ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ

ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರುರವರು ಸನ್ 2025ನೇ ಸಾಲಿನ ಪುಸ್ತಕ ಸೊಗಸು ಮುದ್ರಣ ಸೊಗಸು ಯೋಜನೆ ಅಡಿಯಲ್ಲಿ ಪುಸ್ತಕ ಗಳನ್ನು ಆಯ್ಕೆ ಮಾಡಲಾಗಿದ್ದು. ಹಿರಿಯ ಕವಿ, ಪ್ರಕಾಶಕ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯ ಕವನ ಸಂಕಲನದ ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.               ನಿರಂತರ ಪ್ರಕಾಶನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿ ಗಳನ್ನು ನೀಡಿದ ಮಕಾನದಾರ ಅವರ ಅಕ್ಕಡಿ ಸಾಲು ಮತ್ತು ಪ್ಯಾರಿ ಪದ್ಯ ಸಂಕಲನಗಳ ಕವಿತೆಗಳು  ಆರು ಭಾಷೆಗಳಿಗೆ ತರ್ಜುಮೆಗೊಂಡಿದ್ದು. ಕುವೆಂಪು ವಿಶ್ವ ವಿದ್ಯಾಲಯ, ವಿಜಯ ನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿಗಳಿಗೆ ಮತ್ತು ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವ ವಿದ್ಯಾಲಯ ಹಾಗೂ ಪುಣ್ಯ ಶ್ಲೋಕ ಅಹಲ್ಯಬಾಯಿ ಹೋಳ್ಕರ್ ವಿಶ್ವ ವಿದ್ಯಾಲಯಗಳಿಗೆ ಗಜಲ್ ಪಠ್ಯ ಪುಸ್ತಕ ದಲ್ಲಿ ಸೇರ್ಪಡೆಗೊಂಡಿವೆ.           ಬೀದರ್ ಜಿಲ್ಲೆ ಬೇಲೂರ್ ಉರಿಲಿಂಗ ಪೆದ್ದಿ ಸಂಸ್ಕೃತಿ ಕ ವೇದಿಕೆ ಯ ರಾಜ್ಯಮಟ್ಟದ ಅತ್ಯುತ್ತಮ ಪ್ರಕಾಶನ ಪುರಸ್ಕಾರ ನಿರಂತರ ಪ್ರಕಾಶನಕ್ಕೆ ಲಭಿಸಿದ್ದನ್ನಿಲ್ಲಿ ಸ್ಮರಿಸ ಬಹುದು ದರ್ವೇಶಿ ಪದ್ಯ ಒಡಲ ಸಂಕಟದ ಆಯ್ದ ಪದಗಳ ಕಟ್ಟು ಸಂಕಲನದ ಮುಖಪುಟ ಚಿತ್ರ ಕಲಾವಿದ ಈಶ್ವರ. ಬಡಿಗೇರ್ ಅವರು ರಚಿಸಿದ್ದು ನಿರಂತರ ಪ್ರಕಾಶನದಿಂದ ಪ್ರಕಟಣೆಯಾಗಿದೆ. ಸಾಹಿತಿ ಎ ಎಸ್. ಮಕಾನದಾರ ಮತ್ತು ಚಿತ್ರ ಕಲಾವಿದ ಈಶ್ವರ್ ಬಡಿಗೇರ್ ಅವರಿಗೆ ಗದಗ ಜಿಲ್ಲೆಯ ಸಾರಸ್ವತ ಲೋಕದ ಗೆಳೆಯರ ಬಳಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

About The Author

Leave a Reply

You cannot copy content of this page

Scroll to Top