ಕಾವ್ಯ ಸಂಗಾತಿ ನಮ್ಮಮ್ಮ ಹೀಗಿದ್ದಳು ಡಾ.ಸುರೇಖಾ ರಾಠೋಡ್ ಯಾವ ಭೂಮಿಗೆಯಾವ ಬೆಳೆ ಬರುತ್ತದೆಂದುಯಾವ ಬೀಜ ಬಿತ್ತಬೇಕೆಂದುನೆಲ ಎಷ್ಟುಹಸಿಯಾಗಿರಬೇಕೆಂದುತಿಳಿದಿರುವನಮ್ಮಮ್ಮ ಭೂವಿಜ್ಞಾನಿ ಏನಲ್ಲ ಯಾವ ಸಮಯಕ್ಕೆಯಾವ ಮಳೆಗೆಯಾವ ಬೆಳೆಬಿತ್ತಬೇಕೆಂದು,ಎಷ್ಟು ಗೊಬ್ಬರ,ಯಾವ ಗೊಬ್ಬರಹಾಕಬೇಕೆಂದುತಿಳಿದಿರುವನಮ್ಮಮ್ಮ ಬೆಳೆ ವಿಜ್ಞಾನಿಯಾಗಿರಲಿಲ್ಲ ಯಾವ ಬೀಜಎಷ್ಟು ದಿನಕ್ಕೆಮೊಳಕೆ ಒಡೆಯುವುದೆಂದು,ಯಾವ ಸಮಯಕ್ಕೆಕಳೆ ತಗೆಯಬೇಕೆಂದು,ಯಾವ ಸಮಯಕ್ಕೆನೀರು ಹಾಯಿಸಬೇಕೆಂದುತಿಳಿದಿರುವನಮ್ಮಮ್ಮ ಸಹಜ ಮನುಷ್ಯಳಾಗಿದ್ದಳು ಯಾವಾಗ ಮಳೆ ಬಂದರೆಬೆಳೆ ಚೆನ್ನಾಗಿಬೆಳೆಯತ್ತ,ಯಾವಾಗ ಮಳೆ ಬಂದರೆಬೆಳೆ ಹಾಳಾಗತ್ತೆ,ಯಾವಾಗ ಬೆಳೆಗೆರೋಗ ಬರತ್ತೆಂದು,ರೋಗಕ್ಕೆ ಯಾವಔಷಧಿಸಿಂಪಡಿಸಬೇಕೆಂದುತಿಳಿದಿರುವನಮ್ಮಮ್ಮ ಪದವೀಧರೆಯಾಗಿರಲಿಲ್ಲ ನಮ್ಮಮ್ಮ ಅಕ್ಷರಕಲಿಯದೇಕೃಷಿ ಕಲಿತಿರುವಭೂಮಿಯೇ ಆಗಿದ್ದಳು…..————————–
ಕಥಾ ಸಂಗಾತಿ ನಿರ್ಧಾರ ವಿಜಯಾಮೋಹನ್ ನಿರ್ಧಾರ ಮನೇಲಿ ಇಂಗೆ ನನ್ನ ತಾಯಿಯ ಸಲುವಾಗಿ,ಒಬ್ಬರಿಂದ ಒಬ್ಬರಿಗೆ ಹುಟ್ಟಿಕೊಂಡಿದ್ದ ಮಾತುಗಳು, ಅವು ಬರೀ ಮಾತಾಗಿರದೆ, ನನ್ನ ಹೃದಯವನ್ನ ಘಾಸಿ ಮಾಡುವಂತೆ ಮಸಿಯುತ್ತಿದ್ದವು. ಅವು ಇಷ್ಟೊಂದು ವಿಕೋಪಕ್ಕೆ ತಿರುಗುತ್ತವೆ ಎಂದು, ನಾನು ಕೂಡ ಯಾವತ್ತು ಎಣಿಸಿರಲಿಲ್ಲ. ಇಂಗೆ ಬದುಕಿನ ಸಂದರ್ಭಗಳು ಒಂದೆ ಸಮವಾಗಿರುವುದಿಲ್ಲ, ಅಥವ ನಾವಂದುಕೊಂಡಂತೆ ಸುಲಭವಾಗೂ ಇರುವುದಿಲ್ಲ, ಈಗ ಮೂರು ದಿವಸದಿಂದ ಮನೇಲಿ, ನನ್ನ ಮತ್ತು ಅಮ್ಮನ ವಿರುದ್ದ ಮಾತನಾಡುತ್ತಿರುವ ದ್ವನಿಗಳು.ಎಗ್ಗು ಸಿಗ್ಗಿಲ್ಲದೆ ನನ್ನ ವಿರುದ್ದ ಎದ್ದು ನಿಂತಿರುವುದರಿಂದ. ನಾನು […]
ಅಂಕಣ ಸಂಗಾತಿ ನೆನಪಿನದೋಣಿಯಲಿ ವರ್ತನೆಯವರು ಪ್ರಲಾಪಿಸಬೇಡ ನೆನೆದು ಹಪಹಪಿಸಿ ಕಳೆದುಹೋದದ್ದನ್ನ ಕಾಲ ಏಕಾಏಕಿ ಬಂದು ಮೇದದ್ದನ್ನ ನೆನೆ ಇದನು ಮರೆಯದೆ ಲುಕ್ಸಾನಿಗೆದೆ ಮರುಗದೆ ಕಳೆದುಕೊಂಡದ್ದು ನಿನ್ನೊಡನೆ ಇದ್ದಷ್ಟು ದಿನ ಹಿಗ್ಗ ನೀಡಿದ್ದನ್ನ ಕೆ ಎಸ್ ನಿಸಾರ್ ಅಹ್ಮದ್ ಅಂದು ವಾಯುವಿಹಾರ ಮುಗಿಸಿ ಬಂದ ರವೀಶ್ “ನೋಡು ದಿನಾ ಹಾಲಿನ ಪ್ಯಾಕೆಟ್ ತೊಗೋತಿದ್ನಲ್ಲ ಪಾಪ ಆ ವ್ಯಕ್ತಿ ಕರೋನಾ ಬಂದು ಹೋಗಿ ಬಿಟ್ನಂತೆ ಪಾಪ” ಎಂದು ಪೇಚಾಡಿಕೊಂಡರು. ಯಾಕೋ ನನಗೆ ಥಟ್ಟಂತ ನನ್ನ ಬಾಲ್ಯ ನೆನಪಾಯಿತು. ಅಂದು ನನ್ನ […]
ಬಿ.ಶ್ರೀನಿವಾಸರ ಹೊಸ ಕವಿತೆಗಳು
ಬೊಗಸೆ ನೀರಿಗಾಗಿ
ಮೈಮೇಲೆ ಮಲ ಸುರುವಿಕೊಂಡ ದಿನ
ಮತ್ತೆ
ಹುಟ್ಟುತ್ತಲೇ ಇರುತ್ತಾರೆ
ನಾನು ನಿನ್ನಂತೆ ಆಗಬೇಕ್ಕಿತ್ತು
ನಾನು ಸಹಿಸಿಕೊಂಡಿದ್ದೆನೆ.
