ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಎದೆ ಗೂಡಲಿ ಬಚ್ಚಿಟ್ಟ ಕನಸುಗಳಿಗೆ ಲೆಕ್ಕವೇ ಇಲ್ಲ
ಬಿರಿದ ಭಾವನೆಗಳ ನೋಟಗಳಿಗೆ ಲೆಕ್ಕವೇ ಇಲ್ಲ

ಸುಳಿ ಗಾಳಿಯಲಿ ಒಮ್ಮೆಯೂ ಪಿಸುಗೂಡಬಾರದೆ
ಹಿಡಿದಿಟ್ಟ ಬಯಕೆಗಳು ನೀಲ ನೀಲಿಯಲಿ ಸೇರುವ ಸಾಲಿಗೆ ಲೆಕ್ಕವೇ ಇಲ್ಲ

ಮೋಹ ಮಧುವಿಗೆ ವಾಸ್ತವವೇ ಮರೆತು ಬಿಟ್ಟಿರುವೆ
ತೀರದ ಬಯಕೆಗಳ ಹರಿವ ನೀರಿಗೆ ತೇಲುವ ದಾರಿಗೆ  ಲೆಕ್ಕವೇ ಇಲ್ಲ

ಮಾಮರ ಕೋಗಿಲೆ ಮೂಕ ಮರ್ಮರ ತಾಳಿದೆ
ಕಟ್ಟಿದ ಗೋಪುರಕೆ ಕಳಸ ಬಿದ್ದು ಶೋಕಗೀತೆಗೆ ಲೆಕ್ಕವೇ ಇಲ್ಲ

ಒಲವ ಭಾವದ ವೀಣೆ ತಂತಿ ನುಡಿಸುವುದೇ ಮರೆತು ಬಿಟ್ಟಿದೆ
ಕಹಿ ಬೇವು ಜಗಿಯುತ ರೇಶಿಮೆ ದೂಡುವ ದಿನಗಳಿಗೆ ಲೆಕ್ಕವೇ ಇಲ್ಲ.


About The Author

Leave a Reply

You cannot copy content of this page

Scroll to Top