ನಾಲ್ಕು ದಿನದ ಪಯಣ

ನಾಲ್ಕು ದಿನದ ಪಯಣ

ಕಾವ್ಯಯಾನ ನಾಲ್ಕು ದಿನದ ಪಯಣ ತೇಜಾವತಿ ಹೆಚ್.ಡಿ. ಪ್ರವಾಹವೋ ಬಿರುಗಾಳಿಯೋಚಂಡಮಾರುತವೋ ಜ್ವಾಲಾಮುಖಿಯೋ ಸುನಾಮಿಯೋ… ಯಾವುದೋ ಒಂದು ವಿಕೋಪಬಂದೆರಗಲೇಬೇಕುನವನೆಲೆ ರೂಪಾಂತರವಾಗಲುಹೊಸ ಅಲೆ ಪ್ರಸಾರವಾಗಲು… ಬೇಕಾದದ್ದು ಬೇಡವಾಗಿಬೇಡವಾದದ್ದು ಬೇಕಾಗಿಕಸ ರಸವಾಗಿ, ರಸ ಕಸವಾಗಿಎಲ್ಲವೂ ತಲೆಕೆಳಾಗಾಗುವವಿಚಿತ್ರ ಸತ್ಯ-ಮಿಥ್ಯ ಪ್ರತಿಬಿಂಬಗಳ ದರ್ಶನವಾಗಲು…ಓ ಕಾಲನೇ… ವಜ್ರಕ್ಕಿಂತಲೂ ನೀನೆಷ್ಟು ಕಠೋರ.. ನಿನ್ನನುಗ್ರಹವಿದ್ದರೆಹೂವಿನ ಮೇಲಿನ ನಡಿಗೆಇಲ್ಲದಿದ್ದರೆ..ಕತ್ತಿಯ ಮೇಲಿನ ನಡಿಗೆಮುಟ್ಟಿದ್ದೆಲ್ಲಾ ಮಲ್ಲಿಗೆಯಾಗಿಸುವ ನಿನಗೆತಾಕಿದ್ದೆಲ್ಲ ನಂಜಾಗಿಸುವ ಕಲೆಯೂ ಕರಗತವಾಗಿದೆ ಬಿಡು.. ಎಂದಾದರೂ ನಿನ್ನಂತರಗವ ಅಳೆಯಲಾದೀತೇ…?ಈ ಕ್ಷಣಿಕದ ಗೊಂಬೆಗಳು..! ದಾನ ಮಾಡಿದ ಕರಗಳು ಬೇಡುವುದೆಂದರೇನು..ತನ್ನಸ್ತಿತ್ವವ ಪರರ ವಶದಲ್ಲಿಟ್ಟುನಶ್ವರದ ಬಾಳು ಬದುಕುವುದೆಂದರೇನು.. ನೂರೊಂದು […]

