ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ […]

ಹಾವಿನ ಹಾಸಿಗೆಯಾದರೂ ವಿಷಕ್ಕೆ ಅಂಜದೇ ಕೇದಿಗೆಯ ಪರಿಮಳ ಹೊಮ್ಮಿದೆ
ಅನ್ಯಭಾವವಲ್ಲದ ಅನ್ವಯ ಮನಕ್ಕೆ ಹೇಳಲಾರದೆ ಕಲೆತಿವೆ ಇಬ್ಬನಿಯ ಮುತ್ತು

ಹೃದಯದ ಪಿಸುಮಾತು ಕೇಳಿ ನಗುಬರುತಿದೆಯೇ ಕೇಶವಾ ನಿನಗೆ
ಉದಯ ರವಿಯ ಕಾಣುವ ಸೊಗಸಿಗೆ ಬೆಳ್ಮುಗಿಲ ಮೋಡವ ಸರಿಸಿದೆಯಲ್ಲ ನೀನು

ಕಾವ್ಯ ಸಂಗಾತಿ ಎದೆಗೊಳದ ಸ್ಪೂರ್ತಿ ಪುಷ್ಪಾ ಮಾಳ್ಕೊಪ್ಪ ಎದೆಗೊಳದಿ ತುಂತುಂಬಿತುಳುಕಿರಲು ಗೈವಛಲಚಿಮ್ಮದಿಹುದೇ ಸ್ಪೂರ್ತಿ ಚಿಲುಮೆಯಾಗಿ |ಧೈರ್ಯವೂ ಜೊತೆಗಿರಲುಗೆಲುವು ಬೆಂಬಿಡದಿಲ್ಲಿಹಿಂದೆ ಸರಿಯುವುದು ಹಿನ್ನಡೆಯು ಇಲ್ಲಿ || ಮೂಡಿರಲು ಮನದಲ್ಲಿಕನಸ ಕಾಮನಬಿಲ್ಲುಮುದ ನೀಡಿಹುದು ಬಾನ ಚಿತ್ತಾರ ನೋಡಾ |ಶಕ್ತಿ ಯುಕ್ತಿಯು ನರನ ನಾಡಿಯಲಿ ಹರಿದಿರಲುಸರಿದಿಹುದು ಪಕ್ಕದಲಿ ಕಪ್ಪು ಮೋಡಾ || ಓಟದಲಿ ಸರಿಸಮಕೆ ಯಾರಿಲ್ಲ ಮೀರಿಸಲುಮೇಘಾಳಿಗಳೆ ನಾಚಿ ಸ್ಥಬ್ಧವಾಗಿಹವು |ವಿಕಲಾಂಗನಲ್ಲನಿವ ಸಕಲ ಬಲ ಸಂಪೂರ್ಣಮಾದರಿಯು ಮನುಜಕುಲಕೆ ಚಣಚಣವು || ಆಂತರ್ಯದಾಶಯವೆಲ್ಲಹೊಮ್ಮಿಹೊರಪುಟಿದಿಹುದುಬಿಂಬಬಿಂಬದ ತುಂಬಅಚ್ಚಳಿಯದೆ |ನಾ ಮುಂದೆ ತಾಮುಂದೆನುವ ಪಾದಗಳೋಟಗುರಿಯ ರೇಖೆಯು ಸನಿಸನಿಹಬರದೆ […]

ಕಾವ್ಯ ಸಂಗಾತಿ ಗಜಲ್ ಪ್ರಕಾಶಸಿಂಗ್ ರಜಪೂತ್ ಜೀವಿಗೆ ನೋವಿನಾ ಅಭ್ಯಾಸ ಬೇಕುಜೀವನಕ್ಕೆ ತನ್ನದೇ ಇತಿಹಾಸ ಬೇಕು ಊಟದಾ ಅತಿರೇಕ ರೋಗಕ್ಕೆ ಮೂಲವೋದೇಹಕ್ಕೆ ಅದಕ್ಕಾಗಿ ಉಪವಾಸ ಬೇಕು ಕಣ್ಣಲ್ಲಿ ಹೊಸತನದ ಬಯಕೆ ನಿತ್ಯವಿಲ್ಲಿದೇಹಕ್ಕೆ ಆಕರ್ಷಿಸುವ ವಿನ್ಯಾಸ ಬೇಕು ನಿತ್ಯವೆ ಜಗದಿ ಬದಲಾವಣೆಯ ಬಯಕೆಅರಳಲು ಮನ ಹೂವಿಗೆ ಮಧುಮಾಸ ಬೇಕು ಬಿಸಿಲುಗಾಳಿಯ ಮಧ್ಯೆ ತೃಷೆಯು ತಣಿಸಲುಮಳೆಯಲಿ ಮನ ನೆನೆಯುವ ಉಲ್ಲಾಸ ಬೇಕು ಆಶಾ ಚಕ್ರದಿ ತಿರುಗಿ ಸೋತಿದ ಚಾಂಚಲ್ಯಕೆ“ಪ್ರಕಾಶ”ಕೊನೆಯ ಘಟ್ಟಲಿ ಸನ್ಯಾಸ ಬೇಕು

Back To Top