿಡಿದು ಓಡಿದಳು. “ಈ ಅವ್ವ ಹೋಗಾಗಂಟ ಕೆಲ್ಸ ಮಾಡಿದ್ರೂನು ಮತ್ತೆ `ಇದ್ […]
ಜಿಹ್ವೆ
ಕವಿತೆ ಜಿಹ್ವೆ ಅರುಣ ರಾವ್ ಈ ನಾಲಿಗೆಗೇನು?ಅಂದು ಕೊಂಡದ್ದು ನೋಡಿದ್ದುಊಹಿಸಿಕೊಂಡದ್ದು ಕಲ್ಪಿಸಿಕೊಂಡದ್ದು ನುಡಿದುಬಿಡುತ್ತದೆ ನುಡಿದೇ ಬಿಡುತ್ತದೆತುಸು ತಡೆದರೇನು ನಷ್ಟ? ಎಂದೊಮ್ಮೆಕೇಳಿದರೆ ಸರಸರನೆ ತಿರುಗಿ ಗಿರಗಿರನೆ ಸುತ್ತಿಮೇಲೆ ಕೆಳಗೆ ಹಾರಿ ಉರಿದುರಿದು ಬೀಳುತ್ತದೆ ತಾಳ್ಮೆಯಿಂದಿದ್ದು ಕೊಂಚಯೋಚಿಸಬಾರದೇ ಕ್ಷಣಕಾಲ?ಮನಃಶಾಂತಿಯಾದರೂ ಇರುತಿತ್ತು ಆಗಕೇಳಿದ್ದಷ್ಟೇ ಅಲ್ಲ, ನೋಡಿದ್ದೂ ಸುಳ್ಳಾಗುವ ಕಾಲಇದುವೆ ಎಂದೊಂದರೆಗಳಿಗೆ ನೆನೆಯಬಾರದೆ? ಗಳಿಗೆಗೊಂದರಂತೆ ಮಾತಂತೆ ಕತೆಯಂತೆಅದರಲೊಂದಿಷ್ಟು ಹುರುಳು ಹೂರಣಮತ್ತೆ ಕೆಲವೇನೋ ಕಸ ಕಡ್ಡಿ ಕೊಚ್ಚೆ ಕೂಳೆಕೆಸರೆರೆಚಾಟ ಅರೆಚಾಟ ಅಬ್ಬರಕಲ್ಪನೆಯ ಕೂಸಿನ ಅರೆನಗ್ನ ಕುಣಿದಾಟ ಮುಂದೊಂದು ಹಿಂದೊಂದು ಮತ್ತೊಂದು ಮಗದೊಂದು ಆಗೊಂದು ಈಗೊಂದುನನಗೊಂದು […]
ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ?
ಲೇಖನ ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? ಆಶಾ ಸಿದ್ದಲಿಂಗಯ್ಯ ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ಚಳಿಗಾಲದ ತರಕಾರಿಗಳು: ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, […]
ನಸುಕಿನ ತುಂತುರು
ಕವಿತೆ ನಸುಕಿನ ತುಂತುರು ಸ್ಮಿತಾ ಶ್ಯಾಮ ತುಂತುರು ಹನಿಗಳ ಮುಂಜಾನೆಯ ಮಳೆಸರಿಗಮ ಪದನಿಸ ಹಾಡುತಿದೆಸಪ್ತ ಸ್ವರಗಳ ಸಂಗಮದಲಿ ತೇಲಿದೆಹಸಿರನುಟ್ಟು ಕಂಗೊಳಿಸುತಿಹ ವಸುಧೆ || ಪ|| ಹಕ್ಕಿಗಳಿಂಚರದಿ ಬೆರೆತಿದೆ ಮಳೆಗಾನಹೊಮ್ಮುತಲಿದೆ ಹೊಂಬೆಳಕಿನ ರವಿ ಕಿರಣಪರಿಮಳವನು ಸೂಸುತಲಿವೆ ಹೂಬನಪ್ರಕೃತಿಯ ಸೊಬಗದು ರೋಮಾಂಚನ. ||೧|| ಮುಂಜಾನೆಯ ಮಳೆಯ ಸಿಂಚನತನನ ತನನ ನವಿಲ ನರ್ತನಸಾಗರದ ದಡಕೆ ಅಲೆಯ ಚುಂಬನತಂಪು ಸೂಸುತ ಹಾಯ್ವ ಪವನ. ||೨|| ಸುಪ್ರಭಾತ ಹಾಡುತಲಿದೆ ಪ್ರಾತಃಕಾಲದಿ ವರ್ಷವುಗುಡಿಗೋಪುರಕದುವೆ ನಸುಕಿನ ಅಭಿಷೇಕವುಶುಭ್ರಗೊಂಡಿಹುದು ಮನೆ ಮನೆಯ ಅಂಗಳವುತನುಮನವನು ತುಂಬುತಲಿದೆ ನವೋಲ್ಲಾಸ ಚೇತನವು||೩|| *********************************