ಸಾವಿತ್ರಿ

ಕವಿತೆ ಸಾವಿತ್ರಿ ಡಾ.ಸುರೇಖಾ ರಾಠೋಡ ವೀರ ಮಹಿಳೆ ಸಾವಿತ್ರಿಅಕ್ಷರದ ಅವ್ವ ಸಾವಿತ್ರಿ ಅಕ್ಷರ ಕಲಿಯಲು ಹೊರಾಡಿದಅಕ್ಷರ ಕಲಿಸಲು ಶ್ರಮಿಸಿದವೀರ ಮಹಿಳೆ ಸಾವಿತ್ರಿ ದಿನ ದಲಿತರ ಶಿಕ್ಷಣಕ್ಕಾಗಿನಿಂದನೆ, ಅಪಮಾನ, ಅವಮಾನಗಳನ್ನುಸಹಿಸಿದ ವೀರ ಮಾತೆ ಸಾವಿತ್ರಿ ಬಡವಬಲ್ಲಿದವರೆನ್ನೆದೆ ಎಲ್ಲರಸೇವೆ ಮಾಡಿದದೇಶದ ಮೊದಲ ಶಿಕ್ಷಕಿಮೊದಲ ಮುಖ್ಯೋಪಾಧ್ಯಾಯಿನಿಸಾವಿತ್ರಿ ಮಹಿಳಾ ಶಿಕ್ಷಣಕ್ಕಾಗಿ ಜೀವನವನ್ನೇಮುಡುಪಾಗಿಟ್ಟವೀರ ಮಾತೆ ಸಾವಿತ್ರಿ ಜ್ಯೋತಿ ಬಾ ಪುಲೆಯವರೊಂದಿಗೆಶಾಲೆಗಳನ್ನು ತೆರೆದ ಶಿಕ್ಷಣದಾತೆಸಾವಿತ್ರಿ ಜನರ ಕೆಂಗಣ್ಣಿಗೆ ಗುರಿಯಾಗಿಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡುದಿಟ್ಟತನದಿಂದ ಮುಂದೆ ನಡೆದದಿಟ್ಟ ಮಹಿಳೆ ಸಾವಿತ್ರಿ ಶಾಲಾ ಮಕ್ಕಳ ಬೇಕು ಬೇಡಗಳನ್ನುಕುಂದುಕೊರತೆಗಳನ್ನು ನಿಗಿಸಿದಸಹನಾಮಯಿ ಸಾವಿತ್ರಿ […]

ಮಾತು ಮನವನ್ನು ಅರಳಿಸಬೇಕು

ಲೇಖನ ಮಾತು ಮನವನ್ನು ಅರಳಿಸಬೇಕು ಮಾಲಾ ಕಮಲಾಪುರ್ ಭಾಷೆ ಮನುಷ್ಯನಿಗೆ  ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ  ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ  ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು  ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು […]

ನನ್ನ ಪ್ರೀತಿಯ ಭಾರತ

ಪುಸ್ತಕ ಸಂಗಾತಿ ನನ್ನ ಪ್ರೀತಿಯ ಭಾರತ ಪುಸ್ತಕ:  ನನ್ನ ಪ್ರೀತಿಯ ಭಾರತ ಲೇಖಕರು : ಜಿಮ್ ಕಾರ್ಬೆಟ್  ಕನ್ನಡಕ್ಕೆ : ಪ್ರೊ.ಆರ್.ಎಸ್.ವೆಂಕೋಬ್ ರಾವ್ ಪ್ರಕಾಶನ : ಚಾರು ಪ್ರಕಾಶನ ,ಬೆಂಗಳೂರು ಬೆಲೆ: 125 ಲಭ್ಯತೆ: ಸಂಗಾತ ಪುಸ್ತಕ ,ಧಾರವಾಡ ಜಿಮ್ ಕಾರ್ಬೆಟ್ ಹೆಸರು ಕನ್ನಡಿಗರಿಗೆ ಚಿರಪರಿಚಿತ ,ಪೂರ್ಣ ಚಂದ್ರ ತೇಜಸ್ವಿ ಅವರಿಂದ ಕಾಡಿನಕಥೆಗಳ ಸರಣಿಗಳ ಮೂಲಕ  ಮನೆಮಾತಾಗಿರುವ ಜೀಮ್ ಕಾರ್ಬೆಟ್ ಮತ್ತು ಅವರ ಬರಹ ನಾಲ್ಕು ಗೋಡೆಗಳ ನಡುವೆ ,ಕಾಂಕ್ರೀಟ್ ಸೀಮೆಯ ಯಲ್ಲೂ ಪುಸ್ತಕಗಳನ್ನು ಹೀಡಿದರೆ ಕಾಡಿನ […]

