ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾನು ನಿನ್ನಂತಾಗಬೇಕಿತ್ತು

ಶಾಂತಲಾ ಮಧು

Indian army Pictures, Indian army Stock Photos & Images | Depositphotos®

ಗಾಳಿ ಚಳಿಗೆ ಮೈಯೊಡ್ಡಿ
ಮೈಮನವ ಹಿಂಡಿ
ಉಸಿರು ನಿಟ್ಟುಸಿರಗಳ ನಡುವೆ
ನಗುವಂತೆ ಇದ್ದೂ ನಡುಗಿ
ಮರೆತಂತೆಇದ್ದೂ
ಮರುಗಿ ಮಮಕಾರ
ಪ್ರೀತಿ ಜ್ವಾಲಯಲಿ
ಬೆಂದು ಬಿರುಸಾಗಿ
ಎದೆಯೊಡ್ಡುವ
ವೀರ

ನಾನು ನಿನ್ನಂತೆ ಆಗಬೇಕಿತ್ತು.

ಕಟ್ಟಿದ ಕನಸುಗಳ
ಪಕ್ಕಕಿಟ್ಟಿಟ್ಟು
ಪಣತೊಟ್ಟು
ದೇಶ ಭಕ್ತಿಯ ಉದ್ಗಾರದಲಿ

ಉಸಿರಾಡಿ ಶ್ರದ್ಧೆ ಸಾಹಸಕೆ
ಮೈಉಜ್ಜಿ
ರಕ್ತದ ಕಣ ಕಣದಲ್ಲು
ಸಮರ್ಪಣೆಯ
ಉಸಿರು …. ಕೊನೆಉಸಿರ
ಅಂಗೈಯಲಿ ಕಟ್ಟಿ
ಹೋರಾಡುವ

ವೀರ
ನಾನು ನಿನ್ನಂತೆ ಆಗಬೇಕಿತ್ತು
ಈ ಕ್ಷಣದ ಬದುಕ ಬದುಕಿ
ನಾಡ ಸಂರಕ್ಷಣೆಯ
ಪಣತೊಟ್ಟು
ನಾಳೆಯ ಕನಸ ಅಗೆಯುತ್ತ ಒಮೊಮ್ಮೆ
ಬದುಕ ಬಂಡಿಯ
ಕರುಳ ಬಳ್ಳಿಯ
ಮನದ ಮಾತದ
ಮೆಲುಕು ಹಾಕುತ
ಬಂದೆ….
ಬರುವೆ..
ಭರವಸೆಯ ಭಾವನೆಯಲಿ
ಬದುಕುತ ಸರದಾರ
ಸಾಹಸಿ ಬಾಳುಬಾಳಿ
ನಕ್ಷತ್ರದಲಿ ಒಂದಾಗಿ
ನೀನು ನೀನಾಗಿ
ಮೆರೆವ ವೀರ
ನಿನಗಿದೋ ನನ್ನ
ಅಶ್ರುಧಾರೆಯ
ನಮನ
ವೀರ
ನಾನು ನಿನ್ನಂತೆ ಆಗಬೇಕಿತ್ತು


About The Author

Leave a Reply

You cannot copy content of this page

Scroll to Top