ಲಂಕೇಶ್ ವಿಶೇಷ ಲೇಖನ
ಲಂಕೇಶ್ ಒಂದು ನೆನಪು
ಪಿ.ಲಂಕೇಶ್ ಅವರು ಒಬ್ಬ ಕಥೆಗಾರ,ಲೇಖಕ,ನಾಟಕಕಾರ,ಸಿನಿಮಾ ನಿರ್ದೇಶಕ,ಪತ್ರಕರ್ತ.ಎಲ್ಲಾ ಬಹುಮುಖ ಪ್ರತಿಭೆಯ ಅನಾವರಣ.ಅವರ ಪ್ರತಿಯೊಂದು ಬರಹದಲ್ಲಿ ವಾಸ್ತವವಕ್ಕೆ ಹೆಚ್ಚು ಒತ್ತು ಕೊಟ್ಟು ಬರೆಯುತ್ತಿದ್ದರು.
ಒಂದು ತಲೆಮಾರನ್ನು ಪ್ರಭಾವಿಸಿದ ವ್ಯಕ್ತಿ ಪಿ ಲಂಕೇಶ್. ಜೀವನದಲ್ಲಿ ನಾವು,ಹಲವು ಲೇಖಕರ ಪ್ರಭಾವ ಬೀರುವಂತಹ ಪುಸ್ತಕಗಳನ್ನು ಓದ ಬೇಕಾಗುತ್ತದೆ,.ಅಂತಹ ಲೇಖಕರ ಪುಸ್ತಕಗಳನ್ನು ಓದುವುದರಿಂದ ನಾವು ಜೀವನವನ್ನು ನೋಡುವ ಸ್ಥಿತಿಬದಲಾಗುತ್ತದೆ. ಪುಸ್ತಕಗಳು ನಮ್ಮನ್ನು.ಪ್ರಭಾವಿಸುತ್ತವೆ,ಅವುಗಳ
ಪ್ರಭಾವಕ್ಕೆ ಒಳಗಾಗಿ ಅದಕ್ಕೂ ಮೀರಿ ನಾವು ಬೆಳೆಯಬೇಕು
ಅಂತವರಲ್ಲಿ ಒಬ್ಬರು ಬರಹಗಾರ ಪಿ ಲಂಕೇಶ್. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಕೊಂಡು,ಹಲವು ಸಂಶೋಧನೆ,ಹೊಸ ಹೊಸ ಪ್ರಯೋಗಗಳು, ಮಾಧ್ಯಮದಿಂದ ಮಾಧ್ಯಮಕ್ಕೆ ಅನುಭವಗಳನ್ನು.ಪಡೆಯುತ್ತಾ ನಿರ್ಭಿತಿಯಿಂದ ಬರೆದ ವ್ಯಕ್ತಿ ಪಿ.ಲಂಕೇಶ್..ಕೆಲವು ಲೇಖಕರ ಜೀವನದಲ್ಲಿ ಬಾಲ್ಯ ತುಂಬಾ ಮುಖ್ಯವಾಗುತ್ತದೆ,ಒಂದಲ್ಲ ಒಂದು ರೀತಿಯಲ್ಲಿ ಜೀವನದಲ್ಲಿ ಪ್ರಭಾವ ಬೀರಿರುತ್ತದೆ. ಪಿ.ಲಂಕೇಶ್ ಅವರು ಹುಟ್ಟಿದ್ದು ಶಿವಮೊಗ್ಗದ ಹೊನ್ನಾಳಿ ಸಮೀಪ ಕೊನಗನ ವಳ್ಳಿ.