ಅಂಕಣ ಬರಹ ಕಬ್ಬಿಗರ ಅಬ್ಬಿ ಮಗುವಿನ ಪರಿಮಳ ಆ ಮಗು ಹುಟ್ಟಿ ಆಗಷ್ಟೇ ಮೂರು ತಿಂಗಳು ದಾಟಿರಬೇಕು. ಬೆಳಕಿನತ್ತ ಮುಖ ಮಾಡುತ್ತೆ. ಹೊಸ ಮುಖಗಳನ್ನು ನಿರ್ಮಲ ಕಣ್ಣುಗಳೊಳಗೆ ತುಂಬಿ ಏನೋ ನೆನಪಿಸಿಕೊಂಡಂತೆ ತನ್ನಷ್ಟಕ್ಕೇ ಮುಗುಳು ನಕ್ಕು ದೃಷ್ಟಿ ಬದಲಿಸುತ್ತೆ.  ಮಾಮನಿಗೆ ಆ ಮಗುವಿನೊಂದಿಗೆ ಆಡುವುದೆಂದರೆ ಇಷ್ಟ!. ಆತ, ಮಗುವಿನ ನುಣುಪು ಹೊಟ್ಟೆಗೆ, ಹೊಕ್ಕುಳ ಸುತ್ತ ತನ್ನ ಮೂಗು ಸವರಿ ” ಪಂಬಳ ಪಂಬಳ ಬತ್ತನ್ನೇ!” ( ಪರಿಮಳ ಪರಿಮಳ ಬರ್ತಿದೇ!) ಅಂತ ಆಘ್ರಾಣಿಸುತ್ತಾನೆ. ಮಗು ತನ್ನ ಬೊಚ್ಚುಬಾಯಿ […]

ಕಾದಿದೆ ಮುಂಬೆಳಗು

ಕವಿತೆ ಕಾದಿದೆ ಮುಂಬೆಳಗು ಯಮುನಾ.ಕಂಬಾರ ಕಾದಿದೆ ಮುಂಬೆಳಗುಹೊಸ ವರುಷದ ಹೊಸ್ತಿಲಲಿಹುಡುಕುತ್ತಿದೆ – ತೆರೆದ ಬಾಗಿಲುಗಳಿಗೆ !! ತಡಕಾಡುತ್ತಿದೆ – ಕತ್ತಲಲಿಬಚ್ಚಿಟ್ಟ ಪ್ರೀತಿ ಸಹಕಾರಗಳಿಗಾಗಿದೂರಕೆ ಹರಿದ ಬೇರುಗಳು ಸಿಗದೇ – ನರಳುತಿದೆ !! ತನ್ನ ಕೈ ಕೊಸರುತಿದೆ – ಜಾತಿಯ ಜಾಲಗಳಲ್ಲಿ ಸಿಕ್ಕುವಾಗ್ವಾದ ನಡೆಸುತಿದೆ – ಮನುಷ್ಯನ ಬರುವು ನಿರ್ಗಮನ – ಕೇವಲ ಬರಿ ಮೈ ಎಂದು‌!! ತನ್ನ ಅಸ್ಮಿತೆ ಹಾಳಾಗದಿರಲೆಂದುರಾತ್ರಿ ಕಣ್ಣಾಗಿ ತೆರೆದುಕೊಂಡೇ ನಿಂತಿದೆ.ಶ್ರಮವು ವ್ಯರ್ಥವಾಗದಿರಲೆಂದುಮುಗಿಲಿಗೆ ಮುಖಮಾಡಿ ಗೋಳಿ ಡುತಿದೆ – ಈ ಬದುಕು ಶುಭವಾಗಲೆಂದು !! […]

