ಕಾವ್ಯ ಸಂಗಾತಿ
ಸವಿತಾ ದೇಶಮುಖ
“ತಂಪಾಯ್ತು ಮನ”


ನಿಚ್ಚ ನೆಚ್ಚಿನ ನಿರಂತ ಕಾಯಕದೋಳು
ನಿರ್ವಂಚನೆಯ ನೀತಿ ನಿಯಮದೋಳು
ಮಗ್ನ ಮೈಮನ ಮರೆತ ಬಾಳಿನೋಳು !!೧!!
ನಿತ್ಯ ಸತ್ಯದಿ ಜೀವಿಸುತ್ತಿರುವರಿಗೂ
ಕಾಲುಂಟು, ಶಾಂತಿ ಬಾಳ್ವೆ ಬಾಳುವರಿಗೂ
ಸತ್ಯದ ನಡೆಯ ನಂಬಿ ನಡೆಯುವರಿಗೂ!!೨!!
ಬೆಲೆಯ ಕಟ್ಟಲುಂಟು,ಪ್ರಜ್ಞೆಯ ಪ್ರಕಾಶ
ಕ್ರಿಯಾ ನಿಷ್ಠೆಯ ಪರಾಕಾಷ್ಟೆ ತುಂಬ ಕಳಶ
ನಿಷ್ಕಲ್ಮಶ್ಯ.., ಆತ್ಮವೇ ನಿಧಿ ಕೋಶ !!೩!!
ಇದನರಿತವರ ನಡೆ ನುಡಿ ಆಚಾರ ಪರಮ
ಪಥದತ್ತ ಬೆಳೆದು ನಿಂದ ವಿಚಾರ ಚರಮ
ಮನವು ಹರ್ಷತುಂಬಿದ ತುಳಕು- ಕರ್ಮ !!೪!!
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲಿ
ಸುಳ್ಳೇನಲ್ಲ ….ಧರ್ಮ ಸಕ್ರಿಯೆಯಲಿ
ನಿತ್ಯ ನಿರತರು ಸು ಪ್ರಶನ್ನ ದುಡಿಮೆಯಲಿ!!೫!!
ಇರುವವರ ಕಂಡ ಮನ ಕುಣಿದಾಡಿತ್ತ
ಚರಿತೆಯ ಪರಿಪೂರ್ಣತೆ ಮಟ್ಟ ತುಂಬಿತ್ತ
ನಯನ ಭಾಷ್ಪ ತನ್ನಿಂದ ತಾನೇ ಜಾರಿತ್ತ!!೬!!
ಜಗವು ಬರೀ ವಂಚನೆ ದ್ರೋಹ ಕಂತೆನಲ್ಲ
ಸೋತವರ ಸುಲಿಗೆ ನಡೆವ ಅಂಗಳವೆನಲ್ಲ
ಬರೀ ಮೋಸ ಸಂಚಿನ ಮನೆಯಲ್ಲ !!೭!!
ನೈಜ ಸಹಿಷ್ಣತೆ ಬಾಂಧವ್ಯದ ಜನರಲಿ
ಜಾಗೃತಿಯ ಅರಿವುವಿನ ಧಾರೆ ಎರೆವರಲಿ
ಇನ್ನೂ ಜೀವಂತವಾಗಿದೆಯಲ್ಲ… !!೮!!
ಸತ್ಯ ಕಾಯಕದ ನಿಷ್ಠೆ ಇರುವ ಮನಗಳು ಶುದ್ಧಾತ್ಮಗಳೊಂದಿಗೆ ಜಗವು ಸಾಗುತಿದೆ
ಮುಂದೆಮುಂದೆ ಕಂಡಾತ್ಮವು ತಂಪಾಯತ!!೯!!
ಮನ ತಂಪಾಯ್ತ ನೋಡಾ….
ಸವಿತಾ ದೇಶಮುಖ