ಅವರು ಇಷ್ಟ ಪಟ್ಟಿದ್ದು ಪ್ರಕೃತಿಯ ವಾತಾವರಣ
ಅಲ್ಲಿಯ ಜೀವನ
ಜನರ ಜೀವನ,ಕಾತರ,ಪ್ರೇಮ ಕಾಮ ಅವರು ನೋಡಿದ್ದುಅಲ್ಲಿಯ ವಾಸ್ತವ ಜಗತ್ತಿನ ಕಷ್ಟ ಸುಖಗಳ ಚಿತ್ರಣ ಬರಹಗಳಲ್ಲಿ ಬಿಂಬಿಸಿದರು.ಒಮ್ಮೆ ಅವರ ಊರಲ್ಲಿ ಬೆಂಕಿ ಬಿತ್ತಂತೆ, ಭೀಕರ ಅವಘಡ,ರುದ್ರಭಯಾನಕ
ದೃಶ್ಯ ಅವರ ಕಣ್ಮುಂದೆ ಕರಾಳ ರೂಪ,ತೆರೆದು ಕೊಂಡು,
ಆಗ ಇನ್ನೂ ಭೀಕರ ಪರಿಣಾಮ ಬೀರಿದ್ದು,ಲಂಕೇಶರ ಮನಸ್ಸನ್ನು ಕೆದಕ್ಕಿತ್ತಂತೆ,
ಇನ್ನೊAದು ಭಯಾನಕ ಪ್ಲೇಗ್ ಕಾಯಿಲೆ ನೂರಾರು ಜನರನ್ನು ಬಲಿ ತೆಗೆದು ಕೊಂಡಿತ oತೆ..ಇದರಿ oದ ಉಂಟಾದ ಭಯ,ಕಸಿವಿಸಿ ಪ್ಲೇಗ್ ನಿಂದ ಅನುಭವಿಸಿದ ನರಕ ಅವರನ್ನು ಆಗ ಕಾಡಿತ್ತಂತೆ,
ಪ್ಲೇಗ್ ಕಾದಂಬರಿ ಬರೆದ ರಾಬರ್ಟ್ ಕ್ಯಾಮಸ್ ಅವರ ಕಾದಂಬರಿ,ಅವರು ಅದರಲ್ಲಿ ಪ್ಲೇಗ್ ನ ಬಗ್ಗೆ ಸವಿಸ್ತಾರವಾಗಿ ಬರೆದಿರುವುದು,ತಾನು ಆ ಪುಸ್ತಕದ ಪ್ರಭಾವಕ್ಕೆ ಒಳಗಾಗಿರುವುದನ್ನು ಕೂಡ ಲಂಕೇಶ್ ಅವರು ಒಂದು ಕಡೆ ಹೇಳಿ ಕೊಳ್ಳುತ್ತಾರೆ. ಜೀವನದಲ್ಲಿ ಹಲವಾರು ಲೇಖಕರ ಪ್ರಭಾವಕ್ಕೆ ಒಳಗಾಗಿದ್ದು ಕುವೆಂಪು, ಬೇಂದ್ರೆ,ಶಿವರಾಮ್ ಕಾರಂತರು,ಅಡಿಗರು ರಾಜರತ್ನಂ ಬಸವಣ್ಣ,ಅಲ್ಲಮ,ಅಕ್ಕಮಹಾದೇವಿ, ಮುಂತಾದವರು.ಕುವೆAಪು ಅವರ ಸರಳ ಸುಂದರ ಕವಿತೆಗಳು, ಮಕ್ಕಳ ಕಥೆ ,ಅವರ ವೈಚಾರಿಕತೆ ಅವರ ಕಾದಂಬರಿಯಲ್ಲಿ ಹಿಡಿದಿಡುವ ಬ್ರಹತ್ ಜಗತ್ತು,ಅವರು ಜೀವನವನ್ನು ನೋಡುವ ಕ್ರಮ ನನಗೆ ಇಷ್ಟವಾಯ್ತು ಅಲ್ಲದೇ ಬೇಂದ್ರೆಯವರ
ಭಾಷೆಯ ಪ್ರೇಮ,ಸಾಹಿತ್ಯ,ಭಾಷೆ ಉಪಯೋಗಿಸುವ ರೀತಿಗೆ ನಾನು ಪ್ರಭಾವಿತನಾದೆ ಎನ್ನುತ್ತಾರೆ ಲಂಕೇಶ್.
ಶಿವರಾಮ.ಕಾರAತರು ಜೀವನವನ್ನು ಎದುರಿಸುವುದು ಹೇಗೆ ಎಂದು,ರಾಜರತ್ನಂ ಅವರು
ಹೇಗೆ ಸಾಹಿತ್ಯ ಬರೆಯಬೇಕೆಂದು ಹತ್ತಿರ ಕುಳ್ಳಿರಿಸಿ ಹೇಳಿಕೊಡುತ್ತಿದ್ದರು.ಇನ್ನೂ ಬಸವಣ್ಣ ಅವರ ವಚನಗಳು ಕಾವ್ಯವನ್ನು ಮೀರಿದ ದರ್ಶನ.ತನ್ನ ಸಾಹಿತ್ಯದ ಗದ್ಯದಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿಯವರ ಬಗ್ಗೆ ಬರೆದಿದ್ದೇನೆ.
ಗದ್ಯವನ್ನು ಪದ್ಯ ರೂಪಕ್ಕೆ ಇಳಿಸುವ ಅವರ ಕಾವ್ಯದ ಸೊಗಸು ಚಂದ.ಅವರ ಒಂದು ಕವನ ಅವ್ವ
ಅವರ ಅಮ್ಮನ ಬಗ್ಗೆ ಬರೆದಂತ ಪದ್ಯ ಅಷ್ಟು ಸೊಗಸಾಗಿತ್ತು. ಇನ್ನೂ ವಿಮರ್ಶಕರ ಮನ ಸೆಳೆದ ರೊಟ್ಟಿಕಥೆ ಒಂದು ಹೆಣ್ಣಿನ ಸುತ್ತ ಹೆಣೆದದ್ದು ತುಂಬಾ ಪ್ರಚಾರ ಗೊಂಡಿತು.
ಇನ್ನೂ ಅವರ ಬರಹಗಳು ಒಂದು ಮುಸ್ಸಂಜೆಯ ಕಥಾ ಪ್ರಸಂಗ ಹಳ್ಳಿಯ ತಬ್ಬಲಿತನ, ತೊಂದರೆಗಳ ಬಗ್ಗೆ ಬರೆದಿದ್ದಾರೆ.ಇಡಿ ಪಸ್ ರುದ್ರ ನಾಟಕ ಬಯಲು ರಂಗಭೂಮಿ ಪ್ರದರ್ಶನ
ತುಂಬಾ ಹೆಸರು ತಂದು ಕೊಟ್ಟಿತ್ತು.ಸಂಕ್ರಾoತಿ ಅವರ ನಾಟಕ ಒಂದು ಮೈಲಿಗಲ್ಲು ಸ್ರಷ್ಟಿ ಮಾಡಿತು.
ಆಮೇಲೆ ಸಿನಿಮಾ ರಂಗ ಪ್ರವೇಶ ವಾಯಿತು ಸಿನಿಮಾ ಮಾಡಿದರೆ ಜನಕ್ಕೆ.ಮುಟ್ಟಬೇಕು,ಅವು ಜನರನ್ನು ಪ್ರಚೋದಿಸುವಂತದ್ದಾಗಿರಬೇಕು.ಜನ ನನಗೆ ಪ್ರೀತಿ ಕೊಟ್ಟಿದ್ದಾರೆ ನನ್ನನ್ನು ಬೆಳೆಸಿದ್ದಾರೆ ,ವಿಶ್ವಾಸ ಕೊಟ್ಟಿದ್ದಾರೆ ನಾನು ಬರೆಯುವುದು ಜನಕ್ಕೆ,ಇದು ಲಂಕೇಶ್ ಅಭಿಪ್ರಾಯ. ಪಲ್ಲವಿ,ಅನುರೂಪ, ಎಲ್ಲಿಂದಲೋ ಬಂದವರು,ಖAಡವಿದೆಕೋ ಮಾಂಸ ವಿದೇಕೋ… ಚಿತ್ರಗಳನ್ನು ನಿರ್ದೇಶಿಸಿದರು. ಪಲ್ಲವಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡರು.
ಸoಸ್ಕಾರ ಚಿತ್ರದಲ್ಲಿ ನಟನಾಗಿ,ನಾರಾಯಣಪ್ಪನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದರು.
ಆಮೇಲೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡರು ಬಿಚ್ಚು, ತಲೆಮಾರು
ಅವರ ಕಲ್ಲು.ಕರಗುವ ಸಮಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಹಲವು ಸಾಹಿತಿಗಳನ್ನು ಕನ್ನಡ ಸಾಹಿತ್ಯ ಜಗತ್ತಿಗೆ ಪರಿಚಯಿಸಿದರು.