ಹೊಸತು ಉದಯಿಸಲಿ

ಕವಿತೆ ಹೊಸತು ಉದಯಿಸಲಿ ಪ್ರತಿಮಾ ಕೋಮಾರ ನೋವ ಕರಿ ಛಾಯೆಹಿಡಿದೇ ಹೊಸ್ತಿಲೊಳಗೆ ಬಂದೆಅನುಕಂಪದ ಲವ ಲೇಷವೂಇಲ್ಲದೇ ಇಡೀ ವರುಷ ನಿಂದೆ ನಲಿವಿನ ಬಯಲಲ್ಲಿ ನೋವಿನಬೀಜವನು ಬಿತ್ತಿ ನೀರೆರೆದುಬಲವಾಗಿ ಬೆಳೆದೆಬೀಗಬೇಡ ಬಾಗು ಎಂಬಪಾಠ ಪ್ರತಿ ಎದೆಯೊಳಗೆ ಬರೆದೆ ಇಪ್ಪತ್ತರ ವರುಷಮಾಯವಾಗಿಸಿದೆ ಹರುಷಬದುಕು ಬೆಳಗಿಲ್ಲನಡೆಸಿದೆ ಕತ್ತಲೊಳಗೆಉಸಿರ ಬಿಗಿ ಹಿಡಿದು ಈಗ ಹೊರಟಿದ್ದೀಯಾದೊಡ್ಡ ಪಾಠವನು ಕಲಿಸಿಎಂದೂ ಎಚ್ಚರ ತಪ್ಪದ ಹಾಗೇಹಳೆಯಂಗಿ ಕಳಚಿಹೊಸದಾಗಿ ಕಾಲಿಟ್ಟ ಇಪ್ಪತ್ತೊಂದುತೊಳೆದುಬಿಡು ಹಳೆ ಕೊಳೆಯ ನೀರೆರೆ ತುಸು ಬತ್ತಿದ ಕನಸುಗಳಿಗೆಉದಯಿಸಲಿ ಹೊಸತು ಕಾಂತಿಎಲ್ಲರ ಕಂಗಳಲಿಗತವು ಮತ್ತೇ ಮರುಕಳಿಸದ ಹಾಗೇಹೊಸ […]

ಬೇಲಿಯೊಳಗಿನ ಬೆಳೆ –

ಪುಸ್ತಕ ಸಂಗಾತಿ ಬೇಲಿಯೊಳಗಿನ ಬೆಳೆ ಒಂದು ಅವಲೋಕನ ಬೇಲಿಯೊಳಗಿನ ಬೆಳೆ – ಪ್ರಬಂಧ ಸಂಕಲನ – ಡಾ. ಕೆ.ಚಿನ್ನಪ್ಪ ಗೌಡ – ಮದಿಪು ಪ್ರಕಾಶನ, ಮಂಗಳೂರು: ೨೦೨೦ ಪುಟ ೧೦೪, ಬೆಲೆ  ೯೦ ರೂ.  ಇದೊಂದು ‘ವಿಶಿಷ್ಟ’ ಸಪ್ತ ಪ್ರಬಂಧಗಳ ಸರಮಾಲೆ. ಯಾಕೆ ‘ವಿಶಿಷ್ಟ’ ಎಂದರೆ ಇಲ್ಲಿಯ ಏಳೂ ಲೇಖನಗಳು ‘ಪ್ರಬಂಧ’ ಎಂಬ ಒಂದೇ ಪ್ರಭೇದ ಸೂತ್ರಕ್ಕೆ ಒಳಪಡುವುದಿಲ್ಲ! ಇದನ್ನು ‘ಹರಟೆ’ ಎಂದು ಲೇಖಕರು ಕರೆದರೂ ಅದು ಹಳ್ಳಿ ಪಂಚಾಯ್ತಿಕಟ್ಟೆಯ ಸಮಯ ಕೊಲ್ಲುವ ಜಡಭರತರ ಹಾಳು ಹರಟೆಯಾಗದೆ […]

