ಕಾವ್ಯ ಸಂಗಾತಿ
ಲೋಕ ಅರಳುವ ಕಾಲ
ಬಿ.ಶ್ರೀನಿವಾಸ್
ರಾತ್ರಿಗಳೆಂದೂ ನಿದ್ರಿಸುವುದಿಲ್ಲ
ಕಾಯುತ್ತವೆ ಬೆಳಕಿಗಾಗಿ
ಅವಳ ಹಾಗೆ
ಬೇಯಿಸಬೇಕಿದೆ ನಿತ್ಯ
ವಿನಯ,ಪ್ರೀತಿ ಮತ್ತು ತ್ಯಾಗ
ಆವಿಯಾಗುವ ತನಕ.
ಹೂವು
ಅರಳುವ ಪ್ರತಿಕ್ಷಣವೂ ಅವಳದ್ದೇ ಕಾಲ!
ಜಾಲಿ ಹೂಗಳ ಮೌನ
ತುಂಬೆ ಹೂಗಳ ಪಿಸುಮಾತು
ಕೂಡ ಅವಳದೆ
ಅರಳುವುದಾದರೆ ಹೂವು
ಅವಳ ಮುಗುಳ್ನಗೆಯ ಸದ್ದಿಗೆ,
ನಕ್ಕುಬಿಡಲಿ ಮನಸಾರೆ…
ಲೋಕ ಅರಳುವುದು!
ಬಡಿದರೆ ರೊಟ್ಟಿ
ತಟ್ಟಿದರೆ ಮುದ್ದೆ
ರೂಪು ಪಡೆಯುವುದು ಭೂಮಿ
ಅವಳಿಗೂ ಉಂಟು
ಭೂಮಿಯ ನಂಟು!
ಯಾರು ಹೇಳಿದರು
ಸ್ವಂತ ಕಾಲವಿಲ್ಲವೆಂದು?
ಸುಂದರ ಕವಿತೆ ಸರ್
ತಮ್ಮ ಕವಿತೆಯಲ್ಲಿ
ಕಾಲವೂ ಅರಳಲು
ಪಕ್ವವಾದಂತೆ
ಅನಿಸುತ್ತಿದೆ ಸರ್
ಕಾಯುತ್ತಿವೆ ಬೆಳಕಿಗಾಗಿ
ಅವಳ ಹಾಗೆ
ಬ್ಯುಟಿಫುಲ್
ಕವಿಯ ಕಲ್ಪನೆ ವರ್ಣಮಯವಾಗಿದೆ