ಕಾವ್ಯ ಸಂಗಾತಿ
ಗಜಲ್
ಮಾಜಾನ್ ಬಾನು
ಸ್ಪರ್ಶಿಸುವ ತವಕ ಬೆಸೆಯುವ ಮನದ ಭಾವನೆಗಳು ಬಿಗಿದಿವೆ ಇಬ್ಬನಿಯ ಮುತ್ತು
ಕಸುಕು ಒಲುಮೆಯ ಮಿಡಿತ ಮೀಟಿ ರಾಗಗಳು ಬೆರೆತಿವೆ ಇಬ್ಬನಿಯ ಮುತ್ತು
ಮಧುವಿನ ಮಡುವಿನಲ್ಲಿ ತೇಲಾಡಿಸಿ ನಲಿವಿನಲ್ಲಿ ಮೈ ಮರೆತು ಸಿಕ್ಕಿವೆ ಸುಳಿಯಲ್ಲಿ
ಅನ್ಯೋನ್ಯಭಾವಗಳಲ್ಲಿ ತಡೆ ಇಲ್ಲದ ಪ್ರೀತಿಯಲ್ಲಿ ಸೆಳೆದಿವೆ ಇಬ್ಬನಿಯ ಮುತ್ತು
ಬೇರೆಯವರಿಂದ ಕಲಿತ ಕಳೆದು ಕೂಡುವ ಢಾಯೀ ಅಕ್ಷರ ಪ್ರೇಮ ಇದು ಅಲ್ಲ
ಅಭೂತಪೂರ್ವ ಸಾವಿರ ಗುಟ್ಟು ಮುಚ್ಚಿಟ್ಟು ಹೇಳದೇ ಅಪ್ಪಿವೆ ಇಬ್ಬನಿಯ ಮುತ್ತು
ಹಾವಿನ ಹಾಸಿಗೆಯಾದರೂ ವಿಷಕ್ಕೆ ಅಂಜದೇ ಕೇದಿಗೆಯ ಪರಿಮಳ ಹೊಮ್ಮಿದೆ
ಅನ್ಯಭಾವವಲ್ಲದ ಅನ್ವಯ ಮನಕ್ಕೆ ಹೇಳಲಾರದೆ ಕಲೆತಿವೆ ಇಬ್ಬನಿಯ ಮುತ್ತು
ಅನುವರತ ಮಿಡಿತ ಹೃದಯಕ್ಕೆ ಬಡಿತ ಹೇಳಿ ಕೊಟ್ಟವರು ಯಾರು ” *ಮಾಜಾ “
ಬಿಡುವಿಲ್ಲದ ನೆಪಗಳು ನವಿರಾದ ನವಿಲು ನರ್ತನ ಹೆಣೆದಿವೆ ಇಬ್ಬನಿಯ ಮುತ್ತು