ಪುಸ್ತಕ ಸಂಗಾತಿ
ಪ್ರಭುರಾಜ ಅರಣಕಲ್
ರಾಜಶೇಖರ ಕುಕ್ಕುಂದಾ
“ಬಿಸಿ ಬಿಸಿ ಬಾತು”
ಒಂದು ಅವಲೋಕನ,
ತಮ್ಮಪ್ರತಿ ಪದ್ಯಕ್ಕೆ ನವೀಕರಿಸುವ ಕವಿ


ನೃಪತುಂಗನನೆಲದ , ಕಲಬುರಗಿ ಜಿಲ್ಲೆಯ ಸೇಡಂತಾಲ್ಲೂಕಿನ ಕುಕ್ಕುಂದಾ ಗ್ರಾಮದರಾಜಶೇಖರಕುಕ್ಕುಂದಾ ಅವರು ಕುರಿತೋದುತ್ತ ‘ಮಕ್ಕಳಕವಿತೆಗೆ’ ಅಪ್ಪಿಕೊಂಡು, ಒಪ್ಪಿಕೊಂಡವರು.- ಚೆಲುವ ಚಂದಿರ, ಗೋಲಗುಮ್ಮಟ, ಪುಟಾಣಿ ಪ್ರಾಸಗಳು, ಸೋನಪಾಪಡಿ, ಶೀರ್ಷಿಕೆಗಳ ನಾಲ್ಕು ಮಕ್ಕಳ ಕವಿತಾ ಸಂಕಲನಗಳನ್ನು ಪ್ರಕಟಿಸಿ, ಕನ್ನಾಡಿನ ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ‘ಬಿಸಿಬಿಸಿ ಬಾತು’ ಅವರ ಐದನೆಯ ಕೃತಿ. ಇದನ್ನು ಪ್ರಕಟಿಸಿದ್ದು ಬೆಂಗಳೂರಿನ ‘ಅವ್ಯಕ್ತ ಪ್ರಕಾಶಾನದ’ ವಸುವತ್ಸಲೆಯವರು. ಕ್ರೌನ್ 1/4 ಆಕಾರದ, ಕೃತಿಯ ಸುಂದರ ಮುಖಪುಟದವಿನ್ಯಾಸದಲ್ಲಿ – ಕಣ್ಸೆಳೆಯುವ ‘ಕಾಮನಬಿಲ್ಲು’ ಕುಂಚಿಸಿದವರು’ ಸೌಮ್ಯ ಕಲ್ಯಾಣಕರ್ ಅವರು. ‘ಹೋದೆಯಾ ದೂರ ಓ ಜೊತೆಗಾರ ಸೇರಲು ಬಂದಾಗ, ನೀ ಅರಿಯದೆ ಹೋದೆ ಪ್ರೇಮದನಾ ಸಂದೇಶವ ತಂದಾಗ’ ಅನುಭವ ಸಿನೆಮಾದ, ವಾಣಿಜಯರಾಮ್ ಹಾಡಿದ, ಗೀತೆ ರಚಿಸಿದ ಖ್ಯಾತ ಸಂಗೀತ ನಿರ್ದೇಶಕ, ನಟ, ವಿ. ಮನೋಹರ್ ಅವರು ಇಲ್ಲಿನ -26 ಪದ್ಯಗಳಿಗೆ, 7 ಪುಟಾಣಿ ಪ್ರಾಸಗಳಿಗೆ – ಒಟ್ಟು 33 – ಪದ್ಯಗಳ ಭಾವಕ್ಕೆ ಹೋಲುವ ಸುಂದರ ಚಿತ್ರ ಗಳನ್ನು ರಚಿಸಿದ್ದು, ‘ಉತ್ತಮರೇಖಾ ಚಿತ್ರ ಕಲಾವಿದರಾಗಿ’ ಹೊರಹೊಮ್ಮಿದ್ದಾರೆ. ಒಳ ಪುಟದ ವಿನ್ಯಾಸ ಕಲ್ಲೂರ ನಾಗೇಶ ಅವರದು.
