ಕಾವ್ಯ ಸಂಗಾತಿ
ಅಪ್ಪ
ಲೀಲಾ ಅ ರಾಜಪೂತ
ಅಪ್ಪ ಎಂದರೆ ತ್ಯಾಗ ಮೂರ್ತಿ.
ಭರವಸೆಯ ಪರ್ವತ
ಬದುಕಿನ ದಾರಿಗೆ ಜ್ಯೋತಿ
ಯಾವ ಪದಕೆ ನಿಲುಕದ ಸವ್ಯಸಾಚಿ…..
ಮೌನಿಯಾಗಿಯೇನೋವು
ನುಂಗುವ ಸಾಗರ..
ಅಳುವ ನುಂಗಿ ನಗುವ ಜೀವ
ಬೆಟ್ಟದಷ್ಟು ತಪ್ಪು ಮಾಡಿದರೂ
ಕ್ಷಮಿಸುವ ಹ್ರದಯವಂತ….
ಹಿತನುಡಿಗಳಿಂದ ನಮ್ಮನೂ
ತಿದ್ದಿ,ಬಾಳ ರೂಪಿಸುವ ಶಿಲ್ಪಿ.
ಅವನ ಭದ್ರ ಕೋಟೆಯಲಿ
ನಾವೆಲ್ಲರೂ ಸುರಕ್ಷಿತ ಪದಗಳಿಗೆಟುಕದ ಮಹಾಕಾವ್ಯ
ಮನೆಗೌರವ,ಸ್ವಾಭಿಮಾನಕೆ
ಧಕ್ಕೆ ಬಂದರೆ ಪ್ರಳಯ ಇತ
ದಣಿವೆನ್ನದೇ ದುಡಿದರೂ
ನಮ್ಮ ಮೊಗ ಕಂಡೊಡನೆ
ಎಲ್ಲ ಮರೆತು ನಗುವಾತ….
ಕೋಪತಾಪದಲಿಯೂ ಸಂತೈಸಿ
ಆಸರೆಯಾಗಿ,ಬೆನ್ನು ಸವರುತ
ನಮ್ಮ ಬದುಕಿನ ಛಾವಣಿ ಆತ
ಮಗಳ ಮದುವೆಯಲಿ ದು:ಖ
ಎದೆಯಲಿ ಅವಿತು ಕೊಂಡಾತ
ಯಾರಿಗೂ ಕಾಣದಂತೆ ಅಶ್ರು ಸುರಿಸಿದಾತ…..
ನಮ್ಮ ಬದುಕಿನ ಬಂಡಿಯ
ನೊಗ ಎಳೆಯುವಾತ
ನಮ್ಮರಕ್ಷಾ ಕವಚವಾಗಿ
ಅವನಾದ ಹಿಮಾಲಯ ಪರ್ವತ …
ಅಪ್ಪ, ನಮ್ಮ ಭಾಗ್ಯ ದಾತ
ಕೋಟಿ ನಮನ ನಿನಗೆ ಜನ್ಮದಾತ,ಜನ್ಮದಾತ