ಕಾವ್ಯ ಸಂಗಾತಿ

ಹೆಂಗರುಳು

ರಜಿಯಾ ಕೆ ಭಾವಿಕಟ್ಟಿ

ನಾನು ತುಂಬಾ ಸಹಿಸಿದ್ದೆನೆ.
ನೀನು ಸುಮ್ಮನೆ ಸಹಿಸಿಬಿಡು

ನಾನು ತುಂಬಾ ಸಹಿಸಿದ್ದೆನೆ.
ಅತ್ತ ತವರಲ್ಲಿ ತಂಗಿದಾಗಲೊಮ್ಮೆ
ಅಂಗಿಸಿದವರೆನ್ನೆಲ್ಲ ನನ್ನವರೆಂದು ನಾನು ಸಹಿಸಿಕೊಂಡಿದ್ದೆನೆ. ನೀನು ಸುಮ್ಮನೆ ಸಹಿಸಿಬಿಡು.||

ನಾನು ಸಹಿಸಿದ್ದೆನೆ ದೊಡ್ಡವರಷ್ಟೇ ಅಲ್ಲ. ಚಿಕ್ಕವರು ಸಹಿತ ನನ್ನ ಅಸಾಯಕತೆಯ ಪರಿಸ್ಥಿತಿಯನ್ನು ಕಂಡು ಹಿಯಾಳಿಸಿ ನಕ್ಕರು ನಾ ಸಹಿಸಿದ್ದೆನೆ.ನೀನು ಸುಮ್ಮನೇ ಸಹಿಸಿಬಿಡು ||

ನಾನು ಸುಮ್ಮನೇ ಸಹಿಸಿಕೊಂಡಿದ್ದೆನೆ.
ಒಡಳೊಳಗೆ ಸಾವಿರ ನೋವಿದ್ದರು
ಇತರರೊಂದಿಗೆ ನಾ ನಕ್ಕು ನಲಿದು
ಇವಳಿಗೆ ಮಹಾ ಜಂಬ ಎಂದು ಜರಿದರು ನಾ ಸಹಿಸಿ ಸುಮ್ಮನಿದ್ದೆನೆ.
ನೀನು ಸುಮ್ಮನಿದ್ದುಬಿಡು ||

ನಾನು ಸಹಿಸಿಕೊಂಡಿದ್ದೆನೆ
ಸಂಸಾರದ ಸಾಗರದಲ್ಲಿ ಈಜುತ್ತಾ ಈಜುತ್ತಾ ಎಲ್ಲಾ ಭಾರಗಳನ್ನು ಹೊತ್ತು ರಟ್ಟೆ ಸವೆದರು ನಾ ಸೋತು ಸುಮ್ಮನಿದ್ದೆನೆ. ನೀನು ಸುಮ್ಮನಿದ್ದುಬಿಡು ||

ನಾನು ಸಹಿಸಿಕೊಂಡಿದ್ದೆನೆ.
ಅವರಿವರ ಎದುರು ದ್ವನಿಯತ್ತದೆ.
ಅವರಂತೆ ತಾಳ ತಮಟೆಗಳನ್ನು ಬಡಿದು ನುಡಿದು ಬಿಗುಮಾನಗಳನ್ನು
ಬದಿಗೊತ್ತಿ ಬದುಕುತ್ತಿದ್ದೆನೆ.
ನೀನು ಸಮ್ಮನೆ ಸಹಿಸಿಬಿಡು

ಬಾನಗಲ ರೆಕ್ಕೆ ಕಟ್ಟುವ ಕನಸಕಂಡು
ಭೂಮಿಯ ತಪದಲ್ಲೆ ಹಳೆಯ ನೆನಪುಗಳನ್ನು ಮರೆಮಾಚಿ ವಾಸ್ತವದೊಟ್ಟಿಗೆ ಬದುಕಿ ಬಸವಳಿದು ನಿರಾಳತೆಯ ಅಮಲಲ್ಲಿ
ನಾ ಸಹಿಸಿಕೊಂಡಿದ್ದೆನೆ.
ನೀನು ಸಹಿಸಿ ಸುಮ್ಮನಿದ್ದುಬಿಡು ||

ಸಹಿಸಿಕೊಂಡದ್ದರಲ್ಲಿ ಏನು ಸಿಹಿಕಾಣದು ಆದರು ಸಹಿಸಿ ಸಹಿಸಿ
ಸಾಮ್ಯತೆಗೆ ಸ್ವಲ್ಪ ಹತ್ತಿರವಾಗಿದ್ದೆನೆ.
ನೀನು ನನ್ನಂತೆ ಎಲ್ಲವ ಸಹಿಸಿ ಸುಮ್ಮನಿದ್ದುಬಿಡು ಇರುವುದು ಮೂರು ದಿನ ಮಾತ್ರವೇ ಅಲ್ಲವೇ…||


One thought on “

Leave a Reply

Back To Top