ಅಂಕಣ ಬರಹ ಘೋರಾರಣ್ಯದಲ್ಲಿ ಹಾರುವ ಹಂಸೆ ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರವಾದ ನಿಲುವನ್ನು ತಾಳಿದ ಸಾಹಿತ್ಯಕ ಮತ್ತು ಧಾರ್ಮಿಕ ಚಳುವಳಿಯೆಂದರೆ ಅದು ವಚನಸಾಹಿತ್ಯ. ಅದರ ಉಗಮಕ್ಕೆ ಕಾರಣವಾದದ್ದು ಬಸವಾದಿ ಪ್ರಮಥರ ಧಾರ್ಮಿಕ ತಾತ್ವಿಕ ಸುಧಾರಣೆಗಳು ಅದರೊಂದಿಗಿನ ಸಾಮಾಜಿಕ ಸುಧಾರಣೆ. ಅವಿದ್ಯಾವಂತರಿಂದ ವಿದ್ಯಾವಂತರವರೆವಿಗೂ ತಮ್ಮದೇಯಾದ ಸಾಮಾಜಿಕ, ಧಾರ್ಮಿಕವಾಗಿ ಜೀವನಕ್ರಮದ ಬಗೆಗಿನ ಕಾಳಜಿಯ ಅಭಿವ್ಯಕ್ತಿಯು ಮುಕ್ತವಾಗಿ ನಡೆದದ್ದಾಗಿದೆ. ಸಮಾಜ ಸುಧಾರಣೆಯು ಮುಖ್ಯ ಆಶಯವಾಗಿ ವಚನಗಳು ರಚನೆಯಾದರೂ ಅದರೊಂದಿಗಿನ ಸಾಹಿತ್ಯಿಕ ಅಂಶಗಳು ಉಪೋತ್ಪನ್ನವಾಗಿ ಹೊಂದಿ ವಚನಗಳು ರಚಿಸಲ್ಪಟ್ಟವು. ಆ ಚಳುವಳಿಯಲ್ಲಿನ ‘ಕಂಭದ […]
ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….6 ನಾಗಮ್ಮಜ್ಜಿಯ ಅಂತಿಮಯಾತ್ರೆ ನಮ್ಮ ತಂದೆಯವರಿಗೆ ಶಿಕ್ಷಕ ವೃತ್ತಿ ದೊರೆಯಿತಾದರೂ ಇಲಾಖೆಯ ನಿಯಮದಂತೆ ಶಿಕ್ಷಕ ತರಬೇತಿ ಮುಗಿಸುವುದು ಅನಿವಾರ್ಯವಾಗಿತ್ತು. ತರಬೇತಿಗಾಗಿ ಆಯ್ಕೆಗೊಂಡು ಅವರು ಕಾರವಾರದ ಟ್ರೇನಿಂಗ್ ಕಾಲೇಜ್ ಸೇರುವಾಗ ಅವ್ವನ ಗರ್ಭದಲ್ಲಿ ನಾನು ಆಡಲಾರಂಭಿಸಿದ್ದೆನಂತೆ. ನಾಗಮ್ಮಜ್ಜಿಯ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಅವ್ವನ ಸೀಮಂತ ಇತ್ಯಾದಿ ಸಡಗರದಲ್ಲಿ ಸಂಭ್ರಮಿಸುತ್ತ ತನ್ನ ಕಣ್ಗಾವಲಿನಲ್ಲಿ ಮಗಳ ಬಾಣಂತನಕ್ಕೆ ಬೇಕು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಊರ ಸುತ್ತಲಿನ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣು […]
ಮುನ್ನಡೆಗೆ ಹಿಂಬಾಗಿ
ಕವಿತೆ ಮುನ್ನಡೆಗೆ ಹಿಂಬಾಗಿ ಹರೀಶ ಕೋಳಗುಂದ ಕಣ್ಣ ಪರದೆಯ ಮೇಲೆ ಓಡುವಬಣ್ಣ ಬಣ್ಣದ ಚಿತ್ರಗಳುಉರುಳುವ ಗಾಲಿಚಕ್ರದ ಪರಿಧಿಯಲಿಸರಿದು ಮರೆಯಾಗುವ ಮೈಲುಗಲ್ಲುಗಳುದೂರ ತೀರದಲ್ಲೆಲ್ಲೋ ಇಳಿಬಿದ್ದು ನೆಲಕಚ್ಚಿದಾಕಾಶಕಾಗಜದೋಣಿಯ ಬಟ್ಟಲಿಗೆ ತೊಟ್ಟಿಕ್ಕುವ ಪಾತಾಳಗಂಗೆಭೂಮಧ್ಯರೇಖೆಗೂ ಭ್ರಮಣದ ನಶೆಇರುಳು ಬೆಳಕಿನಾಟಗೇಲಿ ನಗುವ ಕತ್ತಲುಬೆಂಕಿಯುಗುಳುವ ಮುಗಿಲುತಣ್ಣಗೆ ಸುಡುವ ಹಸಿವ ಜ್ವಾಲೆಕುದಿವ ಮೌನತುಮುಲಗಳ ಅದುಮಿಟ್ಟಂತೆಲ್ಲಾರೆಕ್ಕೆ ಬಡಿವ ತವಕಮಂಜು ಹೊದ್ದು ಮಲಗಿದ ಬೂದಿಯೊಳಗೂಹೆಪ್ಪುಗಟ್ಟಿ ಕುಳಿತ ಅಗ್ನಿಶಿಲ್ಪಜೀವದುಸಿರಿನ ಕಾತರಉರಿವ ಮಂದಾಗ್ನಿಯ ಬುತ್ತಿಗೆ ಕೈಯಿಕ್ಕುವ ತುಡಿತದೊಂದಿಯಾಗದ ಕಟ್ಟಿಗೆಯ ನಿರಾಶಾಭಾವನೋಯುವ ಕರುಳ ಕಣ್ಣ ಹನಿಗೆಚಿಗುರೊಡೆವ ಸಾಂತ್ವನದ ಬೆರಳುಒಂದೋ ಎರಡೋಒಡಕಲು ಬಿಂಬಕ್ಕೆ ಕೈ ಚಾಚಿ […]
ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್
ಕವಿತೆ ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ ಸ್ಮಿತಾ ಭಟ್ ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ […]