ಕವಿತೆ
ಒಲವಿನ ಹಾಡು
ವಸುಂಧರಾ ಕದಲೂರು.
ಅನಗತ್ಯ ನಗೆ ಬೀರುತ್ತಾ
ಅವನತ ವದನಳಾಗಿ
ಅನವರತ ಕನವರಿಸಿ
ನಿನ್ನ ಸೇರಬೇಕೇನು?
ಅಂಜದೆ ಅಳುಕದೆ
ಮುನ್ನಡಿ ಇಟ್ಟು ನಿನ್ನ
ಸೇರುವ ನನ್ನ ಎದೆಗಾರಿಕೆ
ನಿನಗೆ ಸೇರದೇನು?
ಸಾಕು ಬಿಡು ನಾನೇನು
ಮೂಕ ಪಶುವೇ?
ನನ್ನ ಪ್ರೇಮವು ನಿನಗೆ
ಮೋಹ ಪಾಶವೇ?
ಒಲವು ಚಿಗುರಲು
ಚಿಗುರಿ ಫಲಿಸಲು
ನೀ ನಲುಮೆ ತೋರು
ನಾ ನೆಲೆಯೂರುವೆ
‘ಒಲವೇ ನಲಿವು; ನಲಿವೇ
ಗೆಲುವು’- ಮಂತ್ರ ಸಾಕಲ್ಲವೇ
ವೇದ ಪುರಾಣದಲೂ ಈ
ನುಡಿಗೆ ಸಾಕ್ಷ್ಯ ಇದೆಯಲ್ಲವೇ
***********************
ಹೌದು ವೇದಪುರಾಣದಲ್ಲೂ ಇದಕ್ಕೆ ಸಾಕ್ಷಿಯಿದೆ.ನಿಜಕ್ಕೂ ಚಂಧಕವಿತೆ ಅಭಿನಂದನೆಮೆಡಮ್
ಸಮಾನತೆ ಹಾಗೂ ಪ್ರೀತಿಯ ಹಂಬಲ ;
ಹೆಣ್ಣು ಗಂಡಿಗೆ ಒಂದೇ ಸ್ವರೂಪ .ಲಿಂಗಬೇಧ ಪ್ರಶ್ನಿಸುವ ಹಾಗೂ ವೇದ ಪುರಾಣದಲ್ಲಿ ಸಹ ಪಂಚಮವೇದ ಪ್ರೇಮಕ್ಕೆ ಸ್ಥಾನವಿದೆ ಎಂಬ ಧ್ವನಿಯನ್ನು ಕವಯಿತ್ರಿ ಎತ್ತಿದ್ದಾಳೆ…
ಚೆಂದ ಕವಿತೆ…
Super madam