ಶ್ರಮಿಕ

ಕವಿತೆ ಶ್ರಮಿಕ ಡಾ.ಜಿ.ಪಿ.ಕುಸುಮ, ಮುಂಬಯಿನನ್ ತಾಯಿ….ನೀ ಗೆಲ್ಲಬೇಕೆಂದುನಾ ನಿಂತೆ ಒಳಗೆ.ದೂರ ದೂರದವರೆಗೆಯಾರೂ ಇಲ್ಲ ಹೊರಗೆ.ಗಲ್ಲಿಗಲ್ಲಿಗಳಲ್ಲಿ ಮೌನ ಮಲಗಿದೆಮಣ್ಣು ಒಣಗಿದೆ.ನನ್ನೆದೆ ಗೂಡು ಒದ್ದೆಯಾಗ್ತಿದೆನಿನ್ನ ಬಿಟ್ಟು ಹೋಗೊಕಾಗಲ್ಲಹೋದ್ರೆ ಹೋದಲ್ಲಿಬದುಕೋಕಾಗಲ್ಲ.ನನ್ನ ದಿನ, ನನ್ನ ರಾತ್ರಿನನ್ನ ಸೋಲು, ನನ್ನ ಗೆಲುವುಎಲ್ಲವೂ ನೀನೆ..ನೀ ಯಾವತ್ತೂ ಹೀಗೆಮನೆಬಾಗಿಲು ಮುಚ್ಕೊಂಡುಮೂಕಿಯಾಗಿದ್ದಿಲ್ಲ.ಅಂಗಾಂಗ ಸುಟ್ಟುಕೊಂಡಾಗ್ಲೂಮಳೆನೀರು ಮುಳಗಿಸಿದಾಗ್ಲೂಭಯ ಗೆದ್ದಿಲ್ಲ…ಇದೀಗ ಏನಾಯ್ತೋ ತಾಯಿಕಾಣದ ವೈರಿಗೆಎಷ್ಟೊಂದು ಸೊರಗಿದೆ.ಹಳಿತಪ್ಪಿದೆ ನೋಡು ಬದುಕಬಂಡಿಸ್ವಪ್ನನಗರಿಯಲ್ಲೀಗಬದುಕು ಘಮಘಮಿಸುವುದಮರೆತಿದೆ.ಬರಿಗಾಲಲಿ ಬರಿಕಿಸೆಯಲಿಬರಿಹೊಟ್ಟೆಗೆ ಕೈಯನಿಟ್ಟುನೆತ್ತಿಮೇಲೆರಡು ಪ್ಯಾಂಟು ಶರ್ಟುರಾಶಿ ಬಿಸಿಲ ಸೀಳಿಕಾಲನ್ನೆತ್ತಿ ಹಾಕುತಸಾಗ್ತೇನೆ ನಾನುಹೊಸ ಕನಸುಗಳ ನೇಯಲುತೀರ ಬಿಟ್ಟುಸಾಗರವ ದಾಟಲು. ***************************

ಹುನ್ನಾರ

ಕವಿತೆ ಹುನ್ನಾರ ಡಾ.ಸುರೇಖಾ ರಾಠೋಡ ಕಾಲಲಿ ಗೆಜ್ಜೆ ಹಾಕಿನನ್ನ ಚಲನವಲನನಿಯಂತ್ರಿಸುವಹುನ್ನಾರ ನಿನ್ನದು ಕೊರಳಲಿ ತಾಳಿ ಕಟ್ಟಿನನ್ನ ತಾಳ್ಮೆಪರೀಕ್ಷಿಸುವಹುನ್ನಾರ ನಿನ್ನದು ಕೈಯಲ್ಲಿ ಕೈ‌ಬಳೆ ತೊಡಿಸಿಏನು ಮಾಡದಂತೆಕೈಕಟ್ಟಿ ಹಾಕುವಹುನ್ನಾರ ನಿನ್ನದು ಹಣೆಗೆ ನಿನ್ನ ಹೆಸರಿನಕುಂಕುಮವ ಹಚ್ಚಿಸಿಹಣೆಯ ಬರಹವೆನಿನ್ನದಾಗಿಸಿಕೊಳ್ಳುವಹುನ್ನಾರ ನಿನ್ನದು ಕಾಲಿನ ಬೆರಳುಗಳಿಗೆಕಾಲುಂಗುರವ ತೊಡೆಸಿನಡೆಯನ್ನೆ ಕಟ್ಟಿ ಹಾಕುವಹುನ್ನಾರ ನಿನ್ನದು ಎಲ್ಲವ ತೊಡಿಸಿಕಟ್ಟಿ ಹಾಕಿರುವೇ ಎಂದುನೀ ಬಿಗುತ್ತಿರುವಾಗ …ನನ್ನ ಮನಸ್ಸನ್ನುಕಟ್ಟು ಹಾಕಲುಸಾಧ್ಯವೇ?… *********************************************************

Back To Top