ರವೀಂದ್ರ ರೇಷ್ಮೆ,,ಸಿ ಎನ್ ದ್ವಾರಕನಾಥ್,ಪುಂಡಲೀಕ ಶೇಟ್,ಅಬ್ದುಲ್ ರಶೀದ್,
ನಟರಾಜ್ ಹುಳಿಯಾರು, ಬಿ ಚಂದ್ರೇಗೌಡ,ವೈದೇಹಿ,ಸಾ ರಾ ಅಬೂಬಕರ್ ಇನ್ನೂ ಅನೇಕರನ್ನು ಪರಿಚಯಿಸಿದ ಹೆಗ್ಗಳಿಕೆ ಪಿ ಲಂಕೇಶ್ ಅವರದ್ದು.ಅವರ ನಾಟಕಗಳು ಬಿರುಕು ಇಡಿ ಪಸ್ ಗುಣಮುಖ ನನ್ನ ತಂಗಿಗೊAದು ಗಂಡು ಕೊಡಿ
ಅಂಕಣ ಬರಹಗಳು ಟೀಕೆ ಟಿಪ್ಪಣಿ , ಕಂಡದ್ದು ಕಂಡ ಹಾಗೆ ಪ್ರಸ್ತುತ
ಕಥೆಗಳು ,ಕಲ್ಲು ಕರಗುವ ಸಮಯ ,ಉಲ್ಲಂಘನೆ ,ಮಂಜು ಕವಿದ ಸಂಜೆ
ಸಮಗ್ರ ಕಥೆಗಳ.ಸಂಕಲನ,ಬಿರುಕು,ಮುಸ್ಸ oಜೆಯ ಕಥಾ ಪ್ರಸಂಗ ಅಕ್ಕ
ಹೀಗೆ ಹಲವಾರು ಕೃತಿಗಳನ್ನು ಪರಿಚಯಿಸಿದ ಪಿ ಲಂಕೇಶ್ ವಾಸ್ತವದ ಚಿತ್ರಣವೇ ಹೆಚ್ಚು ಅರ್ಥವತ್ತಾಗಿ ಬರೆದರು.
ಅಧ್ಯಾಪನ ವೃತ್ತಿ ತೊರೆದು ಪತ್ರಿಕಾ ರಂಗ ಪ್ರವೇಶಿಸಿ ದರು.ತಾನೇ.ಸಮಾಜದ ಪ್ರತಿನಿಧಿಯಾಗಿ ಪತ್ರಿಕೆ ಶುರುಮಾಡಿದೆ ಒಂದು ವ್ಯವಸ್ಥೆಯನ್ನು ಬದಲಿಸುವ ನಿಟ್ಟಿನಲ್ಲಿ.ನನ್ನ ದನಿಯಾಗಿ, ಜನರ ದನಿಯಾಗಿ ಪತ್ರಿಕೆಯ ಮೂಲಕ ವೇದಿಕೆ ಒದಗಿಸಿದೆ, ಅವರದೇ ಹೆಸರಿನ ಪತ್ರಿಕೆ ಲಂಕೇಶ್ ಪತ್ರಿಕೆಜನ ಸಾಮಾನ್ಯರ ಪತ್ರಿಕೆಯಾಗಿ ಮೆರೆಯಿತು
ವಾಸ್ತವ ಬದುಕಿನ ಚಿತ್ರಗಳನ್ನು ಸಮಾಜಕ್ಕೆ ಪರಿಚಯಿಸಿತು ಅದು ಕೂಡ ಎತ್ತರಕ್ಕೆ ಬೆಳೆಯಿತು.
ಪತ್ರಕರ್ತನಾಗಿ ಅವರ ಜೀವನ ಪೂರ್ತಿ ಪತ್ರಿಕೆಯಲ್ಲಿ ಮುಳುಗಿದರು,ಅವರಿಗೊಂದು ನೋವಿತ್ತು ತನಗೆ ಬರಹಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ಒಂದು ಕಡೆ ಹೇಳುತ್ತಾರೆ.
