
ಕಾವ್ಯ ಸಂಗಾತಿ
ನೀ ಬಳಿ ಇದ್ದರೆ

ನನ್ನೆಲ್ಲ ಬೇಸರಗಳ
ಬದಿಗಿರಿಸಿ ನಕ್ಕುಬಿಡುವೆನು
ನಲ್ಲ ನೀ ಬಳಿ ಇದ್ದರೆ
ಎದೆಯ ಸೀಳುವ
ನೋವನೂ ಮರೆತುಬಿಡುವೆನು
ನಲ್ಲ ನೀ ಬಳಿ ಇದ್ದರೆ
ಮುಳ್ಳುಗಳ ದಾರಿಯಲ್ಲಿ
ಹೂವಂತೆ ನಡೆದುಬಿಡುವೆನು
ನಲ್ಲ ನೀ ಬಳಿ ಇದ್ದರೆ
ಸೋಲಿನ ಬಾಳಿಗೂ
ಗೆಲುವ ತೋರಿಸಿಬಿಡುವೆನು
ನಲ್ಲ ನೀ ಬಳಿ ಇದ್ದರೆ
ಒಲವು

ಅರ್ಥ ಪೂರ್ಣ
ಥ್ಯಾಂಕ್ಯು