ಅವರಿವರ ಎದುರು ದ್ವನಿಯತ್ತದೆ
ಕಾತ್ಯಾಯಿನಿ ಕುಂಜಿಬೆಟ್ಟು ಇವರಿಗೆ ‘ ಡಾ. ಡಿ. ಎಸ್ ಕರ್ಕಿ ಕಾವ್ಯ ಪ್ರಶಸ್ತಿ
ಕಾವ್ಯ ಸಂಗಾತಿ ಅಪ್ಪ ಲೀಲಾ ಅ ರಾಜಪೂತ ಅಪ್ಪ ಎಂದರೆ ತ್ಯಾಗ ಮೂರ್ತಿ.ಭರವಸೆಯ ಪರ್ವತಬದುಕಿನ ದಾರಿಗೆ ಜ್ಯೋತಿಯಾವ ಪದಕೆ ನಿಲುಕದ ಸವ್ಯಸಾಚಿ…..ಮೌನಿಯಾಗಿಯೇನೋವುನುಂಗುವ ಸಾಗರ..ಅಳುವ ನುಂಗಿ ನಗುವ ಜೀವಬೆಟ್ಟದಷ್ಟು ತಪ್ಪು ಮಾಡಿದರೂಕ್ಷಮಿಸುವ ಹ್ರದಯವಂತ…. ಹಿತನುಡಿಗಳಿಂದ ನಮ್ಮನೂತಿದ್ದಿ,ಬಾಳ ರೂಪಿಸುವ ಶಿಲ್ಪಿ.ಅವನ ಭದ್ರ ಕೋಟೆಯಲಿನಾವೆಲ್ಲರೂ ಸುರಕ್ಷಿತ ಪದಗಳಿಗೆಟುಕದ ಮಹಾಕಾವ್ಯ ಮನೆಗೌರವ,ಸ್ವಾಭಿಮಾನಕೆಧಕ್ಕೆ ಬಂದರೆ ಪ್ರಳಯ ಇತದಣಿವೆನ್ನದೇ ದುಡಿದರೂನಮ್ಮ ಮೊಗ ಕಂಡೊಡನೆಎಲ್ಲ ಮರೆತು ನಗುವಾತ…. ಕೋಪತಾಪದಲಿಯೂ ಸಂತೈಸಿಆಸರೆಯಾಗಿ,ಬೆನ್ನು ಸವರುತನಮ್ಮ ಬದುಕಿನ ಛಾವಣಿ ಆತಮಗಳ ಮದುವೆಯಲಿ ದು:ಖಎದೆಯಲಿ ಅವಿತು ಕೊಂಡಾತಯಾರಿಗೂ ಕಾಣದಂತೆ ಅಶ್ರು ಸುರಿಸಿದಾತ….. ನಮ್ಮ […]
ಪುಷ್ಪಲತಾದಾಸ್ ಅವರು ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಗಾಂಧಿವಾದಿ ಮತ್ತು ಅಸ್ಸಾಂನ ಶಾಸಕಿಯೂ ಕೂಡ ಆಗಿದ್ದರು
ಸರಣಿ ಬರಹ ಅಂಬೇಡ್ಕರ್ ಓದು ಎಡ್ವಿನ್ ಆರ್.ಎ.ಸೆಲಿಗ್ಮನ್ ಶಿಷ್ಯ ಅಂಬೇಡ್ಕರ್ ಎಡ್ವಿನ್ ಆರ್.ಎ.ಸೆಲಿಗ್ಮನ್ ರವರು ಅಂದಿನ ಕಾಲದ ವಿಶ್ವವಿಖ್ಯಾತ ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರರು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಎಷ್ಟು ಅಚ್ಚುಮೆಚ್ಚಿನ ಶಿಷ್ಯರೆಂದರೆ ಪ್ರೊ. ಸೆಲಿಗ್ಮನರು ಯಾವುದೆ ವರ್ಗದ ಕೊಠಡಿಯಲ್ಲಿ ಬೋಧಿಸುತ್ತಿರಲಿ ಅಲ್ಲಿ ಅವರ ಬೊಧನೆ ಆಲಿಸಲು ಅಂಬೇಡ್ಕರರು ಹಾಜರಿರುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಅದರ ಬಗ್ಗೆ ಚಿಂತನೆ ಮಾಡಿದಾಗ ಸಂಶೋದನೆಯ ಸರಳ ವಿಧಾನ ಯಾವುದೆಂಬುದು ತಿಳಿಯುವುದು ಎಂದು ಅಂಬೇಡ್ಕರರಿಗೆ ಸಂಶೋದನೆಯ ಸರಳ […]