ಅವರ ಪತ್ರಿಕೆಯಲ್ಲಿ ಅವರು ಅಂಕಣ ಬರೆಯುತ್ತಿದ್ದರು..ಅದನ್ನೇ ಅವರು ಟೀಕೆ ಟಿಪ್ಪಣಿ ಎನ್ನುವ ಮೂರು ಪುಸ್ತಕಗಳು ಹೊರಬಂದವು.ಗಾAಧೀಜಿ,ಜಯಪ್ರಕಾಶ್ ನಾರಾಯಣ ಅವರ ಮೇಲೆ.ಗಾಢವಾದ ಪರಿಣಾಮ ಬೀರಿದರಂತೆ.
ಗಾ oಧೀಜಿಗಿದ್ದ ಸತ್ಯ ಶೋಧನೆಯ ಛಲ, ಸಾಮಾಜಿಕ ಕಾಳಜಿ,
ಜೆ ಪಿ ಅವರಿಗೆ ಇದ್ದ ವಿಸ್ತಾರವಾದ ರಾಜಕೀಯ ನೀತಿ ನಾನು ಅವರಿಂದ ಪ್ರಭಾವಿತನಾಗಿ ನನ್ನ ಪತ್ರಿಕೆ ಜನರಿಗೆ ನೀಡಿದ್ದೇನೆ.
ಒಂದು ಕಡೆ ಅಂಕಣ ಬರೆಯುತ್ತಾ ಹೇಳುತ್ತಾರೆ ಲಂಕೇಶ್ ಅಂಕಣ ಬರೆಯುವುದು ಅಂದರೆ ಅಮರತ್ವದ ಜೊತೆಗೆ ಹುಡುಗಾಟ ಆಡುವ ಆತ ತನ್ನ ಸುತ್ತಣ ಬದುಕು ಹುಮ್ಮನಸ್ದು ಗೊಂಡು ಬರೆಯುತ್ತಾನೆ ,ಹುಮ್ಮನಸ್ಸನ್ನು ಸ್ಫೂರ್ತಿ ಅನ್ನುವುದಕ್ಕೆ ಹಿಂಜರಿಕೆಯಾಗುತ್ತದೆ. ಬುದ್ಧಿಜೀವಿಯ ಹಾಗೆ ಸಂಕೀರ್ಣ ವಾಗಿ ಬರೆಯಲಾಗದು, ಕವಿಯಂತೆ ಭವಿಷ್ಯದ
ಜನಾಂಗಕ್ಕೆಬರೆಯುವುದಾಗಲಿ ಸಾಧ್ಯವಿಲ್ಲ. ಇವತ್ತಿನ ಭಾಷೆಯಲ್ಲಿ ಬರೆದರೆ ಓದುಗರ ಆಸಕ್ತಿ ಕೆರಳಿಸಿದರೆ ವ್ಯರ್ಥವಾಗುವುದು.ಅಂಕಣ ಬರೆಯುವುದು ್ಅದರ ಜೀವಂತಿಕೆ. ಕಾಪಾಡುವುದು ಮುಖ್ಯವಾಗುತ್ತದೆ
ಉತ್ತಮ ಕಥೆ ಕಾದಂಬರಿ ಓದುವುದು ಎಷ್ಟು ಅರ್ಥಪೂರ್ಣ ಹಾಗೆಯೇ ಅಂಕಣ ಓದುವುದು ಕೂಡ ಅಷ್ಟೇ ಅರ್ಥಪೂರ್ಣ ಎನ್ನುವುದು ಲಂಕೇಶ್ ಅವರ ಅಭಿಪ್ರಾಯ
ಜನವರಿ ಇಪ್ಪತೈದು ೨೦೦೦ ನೆ ಇಸವಿಯಂದು ನಮ್ಮನ್ನು ಅಗಲಿದರು.ಪತ್ರಿಕಾ ಲೋಕಕ್ಕೆ ಅವರ ಕೊಡುಗೆ ಅನನ್ಯ.
****************************************************************
ವೀಣಾ ರಮೇಶ್
ಉತ್ತಮ ಗುಣಮಟ್ಟದ ಬರಹ. ಧನ್ಯವಾದಗಳು
ಲೇಖನ ಚೆನ್ನಾಗಿದೆ ಮೇಡಂ ಅಭಿನಂದನೆಗಳು
ಕನ್ನಡದ ಪ್ರಜ್ಞೆಯನ್ನು ನೆನಪಿಸಿಕೊಂಡಿದ್ದೀರಿ.