‘ ಕವಿಯಾಗಿದ್ದುಕೊಂಡೇ ಮಕ್ಕಳ ಜಾಗದಲ್ಲೂ ನಿಲ್ಲುವುದು ಸಾಧ್ಯವಾದಾಗಷ್ಟೇ “ಬಿಸಿಬಿಸಿ ಬಾತು”ಸಂಕಲನದಲ್ಲಿ ಇರುವವಂಥ ರಚನೆಗಳು ಮೈದಳೆಯುವುದು ಸಾಧ್ಯ’ ವೆಂದು ಬೆನ್ನುಡಿಯಲ್ಲಿ ಲೇಖಕ ಪತ್ರಕರ್ತ ರಘುನಾಥ ಚ. ಹ. ಅವರು ಉಲ್ಲೇಖಸಿದ್ದಾರೆ.
“ಮಕ್ಕಳಕಾವ್ಯ ನನಗೆ ಇಷ್ಟವಾದ ಪ್ರಕಾರ. ಇದಕ್ಕೂ ನನಗೂ ಬಾಲ್ಯದಿಂದಲೇ ಬಿಟ್ಟೂಬಿಡದ ನಂಟು. ನನ್ನ ರಚನೆಗಳೆಲ್ಲ ಹೆಚ್ಚಾಗಿ ನಾನು ಕಾಪಿಟ್ಟು ಕೊಂಡುಬಂದ ನನ್ನಹಳ್ಳಿ ಮತ್ತು ಶಹರ ಜೀವನದ ಬಾಲ್ಯದ ಅನುಭವಗಳಿಂದ ಪ್ರೇರಣೆ ಪಡೆದವುಗಳೇ. ಅದೇಕೋ ನಾನು ಮಾತ್ರ ಮಕ್ಕಳ ಕಾವ್ಯ ರಚನೆಗಷ್ಟೇಸೀಮಿತನಾದೆ.”ಎಂದು, ‘ಸವಿಯುವಮುನ್ನ’ ಎಂಬ – ತಲೆಬರಹದ ಲೇಖಕನಮಾತುಗಳಲ್ಲಿ, ಕುಕ್ಕುಂದಾ ಅವರು ಹೇಳಿಕೊಂಡಿದ್ದಾರೆ. ಕವಿಯ ಈ ಹೇಳಿಕೆಯಲ್ಲಿ – ಒಂದು ಹಗುರ ತಳಮಳಿಕೆ ಇಣುಕಿದೆ. ಈ ತಳಮಳಿಕೆಗೆ ತಳ್ಳಿಹಾಕುವ ಒಂದು ಅತ್ಯಾಶ್ಚರ್ಯಕರವಾದ ಖಾಸಾ ಹೊಳಪನ್ನು ಇವರ ಮಕ್ಕಳಕಾವ್ಯ ದಕ್ಕಿಸಿಕೊಂಡಿದೆ ಎಂಬುದನ್ನು ಕನ್ನಡ ಮಕ್ಕಳ ಸಾಹಿತ್ಯವಲಯ, ಹಾಗೂ ಕರ್ನಾಟಕಸಾಹಿತ್ಯಅಕಾಡೆಮಿಕೂಡ ಗುರುತಿಸಿದೆ.
ಕನ್ನಡ ಹಾಗೂ ಮರಾಠಿ ಪಠ್ಯ ಪುಸ್ತಕಗಳಲ್ಲಿ, ಮತ್ತು ಶಿಶುಗೀತೆಯ ಆಲ್ಬಮ್ ಗಳಲ್ಲಿ ಇವರ ಕವಿತೆಗಳು ಸೇರಿವೆ.ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಹಲವುಬಾರಿ ಬಹುಮಾನ ಪಡೆದಿವೆ. ಹಲವು ಸಂಸ್ಥೆಗಳ ಪ್ರಶಸ್ತಿಗಳ ಸಂಖ್ಯೆ ದೊಡ್ಡದು.- ಅವುಗಳಲ್ಲಿ ಮುಖ್ಯವೆನಿಸುವ ಪ್ರಸ್ತುತ “ಬಿಸಿ ಬಿಸಿ ಬಾತು” ಕೃತಿಗೆ – 2024 ನೇ ಸಾಲಿನ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮತ್ತು 2024 ನೇ ಅಬ್ದದ ಕರ್ನಾಟಕ ಸಾಹಿತ್ಯ ಅಕಾಡೆಮಿಯಪುಸ್ತಕಬಹುಮಾನಕ್ಕೆ”ಬಿಸಿಬಿಸಿಬಾತು”ಆಯ್ಕೆಯಾಗಿದೆ.
