ಕಾವ್ಯ ಸಂಗಾತಿ

ಎದೆಗೊಳದ ಸ್ಪೂರ್ತಿ

ಪುಷ್ಪಾ ಮಾಳ್ಕೊಪ್ಪ

Making art to create a hopeful nation - The Red Circle

ಎದೆಗೊಳದಿ ತುಂತುಂಬಿ
ತುಳುಕಿರಲು ಗೈವಛಲ
ಚಿಮ್ಮದಿಹುದೇ ಸ್ಪೂರ್ತಿ ಚಿಲುಮೆಯಾಗಿ |
ಧೈರ್ಯವೂ ಜೊತೆಗಿರಲು
ಗೆಲುವು ಬೆಂಬಿಡದಿಲ್ಲಿ
ಹಿಂದೆ ಸರಿಯುವುದು ಹಿನ್ನಡೆಯು ಇಲ್ಲಿ ||

ಮೂಡಿರಲು ಮನದಲ್ಲಿ
ಕನಸ ಕಾಮನಬಿಲ್ಲು
ಮುದ ನೀಡಿಹುದು ಬಾನ ಚಿತ್ತಾರ ನೋಡಾ |
ಶಕ್ತಿ ಯುಕ್ತಿಯು ನರನ ನಾಡಿಯಲಿ ಹರಿದಿರಲು
ಸರಿದಿಹುದು ಪಕ್ಕದಲಿ ಕಪ್ಪು ಮೋಡಾ ||

ಓಟದಲಿ ಸರಿಸಮಕೆ ಯಾರಿಲ್ಲ ಮೀರಿಸಲು
ಮೇಘಾಳಿಗಳೆ ನಾಚಿ ಸ್ಥಬ್ಧವಾಗಿಹವು |
ವಿಕಲಾಂಗನಲ್ಲನಿವ ಸಕಲ ಬಲ ಸಂಪೂರ್ಣ
ಮಾದರಿಯು ಮನುಜಕುಲಕೆ ಚಣಚಣವು ||

ಆಂತರ್ಯದಾಶಯವೆಲ್ಲ
ಹೊಮ್ಮಿ
ಹೊರಪುಟಿದಿಹುದು
ಬಿಂಬಬಿಂಬದ ತುಂಬ
ಅಚ್ಚಳಿಯದೆ |
ನಾ ಮುಂದೆ ತಾ
ಮುಂದೆನುವ ಪಾದಗಳೋಟ
ಗುರಿಯ ರೇಖೆಯು ಸನಿಸನಿಹಬರದೆ ||


Leave a Reply

Back To Top