ಕಾವ್ಯ ಸಂಗಾತಿ
ಸೊಂಡೂರಿನಲ್ಲೊಂದು ದಿನ
ಅವರ ರಕ್ಕಸ ಯಂತ್ರಗಳು ಬಾಯಿ ಹಾಕುವಾಗ
ಒಣಗಿದ ಹೊಲದಲ್ಲೂ ಬೆಳೆಯಿತ್ತು ಅಲ್ಲಲ್ಲಿ
ಮೊದ ಮೊದಲು
ರಸ್ತೆಗಳಲಿ ಕುಳಿತು ಪ್ರತಿಭಟಿಸಿದರು
ಹೊತ್ತು ನಡೆದಾಗಲೂ
ನಗ್ಗಿದ ಪಾತ್ರೆಯಲಿ
ಕುದಿವ ಅನ್ನವಿತ್ತು
ಕೆಂಪುಕಾಲಿನ ಟ್ರಕ್ಕುಗಳು ತಯಾರಾಗಿ ನಿಂತಿದ್ದವು
ಹೊತ್ತು ನಡೆಯಲು!
ಮಾತು ಸತ್ತ ದಿನ ಇನ್ನೇನು ಉಳಿದೀತು?
ಹಸಿದ ಮಕ್ಕಳು
ಈಗ
ಮನೆಯ ಕೆಡವುತ್ತಿದ್ದಾರೆ
ಬುನಾದಿಗೆ
ಅಜ್ಜ ಹಾಕಿದ ಕಲ್ಲು-ಮಣ್ಣೂ
ಲೋಹದದಿರಂತೆ!
ಆಹಾ!
ಈಗೀಗ
ಚಳವಳಿಗಳ ಹತ್ತಿಕ್ಕುವುದು ಎಷ್ಟೊಂದು ಸುಲಭ!
ಸಂವಿಧಾನ
ಶೌಚಗುಂಡಿಯಿಂದ ಮೇಲೇಳದೆ
ಮತ್ತೂ ಕೆಲವರು
ಬೊಗಸೆ ನೀರಿಗಾಗಿ
ಮೈಮೇಲೆ ಮಲ ಸುರುವಿಕೊಂಡ ದಿನ
ಮತ್ತೆ
ಹುಟ್ಟುತ್ತಲೇ ಇರುತ್ತಾರೆ
ಕೆಲವರಂತೂ
ಹೂಳುವಾಗಲೂ ಮತ್ತೆ ಮತ್ತೆ ಸಾಯುತ್ತಾರೆ.
ಹೀಗೆ
ಮತ್ತೆ ಹುಟ್ಟಿ,
ಮತ್ತೆ
ಸಾಯುವಾಗ
ಉಸಿರಾಡಲು ಕೊಸರಾಡುತ್ತದೆ.
ಸಂವಿಧಾನ!
———————–
ಬಿ.ಶ್ರೀನಿವಾಸ
ಮಾತು ಸತ್ತ ದಿನ
ಸುಂದರ ಕವಿಗಳು ಸರ್
ತುಂಬಾ ಚೆನ್ನಾಗಿದೆ ಸರ್,