ಪ್ರಸ್ತುತ ಕೃತಿಯ ಪದ್ಯಗಳ ಬಗ್ಗೆ
ಮೊದಲಕವಿತೆ ಹಬ್ಬ- ಹೀಗೆ ಪ್ರಾರಂಭವಾಗುತ್ತದೆ.
ಹೂವು ಅರಳಿ ನಿಂದಿದೆ
ದುಂಬಿ ಹಾರಿ ಬಂದಿದೆ
ಬಿಸಿಲು ಮಳೆಯು ಕೂಡಿದೆ
ಮಳೆಯಬಿಲ್ಲು ಮೂಡಿದೆ!
ಹೌದು, ಬಿಸಿಲು ಮಳೆಯು ಕೂಡಿದಾಗಲೇ, ಇಂದ್ರಚಾಪ ಮೂಡುವುದೆಂಬ ಬಣ್ಣನೆಯಲ್ಲಿ – ಈಕೃತಿಯ ಮುಖಪುಟದಲ್ಲಿನ ಸೌಮ್ಯ ಕಲ್ಯಾಣಕರ್ ಅವರ ‘ಕಾಮನಬಿಲ್ಲು’ ಚಿತ್ತಾರ ಗಮನಿಸಬಹುದು.
ಆನೆ – ಕವಿತೆಯಲ್ಲಿ, – ಆನೆ ಬಹಳ ದೊಡ್ಡದು, ಅದರಬಾಲ ಗಿಡ್ಡದು /ಕಣ್ಣು ಸಣ್ಣ ಸಣ್ಣದು, ಚರ್ಮ ಬೂದು ಬಣ್ಣದು; ಉದ್ದದೊಂದು ಸೊಂಡಿಲು, ದಿಮ್ಮಿ ಎತ್ತಿ,ಕೊಳ್ಳಲು,/ ಅಗಲ ಅಗಲ ಕಿವಿಗಳು, ಗಾಳಿಬೀಸಿ ಕೊಳ್ಳಲು; ಹೀಗೆ ಮಕ್ಳಳು ಓದಿ – ನಕ್ಕು ನಲಿಯಲು ಪೂರಕವಾದ ಶಬ್ದ ಪಂಜಗಳು ಕೃತಿಯುದ್ದಕ್ಕೂ ಮನಸೆಳೆಯುತ್ತವೆ. ಸೊಳ್ಳೆ, ನಾಯಿಮರಿ ಬಾಬಾ,ಗಡಿಯಾರ,ನಮ್ಮಮನೆಅಂದ, ದಂತಹಪದ್ಯಗಳುಮಕ್ಕಳಲ್ಲದೆ ಕಾವ್ಯ ಪ್ರಿಯ ದೊಡ್ಡವರಲ್ಲೂ ಉಲ್ಲಾಸ ತುಂಬಬಲ್ಲವು. ‘ನಿದ್ದೆ ಎಲ್ಲಿ ಇರುವುದು’ ಪದ್ಯದಲ್ಲಿ ‘ಕ್ಲಾಸಿನಲ್ಲಿ ಕಾಡಲಿಕ್ಕೆ ಧುತ್ತನೆಂದು ಬರುವುದು /ಪಾಠ ಕೇಳುವಾಗ ತನ್ನ ಆಟ ನಡೆಸುತಿರುವುದು! / ಹಗಲಿ ನಲ್ಲಿ ಚಂದ್ರತಾರೆ ಗಳನು ತೂರಿಬಿಡುವುದು /ಸಿನೆಮದಂತೆ ಕನಸುಗಳನು ತಲೆಗೆ ತೂರಿಬಿಡುವುದು… ಶಾಲೆಯಲ್ಲಿ ಡೆಸ್ಕಿನಮೆಲೆ ಕುಳಿತ ಚಿಣ್ಣರ ಚಿತ್ರಣವಿದು.- ಸಹಜ ಹಾಗೂ ನೈಜತೆಗೆ ಪಕ್ಕಾದ ರಚನೆ; ಬಾರೋ ಬಾರೋ ಮಳೆರಾಯ, ಡ್ರೈವರ ಅಣ್ಣ, ಐಯ್ಯಾಮ್ ವೆರಿ ಸಾರಿ, ಯಾಕೆ ಹೀಗೆ? ಗುಲಾಬ್ ಜಾಮೂನ್, ಪದ್ಯಗಳು ಮಕ್ಕಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.
ಈಕೃತಿಯಶಿರೋನಾಮೆಯಪದ್ಯ’ಬಿಸಿಬಿಸಿಬಾತು’ಮಕ್ಕ ಳಲ್ಲದೆ, ಓದುಗರೆಲ್ಲರಬಾಯಿಯಲ್ಲಿ ನೀರೂರಿಸುವ “ರಚನೆ.ಬಿಸಿಬಿಸಿಬಾತು, ಕೇಸರಿಬಾತು ಬಾಯ್ತೆಗಿ ಚಿನ್ನು ಗಪ್ ಚುಪ್ ತಿನ್ನು /ಬಿಸಿಬಿಸಿ ಬಾತು ಟೊಮೆeಟೊe ಬಾತು ಬಾಯ್ತೆಗಿ ಚಿನ್ನು ಗಪಚುಪ್ ತಿನ್ನು -ಎಂದು ತಾಯಿ ತನ್ನ ಪುಟ್ಟಕಂದನಿಗೆ – ಬಿಸಿಬೇಳೆಬಾತು, ವಾಂಗೀ ಬಾತು, ಚೌ ಚೌ ಬಾತು ತಿನ್ನಿಸಿ – ಕೊನೆಗೆ, ತಾಯಿ ಮಗನಿಗೆ – ಬಿಸಿ ಬಿಸಿ ಬಾತು ತಿಂದದ್ದಾತು, ಚಿನ್ನು ಚಿನ್ನು, ನಿದ್ದೆಮಾಡಿನ್ನು!ಎಂಬಲ್ಲಿಗೆ ಕವಿತೆ ಮುಕ್ತಾಯ ಗೊಳ್ಳುತ್ತದೆ.ಇನ್ನೂ ಇಂತಹ ಮನಮಿಡಿಯುವ ಪದ್ಯಗಳು ಈ ಕೃತಿಯಲ್ಲಿವೆ.
ರಾಜಶೇಖರ ಎಂಬ ಈ ಎಂಜಿನಿಯರಿಂಗ್ ಮೇಷ್ಟ್ರರ ಪುಟಾಣಿ ಪ್ರಾಸಗಳ ಗಮ್ಮತ್ತೆe ಬೇರೆಯದು. ತನ್ನದೇ ಮುದ್ರೆ ಹೊಂದಿದ ರಚನೆಗಳಿಗೆ ಒತ್ತುಕೊಟ್ಟು – ಪುಟಾಣಿಪ್ರಾಸಗಳಿಗೆ ಮೀಸಲಾದ ಪದ್ಯ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿ ಯಲ್ಲಿ ಕಾಡೆಲ್ಲಿ? ಎಂಬ ಮುಕ್ತಕದಲ್ಲಿ -“ಕಾಡಿಗೆ ಹೋಗೋ ರಾಮ – ಸೀತೆ – ಈಗೆಲ್ಲಿ? ಈಗೆಲ್ಲಿ? /ಒಂದು ವೇಳೆ ಇದ್ರು ಅನ್ಕೊ ಕಾಡೆಲ್ಲಿ? ಕಾಡೆಲ್ಲಿ?/.. ಇಲ್ಲಿ – ಕಾಡಿಲ್ಲದ ನಾಡಿನ ಭೀಭತ್ಸ ಚಿತ್ರಣ ವಿದೆ. ‘ಒಂದು ಎರಡು’ – ಪದ್ಯ, ಒಂಭತ್ತು ಹತ್ತರ ವರೆಗೆ ಪವಣಿಸಿಕೊಂಡ ಪರಿ ನೋಡಿ.” ಒಂದು ಎರಡು ಸೇರಿ ಆಟ ಆಡ್ತಿದ್ವು /ಮೂರು ನಾಲ್ಕುಸೆರಿ ಪಾಠ ಕೇಳ್ತಿದ್ವು /ಐದು ಆರು ಸೇರಿ ಊಟ ಮಾಡ್ತಿದ್ವು/ ಏಳು ಎಂಟು ಸೇರಿ ಜಗಳ ಆಡ್ತಿದ್ವು / ಒಭತ್ತು ಹತ್ತು ಸೇರಿ ನಿಂತು ನೋಡ್ತಿದ್ವು! ಇಂತಹ ನಿರ್ವಚನಗಳ ಮೋಡಿಯು – ಬಹುತೇಕ ಪುಟಾಣಿ ಪ್ರಾಸಗಳಲ್ಲಿ ಹಾಸುಹೊಕ್ಕಾಗಿವೆ.ಇರ್ವೆಗೆ ನೆಗಡಿ ಬಂದ್ರೆ? ಪದ್ಯದ ಗುಣ ಲಾವಣ್ಯವು ವೈಚಿತ್ರ್ಯ ಗಳಿಂದ ಕೂಡಿದೆ.ಇರ್ವೆಗೆ ನೆಗಡಿ ಬಂದ್ರೆ ಮೂಗುಹೇಗೆ ಒರ್ಸೋದು /ಮೈ ತಿಂಡಿಬಿಟ್ರೆ ಹೇಗಪ್ಪಾತುರ್ಸೋದು?ಕಿರಿಕಿರಿ ಮಾಡ್ದ್ರೆ ನಿದ್ದೆಹೇಗೆ ಬರ್ಸೋದು? ಹುಷಾರು ಇಲ್ದೆ ಹೋದ್ರೆ ಯಾರನ್ನ ಕರ್ಸೋದು? ಹೇಗಪ್ಪ ಬಾಯಿ ತೆರ್ಸಿ ಗುಳ್ಗೆನುಂಗ್ಸೋದು? ರಕ್ತನಾಳಹುಡ್ಕಿಹುಡ್ಕಿ ಸಲೈನ್ ಏರ್ಸೋದು?…ಇವರ ಆಲೋಚನಾ ಲಹರಿಯಲ್ಲಿ ‘ವಸ್ತುನವೀನತೆ’ ಇದೆ . ಇರುವೆಗೆ ನರನಂತೆ ಪರಿಕಿಸುವಪರಿ – ಇಲ್ಲಿ ಅಚ್ಚರಿ ಗೊಳಿಸುತ್ತದೆ!
°°°
ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಂಯೋಜಿತ ಪ್ರಾಧ್ಯಾಪಕರಾಗಿ ಸುದೀರ್ಘಸೇವೆಸಲ್ಲಿಸಿದ ಕುಕ್ಕುಂದಾ ಅವರು ಪ್ರಸಕ್ತ ವರ್ಷದ ಜುಲೈ 31 ಕ್ಕೆ, ತಮ್ಮ ಸೇವಾ ಹುದ್ದೆಯಿಂದ ನಿವೃತ್ತಿಹೊಂದಲಿದ್ದಾರೆ. ಎಡೆಬಿದದ ಬೋಧಕವೃತ್ತಿ ಯಲ್ಲಿಯಲ್ಲಿದ್ದೂ ಐದು ಕವಿತಾ ಸಂಕಲನ ಪ್ರಕಟಿಸಿ – ತಮ್ಮ ರಚನೆಗಳಲ್ಲಿ ನವೀಕರಣಕ್ಕೆ ಒತ್ತುಕೊಡುತ್ತ ಬಂದ ಈ ಕವಿ ಸದ್ಯ ಕಟ್ಟುಬಿಡಿಸಿಕೊಂಡಿದ್ದು, ಮುಂದಿನ (Re-tired) ಅವಧಿಯಲ್ಲಿನ ಇವರ ಕಾವ್ಯದ ಬೆಳವಣಿಗೆ ಇನ್ನೂ ಹೊಸತಿನಿಂದ ಪಡಿಮೂಡುತ್ತಿರಲಿ ಎಂದು ಮನದುಂಬಿ ಹಾರೈಸುವೆ.
ಪ್ರಭುರಾಜ ಅರಣಕಲ್




